ಮನೆ ಅಪರಾಧ ಮೂರನೇ ಗಂಡನಿಗೆ ಜೀವ ಬೆದರಿಕೆ ಹಾಕಿದ ಪತ್ನಿ

ಮೂರನೇ ಗಂಡನಿಗೆ ಜೀವ ಬೆದರಿಕೆ ಹಾಕಿದ ಪತ್ನಿ

0

ಮೈಸೂರು: ಮೂರು ಮದುವೆಯಾಗಿರುವ ಮಹಿಳಯೋರ್ವಳು ತನ್ನ ಮೂರನೇ ಗಂಡನಿಗೆ ಜೀವ ಬೆದರಿಕೆ ಹಾಕಿರುವ ಘಟನೆ ಮೈಸೂರಿನ ಉದಯಗಿರಿಯಲ್ಲಿ ನಡೆದಿದೆ.

ಉದಯಗಿರಿಯ ನಿಧಾ ಖಾನ್  ಎಂಬುವವರು ತನ್ನ 3ನೇ ಗಂಡ ರಾಜೀವ್ ನಗರದ ಅಜಾಮ್ ಖಾನ್ ಗೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈಗಾಗಲೇ ಎರಡು ಮದುವೆಯಾಗಿರುವ ನಿಧಾ ಖಾನ್ ಗೆ, ಟಿಂಡರ್ ಅ್ಯಪ್ ಮೂಲಕ ಅಜಾಮ್ ಖಾನ್  ಪರಿಚಯವಾಗಿತ್ತು. ನವೆಂಬರ್ 2019 ರಲ್ಲಿ ಅಜಾಮ್ ಖಾನ್ ಜೊತೆ ನಿಧಾ ಖಾನ್ ಮೂರನೇ ಮದುವೆಯಾಗಿದ್ದು, ಅಜಾಮ್ ಖಾನ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಆದರೆ ಪತ್ನಿ ನಿಧಾ ಖಾನ್ ಮೂರು ಮದುವೆಯಾದ್ರೂ ಬೇರೆ ಯುವಕರ ಜೊತೆ ಓಡಾಡುತ್ತಿದ್ದು, ಮೂರನೇ ಪತಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾಳೆ. ಪತ್ನಿ ರಂಗಿನಾಟ ಕಣ್ಣಾರೆ ಕಂಡ ಪತಿ ಅಜಾಮ್ ಖಾನ್ ಪತ್ನಿ ಹಾಗೂ ಪ್ರಿಯತಮನನ್ನು ಪೋಲೀಸರಿಗೆ ಒಪ್ಪಿಸಿದ್ದು, ಇದೀಗ ಪತಿ ಅಜಾಮ್ ಖಾನ್ ಗೆ ನಿಧಾ ಖಾನ್ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.