ಮನೆ ತಂತ್ರಜ್ಞಾನ WhatsApp ಬಳಕೆದಾರರಿಗೆ ‘ಲಾಕ್ ಚಾಟ್’ ಫೀಚರ್!..ಇನ್ನು ನಿರ್ದಿಷ್ಟ ಚಾಟ್ ಲಾಕ್ ಮಾಡಿ …!

WhatsApp ಬಳಕೆದಾರರಿಗೆ ‘ಲಾಕ್ ಚಾಟ್’ ಫೀಚರ್!..ಇನ್ನು ನಿರ್ದಿಷ್ಟ ಚಾಟ್ ಲಾಕ್ ಮಾಡಿ …!

0

WhatsApp ಬಳಕೆದಾರರು ತಮ್ಮ ಫಿಂಗರ್’ಪ್ರಿಂಟ್ ಅಥವಾ ಪಾಸ್’ಕೋಡ್ ಬಳಸಿಕೊಂಡು ನಿರ್ದಿಷ್ಟ ಚಾಟ್ ಗಳನ್ನು ಲಾಕ್ ಮಾಡುವ ಬಹುನಿರೀಕ್ಷಿತ ವೈಶಿಷ್ಟ್ಯವು ಇದೀಗ ಬೀಟಾ ಬಳಕೆದಾರರಿಗೆ ಲಭ್ಯವಾಗಿದೆ.! WhatsApp “ಲಾಕ್ ಚಾಟ್”(Lock Chat) ಎಂಬ ಹೊಸ ವೈಶಿಷ್ಟ್ಯವನ್ನು ಪರಿಚಯಿಸುತ್ತಿದ್ದು, ಇದು ಗೌಪ್ಯತೆಯನ್ನು ಹೆಚ್ಚಿಸಲು ಬಳಕೆದಾರರಿಗೆ ನಿರ್ದಿಷ್ಟ ಚಾಟ್ ಅನ್ನು ಲಾಕ್ ಮಾಡಲು ಅನುವು ಮಾಡಿಕೊಡುತ್ತದೆ.

Join Our Whatsapp Group

ಪ್ರಮುಖ ಟೆಕ್ ಮಾಧ್ಯಮ ವರದಿಗಳ ಪ್ರಕಾರ, ಕೆಲ WhatsApp ಬೀಟಾ ಪರೀಕ್ಷಕರು ಈಗಾಗಲೇ ಈ ಹೊಸ ಲಾಕ್’ ಚಾಟ್ ವೈಶಿಷ್ಟ್ಯವನ್ನು ಬಳಸಲು ಸಾಧ್ಯವಾಗುತ್ತಿದ್ದು, ಇದರ ಸಹಾಯದಿಂದ ಸಂಪೂರ್ಣ ಅಪ್ಲಿಕೇಶನ್ ಲಾಕ್ ಮಾಡದೆಯೇ ನಿರ್ದಿಷ್ಟ ಚಾಟ್ ಲಾಕ್ ಮಾಡಲು ಅನುಮತಿ ದೊರೆತಿದೆ ಎಂದು ತಿಳಿದುಬಂದಿದೆ.

WhatsApp ಬಳಕೆದಾರರು “ಚಾಟ್ ಲಾಕ್” ವೈಶಿಷ್ಟ್ಯವನ್ನು ಬಳಸಿಕೊಂಡು ನಿರ್ದಿಷ್ಟ ಚಾಟ್ಗಳನ್ನು ಲಾಕ್ ಮಾಡಲು WhatsApp ಕಾಂಟ್ಯಾಕ್ಟ್ ಪ್ರೊಫೈಲ್ ವಿಭಾಗವನ್ನು ತೆರೆಯಬೇಕು. ಇಲ್ಲಿ ಕೆಳಗೆ ಸ್ಕ್ರಾಲ್ ಮಾಡಿದಾಗ “ಚಾಟ್ ಲಾಕ್” ವೈಶಿಷ್ಟ್ಯವು ಕಾಣಿಸುತ್ತದೆ. ಇದನ್ನು ಟ್ಯಾಪ್ ಮಾಡಿದರೆ “ಲಾಕ್ ದಿಸ್ ಚಾಟ್ ವಿತ್ ಫಿಂಗರ್ಪ್ರಿಂಟ್” ಆಯ್ಕೆಯನ್ನು ಸಕ್ರಿಯಗೊಳಿಸಲು ಸಾಧ್ಯವಾಗಲಿದೆ ಎನ್ನಲಾಗಿದೆ. ಮುಂಬರುವ ವಾರಗಳಲ್ಲಿ ಎಲ್ಲಾ WhatsApp ಬಳಕೆದಾರಿಗೆ ಲಭ್ಯವಾಗಲಿರುವ ಈ ಹೊಸ ಅಪ್ಡೇಟ್ ಪರೀಕ್ಷೆಯ ಹಂತದಲ್ಲಿದ್ದು, ಬಳಕೆದಾರರು ಮುಂಚಿತವಾಗಿ ಈ ವೈಶಿಷ್ಟ್ಯವನ್ನು ಪ್ರಯತ್ನಿಸಲು Play Store ನಲ್ಲಿ WhatsApp ಬೀಟಾ ಪ್ರೋಗ್ರಾಂಗೆ ಸೈನ್ ಅಪ್ ಮಾಡಬಹುದು, ಆದರೆ ಪ್ರೋಗ್ರಾಂನಲ್ಲಿ ಭಾಗವಹಿಸುವಿಕೆಯು ಸೀಮಿತವಾಗಿದೆ.

ಇತ್ತೀಚಿಗಷ್ಟೇ ಜನಪ್ರಿಯ ವಾಟ್ಸಾಪ್ ಬೀಟಾ ಟ್ರ್ಯಾಕರ್ WABetaInfo ವೆಬ್ಸೈಟ್ ಲಾಕ್ ಚಾಟ್ ವೈಶಿಷ್ಟ್ಯದ ಕುರಿತು ವರದಿ ಮಾಡಿತ್ತು. WhatsApp ಬಳಕೆದಾರರು ತಮ್ಮ ಫಿಂಗರ್’ಪ್ರಿಂಟ್ ಅಥವಾ ಪಾಸ್’ಕೋಡ್ ಬಳಸಿಕೊಂಡು ನಿರ್ದಿಷ್ಟ ಚಾಟ್’ಗಳನ್ನು ಲಾಕ್ ಮಾಡುವ ವೈಶಿಷ್ಟ್ಯವೊಂದನ್ನು ಗುರುತಿಸಿರುವುದಾಗಿ ಹೇಳಿತ್ತು. ಆಂಡ್ರಾಯ್ಡ್ 2.23.8.2 ಅಪ್’ಡೇಟ್’ನಲ್ಲಿ ಈ ಹೊಸ ವೈಶಿಷ್ಟ್ಯವು ಕಂಡುಬಂದಿದ್ದು, “ಈ ವೈಶಿಷ್ಟ್ಯವನ್ನು ಬಳಸಿಕೊಂಡು ಬಳಕೆದಾರರು ತಮ್ಮ ಸೂಕ್ಷ್ಮ ಸಂಭಾಷಣೆಗಳನ್ನು ಗೂಢಾಚಾರಿಕೆಯ ಕಣ್ಣುಗಳಿಂದ ಸುರಕ್ಷಿತವಾಗಿರಿಸುವ ಮೂಲಕ ಹೆಚ್ಚುವರಿ ಭದ್ರತೆಯನ್ನು ಹೊಂದಬಹುದು ಎಂದು ನಮಗೆ ಖಚಿತವಾಗಿದೆ” ಎಂದು ಹೇಳಿತ್ತು. ಇದೀಗ ಈ ವೈಶಿಷ್ಟ್ಯವು WhatsApp ಬೀಟಾ ಬಳಕೆದಾರರಿಗೆ ದೊರೆತಿರುವುದು ಸಂತಸದ ವಿಷಯವಾಗಿದೆ.