ಮಂಡ್ಯ:-ಪಾಂಡವಪುರ ತಾಲ್ಲೂಕಿನ ಚಿನಕುರುಳಿ ಗ್ರಾಮದ ಹಿಂಪೋಕ್ಯಾಂಪಸ್ ಪೂರ್ವ ಪ್ರಾಥಮಿಕ ಶಾಲೆ ಹಾಗೂ ಕ್ಯಾತನಹಳ್ಳಿ ಗ್ರಾಮದ ಹಿಂಪೋಕ್ಯಾಂಪಸ್ ಪೂರ್ವ ಪ್ರಾಥಮಿಕ ಶಾಲೆಗಳು ಕರ್ನಾಟಕ ಶಿಕ್ಷಣ ಕಾಯ್ದೆ 1983 ಸೆಕ್ಷನ್ 30-31 ಪ್ರಕಾರ ಶಾಲಾ ಶಿಕ್ಷಣ ಇಲಾಖಾ ವತಿಯಿಂದ ನೊಂದಣಿ ಪಡೆಯದೆ ಪಡೆಯದೆ ನಿಯಾಮಾಬಾಹಿರವಾಗಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ನಡೆಸುತ್ತಿರುವುದು ಕಂಡುಬಂದಿರುತ್ತದೆ ಈ ಹಿನ್ನಲೆಯಲ್ಲಿ ಸದರಿ ಶಾಲೆಗಳನ್ನು ಅನಧಿಕೃತ ಶಾಲೆಗಳ ಪಟ್ಟಿಗೆ ಸೇರಿಲಾಗಿದೆ ಎಂದು ಪಾಂಡವಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ಪೊಷಕರು ಮಕ್ಕಳನ್ನು ಅನಧಿಕೃತ ಶಾಲೆಗೆ ದಾಖಲಾತಿ ಮಾಡಬಾರದು. ಒಂದು ವೇಳೆ ದಾಖಲು ಮಾಡಿದ್ದಲ್ಲಿ ಸಂಬಂಧಿಸಿದ ಪಾಲಕರೇ ಜವಾಬ್ದಾರರು ಎಂದು ಪಾಂಡವಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.