ಮನೆ ಯೋಗಾಸನ ಸ್ಥಳ ಸನ್ನಿವೇಶ

ಸ್ಥಳ ಸನ್ನಿವೇಶ

0

೮. ಸ್ವಚ್ಛವಾದ, ಚೆನ್ನಾಗಿ ಗಾಳಿಯಾಡುವ, ಹುಳು ಹುಪ್ಪಟ್ಟೆಗಳಾವುವೂ ಇರದ ಮತ್ತು ನಿಶಬ್ದವಾದ ಸ್ಥಳವು ಈ ಆಸನಗಳ ಅಭ್ಯಾಸಕ್ಕೆ ಉತ್ತಮ.     

೯. ಆಸನಭ್ಯಾಸಗಳನ್ನು ಎತ್ತರ-ತಗ್ಗುಗಳಿರುವ ನೆಲದಲ್ಲಿ, ಬರೀ ನೆಲದ ಮೇಲೆ ಮಾಡಬಾರದು. ಸಮನೆಲದ ಮೇಲೆ ಜಮಖಾನದ ಮಡಿಕೆ ಹಾಸಿ ಅದರ ಮೇಲೆ ಮಾಡಬೇಕು.

ಮುನ್ನೆಚ್ಚರಿಕೆ :

೧೦.  ಆಸನ ಅಭ್ಯಾಸದಲ್ಲಿ ಮುಖದಲ್ಲಿನ ಮಾಂಸ ಖಂಡಗಳಿಗಾಗಲಿ ಕಿವಿ ಕಣ್ಣುಗಳಿಗಾಗಲಿ ಇಲ್ಲವೇ, ಸ್ವಾಸೋಚ್ಚಾಸಗಳಿಗಾಗಿ ಹೆಚ್ಚು ಬಳಲಿಕೆಯುಂಟಾಗದಂತೆ ಜಾಗರೂಕತೆಯಿಂದಿರಬೇಕು.

ಉನ್ವೇಷಣೆ – ನಿಮೇಷಣ (ಕಣ್ಣುಮುಚ್ಚುವುದು,ತೆರೆಯುವುದು) :

ಆಸನಭ್ಯಾಸದಲ್ಲಿ ಆರಂಭದಲ್ಲಿ ಕಣ್ಣುಗಳು ತೆರೆದಿರಬೇಕು. ಇದರಿಂದ ಅಭ್ಯಾಸಕನು ತಾನು ಏನೇನು ಮಾಡುತ್ತಿರುವ, ಎಲ್ಲೆಲ್ಲಿ ದಾರಿ ತಪ್ಪುತ್ತಿರುವೆ ಎಂಬುದು ಅವನಿಗೆ ಗೋಚರವಾಗುತ್ತದೆ. ಹಾಗಿಲ್ಲದೆ ಕಣ್ಣು ಮುಚ್ಚಿಕೊಂಡು ಅಭ್ಯಾಸ ಮಾಡತೊಡಗಿದರೆ, ಅವಯವಗಳಲ್ಲಿಯ ಅತ್ಯವಶ್ಯಕವೆನಿಸಿದ ಚಲನವಲನಗಳ ಬಗೆಯನ್ನು ವೀಕ್ಷಿಸಲಾಗುವುದು. ಅಲ್ಲದೆ ಯಾವ ಯಾವ ದಿಕ್ಕಿನಲ್ಲಿ ಹೇಗೆ ಹೇಗೆ ಆಸನಗಳ ಕ್ರಮ ನಡೆದಿದೆ ಎಂಬುದರ ಅರಿವಾಗುವುದು ಕಷ್ಟ. ಆಸನ ಅಭ್ಯಾಸದಲ್ಲಿ ಪರಿಣಿತಿ ತನಗೆ ಲಭಿಸಿದೆಯೆಂಬ ನಂಬುಗೆಯಾದ ಮಾತ್ರ ಕಣ್ಣು ಮುಚ್ಚಿದರೂ ಅಡ್ಡಿಯಿಲ್ಲ. ಏಕೆಂದರೆ ಆಗ ದೇಹ ಚಲನವಲನಗಳ ಅಭ್ಯಾಸ ಬಲದಿಂದ ಸರಿಪಡಿಸಿಕೊಳ್ಳಬಹುದು.

ದರ್ಪಣದ (ಕನ್ನಡಿ) ಅವಶ್ಯಕತೆ :

೧೨. ಅವಯವಗಳ ಚಲನವಲನಗಳ ಕ್ರಮವನ್ನು ಸರಿಯಾಗಿ ಗಮನಿಸಲು ಕನ್ನಡಿಯ ನೆರವು ಒಳ್ಳೆಯದು. ಆದರೆ ಆ ಕನ್ನಡಿಯನ್ನು ಗೋಡೆಗೆ ಓರೆಯಾಗಿರಿಸದೆ ಅದನ್ನು ನೆಲಮುಟ್ಟುವಂತೆ ಗೋಡೆಗೆ ಅಂಟಿಸಿದಂತಿಡಬೇಕು. ಹೀಗೆ ಮಾಡಿದ್ದಲ್ಲಿ ತಲೆಕೆಳಗೂ ಮಾಡಬೇಕಾದ ಆಸನಭ್ಯಾಸಗಳಲ್ಲಿ ಅಂಗಾಂಗಗಳ ಚಲನವಲನಗಳ ನಿರ್ದಿಷ್ಟವಾಗಿ ಕಾಣಬಹುದು.  

ಮೆದುಳಿನ ಪಾತ್ರ :

೧೩. ಆಸನಗಳನ್ನು ಅಭ್ಯಸಿಸುವಾಗ ಅವಯವಗಳ ಚಟುವಟಿಕೆಗೆ ಹೆಚ್ಚು ಪ್ರಾಧಾನ್ಯ. ಆಗ ಮೆದುಳಿಗೆ ಯಾವ ಕೆಲಸವನ್ನು ಹೆಚ್ಚದೆ ಆಸನಭ್ಯಾಸಕ್ರಮದಲ್ಲಿ ಅವಯವಗಳ ಚಟುವಟಿಕೆಗಳನ್ನ ಎಚ್ಚರದಿಂದ ಗಮನಿಸುತ್ತಿರಬೇಕು. ಹಾಗಲ್ಲದೆ ಮೆದುಳಿಗೆ ಬೇರೆ ಕೆಲಸ ಹೆಚ್ಚಿಸಿದರೆ, ಅಂದರೆ ಬೇರೆ ವಿಷಯಗಳಲ್ಲಿ ಮನಸ್ಸು ತೊಡಗಿಸಿದರೆ, ಆಗ ಅಭ್ಯಾಸಿಯು ತನ್ನ ಅಭ್ಯಾಸ ಕ್ರಮದಲ್ಲಿ ತಪ್ಪುಗಳನ್ನು ತಿಳಿಯಲಾರ.

ಶ್ವಾಸೋಚ್ಛ್ವಾಸಕ್ರಮ :

೧೪. ಆಸನಭ್ಯಾಸದ ಸಮಯದಲ್ಲಿ ಉಸಿರಾಟವು ಮುಗಿನ ಹೊಳ್ಳೆಗಳಲ್ಲಿ ನಡೆಯಬೇಕೆ ವಿನಃ ಬಾಯಿಮೂಲಕ ಕೂಡದು.

೧೫. ಆಸನಗಳನ್ನು ಅಭ್ಯಾಸಿಸುವಾಗ ಮತ್ತು ಆಸನದಲ್ಲಿ ನೆಲೆ ನಿಂತಾಗ ಉಸಿರಾಟಕ್ಕೆ ತಡೆಯಿರಬಾರದು. ಈ ವಿಷಯದಲ್ಲಿ ಇನ್ನು ಮುಂದೆ ತಾಂತ್ರಿಕವಿಭಾಗದಲ್ಲಿ ವಿವರಿಸುವ ಪ್ರಕಾರ ಆಸನಭ್ಯಾಸಗಳನ್ನು ಕೈಗೊಂಡಾಗ ಶ್ವಾಸೋಚ್ಛಾಸಕ್ರಮವನ್ನು ನಿರ್ದಿಷ್ಟ ರೀತಿಯಿಂದ ನಡೆಸಬೇಕು.

ಶವಾಸನ

೧೬. ಆಸನಾಭ್ಯಾಸ ಮುಗಿದ ಬಳಿಕ ಕಡೆಯ ಪಕ್ಷ 10-15 ನಿಮಿಷಗಳ ಕಾಲವಾದರೂ ʼಶವಾಸನʼದಲ್ಲಿ ಮಲಗಬೇಕು. ಹೀಗೆ ಮಾಡಿದರೆ ಆಸನ ಅಭ್ಯಾಸದಿಂದುಂಟಾದ ಬಳಲಿಕೆ ಮಾಯವಾಗುತ್ತದೆ.

ಆಸನಗಳು ಮತ್ತು ಪ್ರಾಣಾಯಾಮ

೧೭. ಪ್ರಾಣಯಾಮ ಕ್ರಮವನ್ನು ಅಭ್ಯಾಸಿಸುವ ಮುನ್ನ ಈ ಗ್ರಂಥದ ಮೂರನೇ ಭಾಗದಲ್ಲಿ ಸೂಚಿಸಿರುವ ಮುನ್ನೆಚ್ಚರಿಕೆ ವಿವರಣೆಯನ್ನು ಗಮನಿಸಿ ಮನದಟ್ಟುಮಾಡಿಕೊಳ್ಳಬೇಕು. ಪ್ರತಿದಿನ ಪ್ರಾಣಾಯ ಕ್ರಮವನ್ನು ಪ್ರಾಂತಃಕಾಲದ ಆಸನಭ್ಯಾಸಗಳಲ್ಲಿ ತೊಡಗುವ ಮೊದಲೇ ಅನುಸರಿಸಬೇಕು. ಆದರೆ ಸಂಜೆಯಲ್ಲಿ ಆಸನಭ್ಯಾಸಗಳನ್ನು ಮುಗಿಸಿದ ಮೇಲೆ ಇದನ್ನು ಅಭ್ಯಾಸಿಸಬೇಕು. ಅಲ್ಲದೆ ಪ್ರತಿದಿನ ಮುಂಜಾನೆ ಪ್ರಾಣಾಯಾಮಭ್ಯಾಸದಲ್ಲಿ ಸುಮಾರು 15 ರಿಂದ 30 ನಿಮಿಷಗಳ ಕಳೆದು ಬಳಿಕ ಶವಾಸನದಲ್ಲಿ ಕೆಲವು ನಿಮಿಷಗಳು ನೆಲೆಸಿದ್ದು, ಆಮೇಲೆ ಸ್ವಲ್ಪ ವೇಳೆ ಸುಮ್ಮನಿದ್ದು ಇಲ್ಲವೇ ಯಾವುದಾದರೂ ದಿನಚರಿ ಹವ್ಯಾಸಗಳಲ್ಲಿ ತೊಡಗಿದ್ದು, ಆನಂತರ ಕ್ಲಿಷ್ಟವಾದ ಆಸನಗಳನ್ನು ಅಭ್ಯಾಸಿಸಬೇಕು. ಸಾಯಂಕಾಲದಲ್ಲಿ ಈ ಆಸನಗಳನ್ನು ಅಭ್ಯಾಸಮಾಡುವಾಗ ಕಡೆಯ ಪಕ್ಷ ಅರ್ಧ ತಾಸು ಕಳೆದ ಮೇಲೆಯೇ ಪ್ರಾಣಾಯಾಮ ಕ್ರಮಗಳನ್ನು ಅನುಸರಿಸಬೇಕು.

ನೆತ್ತರ ಒತ್ತಡ ಇಲ್ಲವೇ ತಲೆತಿರುಗು ಇವುಗಳಿಂದ ನರಳುವವರು ಅನುಸರಿಸಬೇಕಾದ ವಿಶೇಷ ಕ್ರಮ.  

೧೮. ಈ ಮೇಲಿನ ರೋಗಗಳಿಗೆ ಒಳಗಾದವರು “ಶೀರ್ಶಾಸನ” ಮತ್ತು ಸರ್ವಾಂಗಾಸನ ಇವುಗಳನ್ನು ಆರಂಭಿಸಬಾರದು. ಇಂಥವರು ಮೊದಲು ʼಪಶ್ಚಿಮೋತ್ಥಾಸನʼ, ʼಅಧೋಮುಖ ಶ್ವಾನಾಸನʼ ಮತ್ತು ʼಉತ್ಥಾನಾಸನʼ ಇವನು ಮಾಡಿ ಮುಗಿಸಿದ ಬಳಿಕ ತಲೆಕೆಳಗುಮಾಡಬೇಕಾದ “ಶೀರ್ಶಾಸನ” “ಸರ್ವಾಂಗಾಸನಗಳಲ್ಲಿ” ಇವುಗಳಲ್ಲಿ ತೊಡಗಬೇಕು. ಈ ಆಸನಭಂಗಿಗಳನ್ನು ಮಾಡಿ ಮುಗಿಸಿದ ಮೇಲೆ ಹೇಳಿದ ʼಪಶ್ಚಿಮೋತ್ಥಾಸನʼ, ʼಅರ್ಧಮುಖ ಶ್ವಾನಾಸನʼ ಮತ್ತು ʼಉತ್ಥಾನಾಸನʼ ಮತ್ತೆ ಮಾಡಬೇಕು.         

೧೯. ಹೆಚ್ಚು ನೆತ್ತರೊತ್ತಡ ಮತ್ತು ಕಡಿಮೆ ನೆತ್ತರೊತ್ತಡ ಇವುಗಳಿಂದ ಪಿಡಿತರಾದವರಿಗೆ ದೇಹವನ್ನು ಮುಂಭಾಗಿಸಲು ಆಸನದ ಭಂಗಿಗಳು ಉತ್ತಮ ಫಲವನ್ನು ಕೊಡುತ್ತದೆ.