ಎಲ್ಲ ಶಕುನಗಳಲ್ಲಿ ಹಲ್ಲಿಯ ಶಕುನಕ್ಕೆ ಜ್ಯೋತಿಷ್ಯ ಶಾಸ್ತ್ರದಲ್ಲಿ ವಿಶೇಷ ಪ್ರಾಧಾನ್ಯತೆಯಿದೆ. ಹಲ್ಲಿ ಶಕುನದ ಬಗ್ಗೆ ದೇಶದ ಎಲ್ಲ ಕಡೆಗೂ ನಂಬಿಕೆಯಿದೆ ಮತ್ತು ಪ್ರತ್ಯಕ್ಷ ಪ್ರಮಾಣವೂ ಇದೆ. ಆದರೆ ಹಲ್ಲಿಯ ಶಕುನದ ಫಲಗಳನ್ನು ಹೇಳುವವರು ಸಚ್ಚಾರಿತ್ರ್ಯವುಳ್ಳವರು, ವೃತ ನೇಮಾದಿಗಳನ್ನು ಪಾಲಿಸತಕ್ಕವರು ಸದಾಚಾರಿಗಳೂ ಆಗಿರಬೇಕು ಹಾಗೂ ಗುರುಹಿರಿಯರಲ್ಲಿ ಜ್ಯೋತಿಷ್ಯ ಶಕುನ ಶಾಸ್ತ್ರಗಳಲ್ಲಿ ನಂಬಿಗೆ-ಶ್ರದ್ಧೆಯನ್ನಿಟ್ಟವರೂ ಆಗಿರಬೇಕು. ಹಲ್ಲಿ ಶಕುನದ ಫಲಗಳನ್ನು ಸಿಕ್ಕ ಸಿಕ್ಕವರು ಹೇಳಿದರೆ ಫಲಕಾರಿಯಾಗಲಾರವು. ಈ ಶಾಸ್ತ್ರಫಲ ಹೇಳತಕ್ಕವರೂ ನಿಷ್ಠೆ – ವೃತ ಪಾಲಿಸುವವರಿರಬೇಕೆಂಬ ನಿಯಮವಿದೆ ತಿಳಿಯಿರಿ, ವಿಶ್ವಾಸವಿಲ್ಲದೆ ಕೇಳಿದವರಿಗೂ, ದೈವಭಕ್ತಿ ವೃತಾಚಾರಗಳನ್ನು ನಡೆಸದೆ ಹೇಳುವವರಿಗೂ ಫಲಗಳು ಸಿದ್ಧಿಸಲಾರವು. ಈ ಹಲ್ಲಿ ಶಕುನದ ಬಗ್ಗೆ ವಿವರವಾದ ಶಾಸ್ತ್ರ-ವಿವರಣೆಯಿದೆ. ಆದರೆ ನಾವಿಲ್ಲಿ ಸಂಕ್ಷಿಪ್ತವಾಗಿ ಈ ಹಲ್ಲಿಯ ಶಕುನ ಶಾಸ್ತ್ರವನ್ನು ವಿವರಿಸಿದ್ದೇವೆ.
ಹಲ್ಲಿಯು ಮೈಮೇಲೆ ಬಿದ್ದ ಫಲವು :
ಹಲ್ಲಿಯು ನೆತ್ತಿಯ ಮೇಲೆ ಬಿದ್ದರೆ ೪ ತಿಂಗಳೊಳಗೆ ತಾಯಿ ತಂದೆಗಳಿಗೆ ಪೀಡೆಯು. ತಲೆಯ ಮೇಲೆ ಬಿದ್ದರೆ ೧೦ ದಿವಸದೊಳಗಾಗಿ ಕೇಡು. ಮೂಗಿನ ಮೇಲೆ ಬಿದ್ದರೆ ೨೧ ದಿವಸದೊಳಗಾಗಿ ಪೀಡಾಕರವು ಮುಂದಲೆಯ ಮೇಲೆ ಬಿದ್ದರೆ ೧ ತಿಂಗಳೊಳಗಾಗಿ * ಶುಭಕಾರ್ಯ ಜರುಗುವದು. ತಲೆಯ ಹಿಂಭಾಗದಲ್ಲಿ ಹಲ್ಲಿಯು ಬಿದ್ದರೆ ೩ ತಿಂಗಳೊಳಗಾಗಿ ಮಾವಂದಿರರಿಗೆ ಅರಿಷ್ಟವು ಸ್ತ್ರೀಯರಿಗೆ ತುರುಬಿನ ಮೇಲೆ ಬಿದ್ದರೆ ೧ ವರ್ಷದೊಳಗೆ ಅರಿಷ್ಟವು. ಹಣೆಯ ಮೇಲೆ ಬಿದ್ದರೆ ೩ ತಿಂಗಳೊಳಗೆ ಲಾಭವು. ಎಡಗಣ್ಣಿನ ಮೇಲೆ ಬಿದ್ದರೆ ೧ ತಿಂಗಳೊಳಗಾಗಿ ಹಾನಿಯು, ಬಲಗಣ್ಣಿನ ಮೇಲೆ ಬಿದ್ದರೆ ೧ ತಿಂಗಳೊಳಗಾಗಿ ಲಾಭವು. ಬಾಯಿಯ ಮೇಲೆ ಬಿದ್ದರೆ ೯ ತಿಂಗಳೊಳಗಾಗಿ ಹಾನಿಯು, ಎಡಗಲ್ಲದ ಮೇಲೆ ಬಿದ್ದರೆ ೧ ವರ್ಷದೊಳಗೆ ಧನಲಾಭವು ಎಡಗಿವಿಯ ಮೇಲೆ ಬಿದ್ದರೆ ಅಲಂಕಾರ ಪ್ರಾಪ್ತಿಯು, ಬಲಗಿವಿಯ ಮೇಲೆ ಬಿದ್ದರೆ ಪೀಡೆ. ಮೂಗಿನ ಮೇಲೆ ಬಿದ್ದರೆ ಧನಹಾನಿಯು, ಮೇಲ್ದುಟಿಯ ಮೇಲೆ ಬಿದ್ದರೆ ಸುಗ್ರಾಸ ಭೋಜನ ಲಾಭ. ಕೆಳದುಟಿಯ ಮೇಲೆ ಬಿದ್ದರೆ ಕಲಹವು ಗದ್ದದಮೇಲೆ ಬೀಳಲು ಮರಣ ಪ್ರದ ಅಪಘಾತ ಭಯ, ಹಲ್ಲುಗಳ ಮೇಲೆ ಬಿದ್ದರೆ ಹಾನಿಯು. ಬಲಮಿಸೆ ಮೇಲೆ ಬಿದ್ದರೆ ಕೇಡು. ಎಡಮೀಸೆಯ ಮೇಲೆ ಹಲ್ಲಿ ಬಿದ್ದರೆ ಸುಖವು, ಗದ್ದದ ಮೇಲೆ ಬಿದ್ದರೆ ಸ್ನಾನತ್ಯಾಗವು. ಬಲದ ಹೆಗಲ ಮೇಲೆ ಬೀಳಲು ಸಂಪತ್ತು ಲಾಭ ಎಡದ ಹೆಗಲ ಮೇಲೆ ಬಿದ್ದರೆ ವೈರಿ ನಾಶವು. ಎಡದ ಭುಜದ ಮೇಲೆ ಬಿದ್ದರೆ ಬಂಧು ಬಾಂಧವರಿಗೆ ಕೇಡು.ಬಲಭುಜದ ಮೇಲೆ ಬೀಳಲು ಬಂಧು ಬಾಂಧವರಿಗೆ ಸುಖವು. ಕೊರಳ ಮಧ್ಯದಲ್ಲಿ ಬಿದ್ದರೆ ಅಲಂಕಾರ ಲಾಭ, ಎಡದ ಕೊರಳಿನ ಮೇಲೆ ಬಿದ್ದರೆ ಚಿಂತೆ, ಪರಿಹಾರ, ಬಲದ ಕೊರಳಿನ ಮೇಲೆ ಬಿದ್ದರೆ ಸಂತೋಷ ಬಲದ ತೋಳಿನ ಮೇಲೆ ಬಿದ್ದರೆ ಲೇಸು ಎಡತೋಳಿನ ಮೇಲೆ ಬೀಳಲು ಕೆಡಕಾಗುವದು. ಬಲದ ಮೊಳಕೈ ಮೇಲೆ ಬೀಳಲು 10 ವರ್ಷದೊಳಗಾಗಿ ಹಾನಿ, ಎಡ ಮೊಳಕೈ ಮೇಲೆ ಹಲ್ಲಿ ಬೀಳಲು ವರ್ಷದೊಳಗೆ ಸಂತೋಷ ಕಾರ್ಯ ನೆರವೇರುವದು ಬಲದ ಮುಂಗೈ ಮೇಲೆ ಬೀಳಲು ೧ ವರ್ಷದೊಳಗೆ ಸುಖದ ಮಾರ್ಗ, ಎಡದ ಮುಂಗೈ ಮೇಲೆ ಬೀಳಲು ೧ ವರ್ಷದೊಳಗೆ ಕೇಡು. ಬಲದ ಮುಂಗೈ-ಮೊಳಕೈ ನಡುವೆ ಬೀಳಲು ರೋಗ ಪ್ರಾಪ್ತಿ. ಬಲದ ಅಂಗೈ ಮೇಲೆ ಬೀಳಲು ದ್ರವ್ಯನಾಶವು, ಎಡದ ಅಂಗೈ ಮೇಲೆ ಬೀಳಲು ದ್ರವ್ಯ ಲಾಭವು ಬಲಗೈ ಬೆರಳುಗಳ ಮೇಲೆ ಬಿದ್ದರೆ ಸೌಖ್ಯವು, ಎಡಗೈ ಬೆರಳುಗಳ ಮೇಲೆ ಬಿದ್ದರೆ ದುಃಖ ಪೀಡೆಯು, ಬಲಗೈ ಹರಡಿನ ಮೇಲಾಗಲೀ, ಎಡಗೈ ಹರಡಿನ ಮೇಲಾಗಲೀ ಹಲ್ಲಿಯು ಬಿದ್ದರೆ ಬಡತನ ಪ್ರಾಪ್ತಿಯು. ಬಲಗೈ ಉಗುರಿನ ಮೇಲೆ ಬಿದ್ದರೆ ದ್ರವ್ಯಲಾಭ, ಎಡಗೈ ಉಗುರುಗಳ ಮೇಲೆ ಬಿದ್ದರೆ ದ್ರವ್ಯನಾಶವು. ಬಲದ ಮೊಲೆಯ ಮೇಲೆ ಬೀಳಲು ಸಂಪತ್ತು ಲಾಭವು ಎಡಧ ಮೊಲೆಯ ಮೇಲೆ ಹಲ್ಲಿಯು ಬಿದ್ದರೆ ೧ ತಿಂಗಳೊಳಗಾಗಿ ದುಃಖಪೀಡೆಯು, ಹೊಟ್ಟೆಯ ಮೇಲೆ ಬೀಳಲು ಮಕ್ಕಳಿಲ್ಲದವರಿಗೆ ಲಾಭಕರವು.. ಸಂತೋಷವು. ಮಕ್ಕಳಿದ್ದವರಿಗೆ ದುಃಖಕರ ಎದೆಯ ಮೇಲೆ ಬಿದ್ದರೆ ೧ ವರ್ಷದೊಳಗೆ ಸಂತಾನ ಭಾಗ್ಯ ಲಭಿಸುವದು. ಹೊಕ್ಕಳ ಮೇಲೆ ಬೀಳಲು ಸೌಖ್ಯವು. ಬಲದ ಬದ್ದಿಯ ಮೇಲೆ ಬೀಳೆಲು ಸ್ನೇಹ ಸಂಪಾದನೆಯ ಲಾಭ, ಎಡದ,ಬದ್ದಿಯ ಮೇಲೆ ಹಲ್ಲಿಯು ಬಿದ್ದರೆ ಸರಕಾರದ ಕಿರಿಕಿರಿ. ಹಲ್ಲಿಯು ಬೆನ್ನಿನ ಮೇಲೆ ಬೀಳಲು ೨ ವರ್ಷದೊಳಗೆ ಅಣ್ಣ-ತಮ್ಮಂದಿರು ಅಸೌಖ್ಯ-ಪೀಡೆಯು. ನಡದ ಮೇಲೆ ಬೀಳಲು ೪ ತಿಂಗಳೊಳಗಾಗಿ ಧನಲಾಭವು ಎಡದ ಕುಂಡಿಯ ಮೇಲೆ ಬೀಳಲು ದ್ರವ್ಯನಾಶವು, ಕಿಬ್ಬೊಟ್ಟಿಯ ಮೇಲೆ ಬೀಳಲು ಮಕ್ಕಳಿದ್ದವರಿಗೆ ಹಾನಿಯು, ಸೀರೆಯ ನೆರಿಗೆಯ ಮೇಲೆ ಬೀಳಲು ಒಳ್ಳೇದಾಗುವದು. ಟೊಂಕದ ಮೇಲೆ ಬೀಳಲು ವಸ್ತ್ರಲಾಭವು. ಎಡ ಟೊಂಕದ ಮೇಲೆ ಬೀಳಲು ಕೇಡುಂಟಾಗುವದು. ಬಲ ತೊಡೆಯ ಮೇಲೆ ಬೀಳಲು ದ್ರವ್ಯ ಲಾಭವು. ಎಡ ತೊಡೆಯ ಮೇಲೆ ಬೀಳಲು ಮಕ್ಕಳಿಲ್ಲದ ತೊಂದರೆ ಮನಃಕ್ಲೇಶವುಂಟು, ಬಲದ ಮೇಲೆ ಬೀಳಲು ವಾಹನ ಲಾಭವು. ಎಡ ತಿಗದ ಮೇಲೆ ಬೀಳಲು ಕೇಡುವುಂಟಾಗುವದು. ಬಲದ ಮೊಳಕಾಲಿನ ಮೇಲೆ ಶತೃಭಯವು, ಎಡದ ಮೊಳಕಾಲಿನ ಮೇಲೆ ಬೀಳಲು ಸ್ತ್ರೀ ಸಂಬಂಧ ವ್ಯಾಧಿಯು ಬಲದ ಮೀನ ಗಂಡದ ಮೇಲೆ ಬೀಳಲು ಶುಭವು. ಎಡದ ಮಿನ ಗಂಡದ ಮೇಲೆ ಹಲ್ಲಿಯು ಬೀಳಲು ದರಿದ್ರತೆ ಬೆಂಬತ್ತುವದು. ಬಲಗಾಲಿನ ಹರಡಿನ ಮೇಲೆ ಬೀಳಲು ಸೌಖ್ಯವು, ಎಡಗಾಲು ಹರಡಿನ ಮೇಲೆ ಬೀಳಲು ಕೇಡು ಬಲಗಾಲ ಹಿಮ್ಮಡಿದ ಮೇಲೆ ಬೀಳಲು ಸ್ನೇಹಿತರ ಸಂಪಾದನೆ ಯಾಗುವದು. ಎಡಗಾಲು ಹಿಮ್ಮಡದ ಮೇಲೆ ಬೀಳಲು ಕೇಡು, ಬಲಪಾದದ ಮೇಲೆ ಬೀಳಲು ಬಡತನ, ಎಡಪಾದದ ಮೇಲೆ ಬೀಳಲು ಸುಖವು. ಬಲದ ಹಿಂಗಾಲು ಮೇಲೆ ಬೀಳು ಬಡವರಿಗೆ ಒಳ್ಳೇದು. ಎಡಪಾದದ ಅಂಗಾಲು ಮೇಲೆ ಹಲ್ಲಿ ಬಿದ್ದರೆ ಶ್ರೀಮಂತರಿಗೆ ಕೇಡು ಬಲವಾದದ ಬೆರಳುಗಳ ಮೇಲೆ ಬೀಳಲು ದುಃಖವು- ಕೇಡು-ಭಯವು, ಹೊದೆದು ಕೊಂಡ ಬಟ್ಟೆಯ ಮೇಲೆ ಬೀಳಲು ದಾರಿದ್ರವು ಭೋಜನ ಮಾಡುವಾಗ ಎಡೆಯಲ್ಲಿ ಹಲ್ಲಿ ಬಿದ್ದರೆ ಅಧಿಕ ಚಿಂತೆ- ವ್ಯಸನ ಆದರೆ ಬಡವರಿಗೆ ಸುಖವು.
ನಾವು ಕುಳಿತು ಏಳುವಾಗ ಹಲ್ಲಿಯು ಕೆಳಗೆ ಬಿದ್ದರೆ ದ್ರವ್ಯಲಾಭವು. ನಮ್ಮ ಹಿಂದೆ ಕೆಳಗೆ ಬಿದ್ದರೆ ೧೫ ದಿನದೊಳಗೆ ಪ್ರಯಾಣ ಮುಂದೆ ಬೀಳುವದು, ಶುಭವಾಗುವದು. ಬಲಭಾಗದಲ್ಲಿ ಬಿದ್ದರೆ ಶುಭವಾರ್ತೆ ಕೇಳುವಿಕೆ ಎಡಭಾಗದಲ್ಲಿ ಬಿದ್ದರೆ ದುರ್ವಾರ್ತೆ ಕೇಳುವಿಕೆ. ಸಭೆಯ ಮಧ್ಯದಲ್ಲಿ ಹಲ್ಲಿಯು ಬಿದ್ದರೆ ಸಭೆಯ ಮುಖ್ಯಸ್ಥನಿಗೆ ಅರಿಷ್ಟವು. ಹಲ್ಲಿಯು ಕೆಳಗೆ ಬಿದ್ದು ಸತ್ತರೆ ನೋಡಿದವರಿಗೆ ಕೇಡು, ಹಲ್ಲಿಯು ನೆಲಕ್ಕೆ ಬಿದ್ದು ಮೇಲಕ್ಕೆ ಎದ್ದು ಸಾಗಿದರೆ ಒಳ್ಳೇದು ಶುಭಕರವು. ಕೈ ಮೇಲೆ ಬಿದ್ದು ಕೆಳಕ್ಕೆ ಇಳಿದರೆ ಹಾನಿಯು. ಎಡಕ್ಕೆ ಬಿದ್ದು ಎಡಕ್ಕೇರಿದರೆ ಶುಭವು ಬಲಕ್ಕೆ ಬಿದ್ದು ಬಲಕ್ಕೆ ಏರಿದರೆ ಸಂತೋಷವು ಹಿಂಭಾಗದಲ್ಲಿ ಬಿದ್ದು ಮುಂಭಾಗದಲ್ಲಿ ಏರಿದರೆ ದ್ರವ್ಯಲಾಭವು. ಮುಂಭಾಗದಲ್ಲಿ ಬಿದ್ದು ಹಿಂದಕ್ಕೆ ಏರಿದರೆ ಬಡತನ ಅವರಿಸುವದು. ಕುಳಿತು ಏಳುವಾಗ ಹೊಟ್ಟೆಯ ಮೇಲೆ ಬಿದ್ದರೆ ವ್ಯಾಧಿ. ನಡೆಯುವಾಗ್ಗೆ ಹಲ್ಲಿ ಬೀಳಲು ಕೈಕೊಂಡ ಕಾರ್ಯಗಳು ಆಲಸ್ಯದಿಂದ ನೆರವೇರುವವು. ಕುಳಿತಾಗ ಹಲ್ಲಿಯು ಮೈಮೇಲೆ ಬಿದ್ದರೆ ಎಂಟು ದಿವಸದೊಳಗೆ ಕೈಕೊಂಡ ಕಾರ್ಯವು ನೆರವೇರುವದು.
ಕುಳಿತಾಗ್ಗೆ ಹಲ್ಲಿಯು ತನ್ನ ಎದುರಿನಲ್ಲಿಯಾಗಲಿ, ಹಿಂದೆಯಾಗಲಿ ಬಿದ್ದರೆ ತಾನು ಕುಳಿತ ಸ್ಥಳದಿಂದ ಆಸನಕ್ಕೆ ಹಿಮ್ಮಡ ಹಚ್ಚಿ, ಹಲ್ಲಿ ಬಿದ್ದ ಸ್ಥಳದವರೆಗೆ ತನ್ನ ಪಾದದಿಂದ ಅಳತೆ ಮಾಡಬೇಕು. ಈ ಅಳತೆ ೧ ಪಾದವಾದರೆ ಶುಭ ಸಮಾಚಾರ ಕೇಳುವಿಕೆ, ಅಳತೆಯು ೨ ಪಾದವಾದರೆ ಕೆಟ್ಟ ಸಮಾಚಾರ ಕೇಳುವಿಕೆ. ೩ ಪಾದವಾದರೆ ಕಲಹ, ೪ ಪಾದವಾದರೆ ಮನಕ್ಕೆ ಚಿಂತೆಯು, ೫ ಪಾದವಾದರೆ ಧನಲಾಭವು, ೬ ಪಾದವಾದರೆ ಕಂಟಕವು, ೧೦ ಪಾದವಾದರೆ ಅಪಮೃತ್ಯು ಭಯವು, ೧೧ ಪಾದವಾದರೆ ಸಂತೋಷವು, ೧೨ ಪಾದವಾದರೆ ಕಲಹ, ೧೩ ಪಾದವಾದರೆ ಸ್ತ್ರೀಸುಖವು, ೧೪ ಪಾದವಾದರೆ ಮಹಾಚಿಂತೆಯು. ೧೫ ಪಾದವಾದರೆ ವಸ್ತು ಲಾಭ, ೧೬ ಪಾದವಾದರೆ ಕೆಡಕುಂಟು, ೧೭ ಪಾದವಾದರೆ ಕೈಕೊಂಡ ಕಾರ್ಯದಲ್ಲಿ ಜಯ-ಲಾಭವು, ೧೮ ಪಾದಗಳಾದರೆ ಬಂಧುಗಳಿಂದಲೇ ವಿರೋಧ. ೧೯ ಪಾದವಾದರೆ ದ್ರವ್ಯಲಾಭ, ೨೦ ಪಾದವಾದರೆ ವಿರೋಧಿಗಳಿಂದ ಭಯವು ೨೧ ಪಾದವಾದರೆ ಸರ್ವದರಲ್ಲಿ ಸಿದ್ದಿಯು. ಇನ್ನು ಇದಕ್ಕೂ ಹೆಚ್ಚು ಪಾದಗಳ ಅಂತರವಾದರೆ ಯಾವ ಫಲಗಳೂ ಇಲ್ಲ. ಮೊದಲನೇ ಪಾದದ ಮೇಲೆ ಅಥವಾ ಕೊನೆಯ ಪಾದದೆ ಮೇಲೆ ನಾಲ್ಕೆಂಟು ಬೆರಳುಗಳಷ್ಟು ಅಂತರ ಹೆಚ್ಚಾದರೆ ಅದು ೨ ನೇ ಪಾದವೆಂದೇ ತಿಳಿಯಬೇಕು.
ಶಾಂತಿ ಕ್ರಮ : ಒಟ್ಟಿನಲ್ಲಿ ಶುಭವಿರಲಿ-ಅಶುಭವಿರಲಿ, ಹಲ್ಲಿಯು ಮೈಮೇಲೆ ಬಿದ್ದ ಕೂಡಲೇ ಸ್ನಾನಮಾಡಿ ರೇಷ್ಮೆ ಎಳೆ ಕೂಡಿದ ಐದು ಅರಳೆ ಬತ್ತಿಗಳನ್ನು ಆಗಲೇ ಸಿದ್ಧಪಡಿಸಿ, ತುಪ್ಪ-ಎಣ್ಣೆ ಎರಡನ್ನೂ ಕೂಡಿಸಿ ಹಾಕಿದ ಹೊಸ ಮಣ್ಣಿನ ಪಣತೆಯಲ್ಲಿ ಈ ಐದೂ ಬತ್ತಿಗಳನ್ನೂ ಹಾಕಿ, ತಮ್ಮ ಮನೆಯ ದೇವರಿಗೆ ದೀಪವನ್ನು ಹಚ್ಚಬೇಕು. ಭಕ್ತಿಯಿಂದ ನಮಸ್ಕರಿಸಬೇಕು. ಲಿಂಗವಂತರು ಈ ದೀಪದ ಬೆಳಕಿನಲ್ಲಿ ಶಿವಪೂಜೆಯನ್ನು ಮಾಡಿಕೊಂಡ ರಂತೂ ಯಾವದೇ ದೋಷವಿದ್ದರೂ ಪರಿಹಾರವಾಗುತ್ತದೆ ಹಲ್ಲಿ ಮೈಮೇಲೆ ಬೀಳಲಿ ಅಥವಾ ನಮ್ಮೆದುರು ಬೀಳಲಿ, ಕೂಡಲೇ ಹಸಿರು ವರ್ಣದ ಗಿಡವನ್ನು ನೋಡಿದರೆ ದೋಷ ಪರಿಹಾರ ವಾಗುವದೆಂದೂ ಕೆಲವು ಗ್ರಂಥಕಾರರ ಅಭಿಪ್ರಾಯವುಂಟು.
ಹಲ್ಲಿಯ ಶಕುನದ ಫಲಗಳ ಬಗ್ಗೆ ವಿಶ್ವಾಸವಿಲ್ಲದೆ ಕೇಳಿದವರಿಗೂ, ದೈವಭಕ್ತಿ, ಪ್ರತಾಚಾರಗಳಿಲ್ಲದೇ ಹೇಳುವವರಿಗೂ ಫಲಗಳು ಸಿದ್ಧಿಸಲಾರವು.
ಹಲ್ಲಿ ನುಡಿದ ಫಲವು : ನಾವು ಯಾವದೋ ವಿಷಯವನ್ನು ಆಲೋಚಿಸುತ್ತ ಕುಳಿತ
ಸಮಯದಲ್ಲಿ ಹಲ್ಲಿಯು 1 ಸಾರೆ ನುಡಿದರೆ ಮೃತ್ಯು ವಾರ್ತೆಯನ್ನು ಕೇಳುವಿಕೆ, ಹಲ್ಲಿಯು ೨ ಸಾರೆ ನುಡಿದರೆ ಸೌಖ್ಯವು ೩ ಸಾರೆ ನುಡಿದರೆ ಪ್ರವಾಸ ಹೊರಡುವಿಕೆ, ಹಲ್ಲಿಯು ೪ ಸಲ ನುಡಿದರೆ ಲಾಭಕರವು, 5.ಸಲ ನುಡಿದರೆ ಉತ್ತಮ, ೬ ಸಲ ನುಡಿದರೆ ಕಲಹವುಂಟಾಗುವಿಕೆ, 7 ಸಲ ಹಲ್ಲಿಯು ನುಡಿದರೆ ಬಂಧುಗಳ ಆಗಮನದ ಸೂಚನೆ, ೮ ಸಲ ಹಲ್ಲಿಯು ನುಡಿದರೆ ಮರಣಕ್ಕೆ ಸಮಾನವಾದ ಕಷ್ಟದ ಸೂಚನೆ ಕಂಡು ಬಂದೀತು. ೯ ಸಲ ನುಡಿದರೆ ಸುಖವು ಇದಕ್ಕೂ ಹೆಚ್ಚು ಸಲ ಹಲ್ಲಿಯು ನುಡಿದರೆ ಫಲವನ್ನು ನೋಡಬಾರದು.














