ಮನೆ ಅಪರಾಧ ಇನ್ ​ಸ್ಟಾಗ್ರಾಮ್ ​ನಲ್ಲಿ ಯುವತಿಯ ಫೋಟೋಗೆ ಲೈಕ್, ಪ್ರೇಯಸಿಯಿಂದ ತರಾಟೆ: ಪ್ರಿಯಕರ ಆತ್ಮಹತ್ಯೆಗೆ ಶರಣು

ಇನ್ ​ಸ್ಟಾಗ್ರಾಮ್ ​ನಲ್ಲಿ ಯುವತಿಯ ಫೋಟೋಗೆ ಲೈಕ್, ಪ್ರೇಯಸಿಯಿಂದ ತರಾಟೆ: ಪ್ರಿಯಕರ ಆತ್ಮಹತ್ಯೆಗೆ ಶರಣು

0

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ‌ ತಾಲೂಕಿನ ಪೂಂಜಾಲಕಟ್ಟೆ ಕುಕ್ಕಿಪ್ಪಾಡಿಯ ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿದ್ದಾನೆ.

Join Our Whatsapp Group

ಚೇತನ್ (25) ಆತ್ಮಹತ್ಯೆ ಮಾಡಿಕೊಂಡ ಯುವಕ.

ಮೃತ ಚೇತನ್​ಗೆ ಕುಂದಾಪುರದ ಚೈತನ್ಯ ಎಂಬ ಯುವತಿಯು ಇನ್ ಸ್ಟ್ರಾಗ್ರಾಂನಲ್ಲಿ ಪರಿಚಯವಾಗಿದ್ದಳು. ಬಳಿಕ ಇಬ್ಬರ ನಡುವೆ ಸ್ನೇಹ ಬೆಳೆದು, ಸ್ನೇಹ ಪ್ರೀತಿಗೆ ತಿರುಗಿತ್ತು. 8 ತಿಂಗಳ ಹಿಂದೆ ಇಬ್ಬರ ನಿಶ್ಚಿತಾರ್ಥವಾಗಿತ್ತು. ಜನವರಿ 21 ರಂದು ಚೇತನ್ ತನ್ನ ಪರಿಚಯದ ಬೇರೊಂದು ಯುವತಿಯ ಫೋಟೋಗೆ ಇನ್ಸ್ಟಾಗ್ರಾಮ್​ನಲ್ಲಿ ಲೈಕ್ ಕೊಟ್ಟಿದ್ದನು.

ಇದನ್ನು ಪ್ರಶ್ನಿಸಲು ಚೈತನ್ಯ ಭಾವಿ ಪತಿ ಚೇತನ್ ಮನೆಗೆ ಬಂದಿದ್ದರು. ಈ ವೇಳೆ ಚೇತನ್ ಮನೆಯಲ್ಲಿ ಒಬ್ಬರೇ ಇದ್ದರು. ಯುವತಿಯ ಫೋಟೋಗೆ ಲೈಕ್ ನೀಡಿದ್ದಕ್ಕೆ ಚೇತನ್​ನನ್ನು ಚೈತನ್ಯ ತರಾಟೆಗೆ ತೆಗೆದುಕೊಂಡಿದ್ದಳು.

ಇದರಿಂದ ಮನನೊಂದ ಚೇತನ್ ಯುವತಿ ಮನೆಯಲ್ಲಿ ಇರುವಾಗಲೇ ಆತ್ಮಹತ್ಯೆಗೆ ಶರಣಾಗಿದ್ದಾನೆ. ಬಳಿಕ‌ ಚೇತನ್ ತಾಯಿಗೆ ಕರೆ ಮಾಡಿದ ಚೈತನ್ಯ ಮಲಗಿದ್ದಾತ ಮೇಲೆ ಏಳುತ್ತಿಲ್ಲ ಎಂದು ಹೇಳಿದ್ದಾನೆ. ಕೂಡಲೇ ಚೇತನ್​ ತಾಯಿ ಮನೆಗೆ ಬಂದು ನೋಡಿದಾಗ, ಮನೆಯ ಮೆಲ್ಚಾವಣಿಯಲ್ಲಿ ನೇಣು ಬಿಗಿದ ಕುಣಿಕೆ ಸಿಕ್ಕಿತ್ತು. ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.