‘ಲಘು’ವೆಂಬ ಪದಕ್ಕೆ ಹಗುರ ಶೀಘ್ರ, ಸುಂದರ,ಸುಲಭ, ರಮ್ಯ ಮತ್ತು ಹೀನ ಎಂಬ ಅನೇಕ ಅರ್ಥಗಳಿವೆ ‘ವಜ್ರ’ವೆಂದರೆ ಇಂದ್ರನ ವಜ್ರಾಯುಧ.
ಅಭ್ಯಾಸ ಕ್ರಮ :
1. ಮೊದಲು, ಮಂಡಿ ಪಾದಗಳನ್ನು ಜೋಡಿಸಿ ನೆಲದಮೇಲೆ ಮೊಣಕಾಲೂರಿ ಕುಳಿತುಕೊಳ್ಳಬೇಕು. ಬಳಿಕ ಅಂಗೈಗಳನ್ನು ಟೊಂಕದ ಇಬ್ಬದಿಗಳಲ್ಲಿಯೂ ಒತ್ತಿರಬೇಕು.
2. ಆಮೇಲೆ,ಉಸಿರನ್ನು ಹೊರಕ ಬಿಟ್ಟು ಬೆನ್ನೆಲುಬನ್ನು ಹಿಂಗಡೆಗೆ ಬಿಲ್ಲಿನಂತೆ ಬಗ್ಗಿಸಿ. ಜೊತೆಯಲ್ಲಿಯೇ ತೊಡೆಗಳ ಮಾಂಸ ಖಂಡಗಳನ್ನು ಬಿಗಿಸಿಡಬೇಕು.
3. ಅನಂತರ ಟೊಂಕಗಳನ್ನು ಮುಂದೂಡಿ, ಬೆನ್ನೆಲುಬನ್ನು ಹಿಂದುಮುಂದಕ್ಕೆ ಬಗ್ಗಿಸುತ್ತ ಬಂದು, ಕಡೆಗೆ ನಡುತಲೆಯನ್ನು ಪಾದಗಳ ಮೇಲೆ ಒರಗಿಸಿಡಬೇಕು.ಅತ್ಯಾವಶ್ಯಕಾವಾದ ಬೆನ್ನೆಲುಬಿನ ಸ್ತಿತ ಸ್ಥಾಪಕತ್ವವನ್ನು ಮೂಡಿಸಲು ಇದನ್ನು ತೀವ್ರವಾಗಿ ಅಭ್ಯಾಸ ಮಾಡಬೇಕು. ಇದರಲ್ಲಿ ಇಡೀ ದೇಹದ ಭಾರವನ್ನು ಮಂಡಿಗಳೇ ವಹಿಸಬೇಕಾಗುತ್ತದೆ.
4. ಮೇಲಿನ ಭಂಗಿಯ ಸ್ಥಿತಿಯನ್ನು ಸಾಧಿಸಿದಮೇಲೆ,ಟೊಂಕದ ಮೇಲಿಟ್ಟ ಕೈಗಳನ್ನು ತೆಗೆದು ಭುಜಗಳಿಂದ ತೋಳುಗಳನ್ನು ನೇರವಾಗಿ ಚಾಚಿ,ಆಯಾ ಕೈಗಳಿಂದ ಆಯಾ ಕಾಲುಗಳ.ಮಂಡಿಗಳನ್ನು ಬಿಗಿಯಾಗಿ ಹಿಡಿದುಕೊಳ್ಳಬೇಕು.
5. ಬೆನ್ನೆಲುಬಿನ್ನ ಹಿಗ್ಗು ವಿಕೆಯಿಂದಲೂ ಕಿಬ್ಬೊಟ್ಟೆಯ ಮೇಲಣ ಒತ್ತಡದಿಂದಲೂ ಉಸಿರಾಟವು ಶ್ರಮದಿಂದ ಕೂಡಿ ವೇಗವಾಗಿ ನಡೆಯುತ್ತದೆ. ಈ ಭಂಗಿಯಲ್ಲಿ ಸಾಮಾನ್ಯ ಉಸಿರಾಟದಿಂದ ಸುಮಾರು 10 15 ಸೆಕೆಂಡುಗಳ ಕಾಲ ನೆಲೆಸಬೇಕು.
6. ಆಮೇಲೆ,ಉಸಿರನ್ನು ಹೊರಕ್ಕೆ ಬಿಟ್ಟು ಮಂಡಿಗಳನ್ನು ಭದ್ರವಾಗಿರಿಸಿ ತಲೆ ಮುಂಡ ಗಳನ್ನು ಮೇಲೆತ್ತಿ,ಮತ್ತೆ ಮೊಣಕಾಲುಗಳನ್ನೂರುವವರೆಗೂ ಬರಬೇಕು. ಆ ಬಳಿಕ ನೆಲದಮೇಲೆ ಕುಳಿತು ಶ್ರಮಿಸಿಕೊಳ್ಳಬೇಕು.
ಪರಿಣಾಮಗಳು :
ಈ ಆಸನವು ಬೆನ್ನೆಲುಬಿನ ಬಳಿಯ ನರಗಳಿಗೆ ಹುರುಪು ಕೊಡುತ್ತದೆ ಮತ್ತು ಬೆನ್ನೆಲುಬಿನ ಕೆಳಭಾಗದ ಕಾಕ್ಸಿಸ್ ಎಂಬ ತ್ರಿಕೋನಾಕಾರದ ತ್ರಿಕಾಸ್ಥಿಗೆ ಒಳ್ಳೆಯ ವ್ಯಾಯಾಮವನ್ನೊಧಗಿಸುತ್ತದೆ.ಈ ಆಸನವನ್ನು ನಿತ್ಯವೂ ಬಿಡದೆ ಅಭ್ಯಸಿಸುವುದರಿಂದ ಇದು ನೋವನ್ನು ಕಳೆಯುವುದಲ್ಲದೆ ಬೆನ್ನೆಲುಬಿನ ಕೆಳಭಾಗದ ಆಸ್ಥಿಯ ಬಿಲ್ಲೆಗಳು ಸ್ಥಾನಪಲ್ಲಟವಾಗಿದ್ದಲ್ಲಿ ಅವನ್ನು ಸರಿಪಡಿಸಲು ನೇರವಾಗುತ್ತದೆ ಬಿಲ್ಲಿನಂತೆ ಬೆನ್ನನ್ನು ಬಗ್ಗಿಸುವುದರಿಂದ ಕಿಬ್ಬೊಟ್ಟೆಯ ಮಾಂಸಖಂಡಗಳೂ ಮತ್ತು ಎದೆಯೂ ಪೂರಾ ಹಿಗ್ಗುತ್ತದೆ.