ನವದೆಹಲಿ: ದೆಹಲಿ ವಿಮಾನ ನಿಲ್ದಾಣದಿಂದ ಶ್ರೀನಗರದತ್ತ ತೆರಳುತ್ತಿದ್ದ ಇಂಡಿಗೋ ಏರ್‌ಲೈನ್ಸ್‌ನ ಪ್ರಯಾಣಿಕರ ವಿಮಾನಕ್ಕೆ ಭಾರಿ ಗಾಳಿ ಮತ್ತು ಮಳೆ ಸಂದರ್ಭದಲ್ಲಿ ಸಿಡಿಲು ಬಡಿದ ಘಟನೆ ಇಂದು ಬೆಳಗ್ಗೆ ನಡೆದಿದೆ. ಅದೃಷ್ಟವಶಾತ್ ವಿಮಾನದಲ್ಲಿ ಇದ್ದ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಘಟನೆಯಿಂದ ವಿಮಾನಕ್ಕೆ ಕೆಲವಷ್ಟು ತಾಂತ್ರಿಕ ಹಾನಿಯಾಗಿದ್ದು, ಹೆಚ್ಚಿನ ಪರಿಶೀಲನೆ ನಂತರ ಮಾಹಿತಿ ಹೊರಬೀಳಲಿದೆ.
ಆದರೆ, ಪೈಲಟ್ ಸಮಯ ಪ್ರಜ್ಞೆ ಹಾಗೂ ತ್ವರಿತ ನಿರ್ಧಾರದಿಂದ ವಿಮಾನವನ್ನು ಹತ್ತಿರದ ಸುರಕ್ಷಿತ ವಿಮಾನ ನಿಲ್ದಾಣಕ್ಕೆ ಲ್ಯಾಂಡ್ ಮಾಡಿಸಲಾಯಿತು. ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರತೆಗೆದು ಅಗತ್ಯ ಸಹಾಯ ನೀಡಲಾಯಿತು.















