ಮನೆ ಸುದ್ದಿ ಜಾಲ ಗೃಹಲಕ್ಷ್ಮಿ ಯೋಜನೆಗೆ ಜೀವಿತ ಪ್ರಮಾಣಪತ್ರ – ಹೊಸ ನಿಯಮಕ್ಕೆ ಆಕ್ರೋಶ; ಆರ್‌.ಆಶೋಕ್

ಗೃಹಲಕ್ಷ್ಮಿ ಯೋಜನೆಗೆ ಜೀವಿತ ಪ್ರಮಾಣಪತ್ರ – ಹೊಸ ನಿಯಮಕ್ಕೆ ಆಕ್ರೋಶ; ಆರ್‌.ಆಶೋಕ್

0

ಬೆಂಗಳೂರು : ಗೃಹಲಕ್ಷ್ಮಿ ಯೋಜನೆ ಪಡೆಯಲು ಮನೆ ಒಡತಿಯರು ಬದುಕಿರೋ‌ ಸರ್ಟಿಫಿಕೇಟ್ ಕೊಡಬೇಕು ಎಂಬ ನಿಯಮ ಜಾರಿ ಮಾಡಲು ಮುಂದಾಗಿರೋ ಸರ್ಕಾರದ ನಡೆಗೆ ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.

ವಿಧಾನಸೌಧದಲ್ಲಿ ಈ ಬಗ್ಗೆ ‌ಪ್ರತಿಕ್ರಿಯೆ ನೀಡಿದ ಅವರು, ಈ ಸರ್ಕಾರ ಬಂದ ಮೇಲೆ 2 ಲಕ್ಷ ಕೋಟಿ ರೂ. ಸಾಲ ಮಾಡಿದೆ. ಈ ಬಜೆಟ್‌ಗೆ ಮೂರು ಲಕ್ಷ ಕೋಟಿ ರೂ. ಸಾಲ ಆಗುತ್ತೆ. ಅವರ ಬಳಿ ಹಣ ಇಲ್ಲ. ಈಗಾಗಲೇ ‌ರೇಷನ್ ಕಾರ್ಡ್ ಕಟ್ ಮಾಡಿದ್ದಾರೆ. ಇಡೀ ರಾಜ್ಯದಲ್ಲಿ ರೇಷನ್ ಕಾರ್ಡ್ ಕಟ್ ಮಾಡ್ತಾ ಇದ್ದಾರೆ. ಈ ಮೂಲಕ ಗ್ಯಾರಂಟಿ ಕಟ್ ಮಾಡೋಕೆ ಮುಂದಾಗಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಫುಟ್ ಪಾತ್ ವ್ಯಾಪಾರಿಗಳ ಕಾರ್ಡ್ ರದ್ದು ಮಾಡಿದ್ದಾರೆ. ‌ಕಾಂಗ್ರೆಸ್ ‌ತುಘಲಕ್ ಸರ್ಕಾರ ಮಾಡ್ತಿದೆ. ಇದು ಪಾಪರ್ ಸರ್ಕಾರ. ಮುಂದೆ ಇನ್ನು ‌ಕಟ್ ಕಟ್ ಕಟ್ ಮಾಡಿ ಬಡವರ ವಿರೋಧಿ ಆಗಿ ಕೆಲಸ ಮಾಡುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.