ಚಿಕ್ಕಮಗಳೂರು: ಹುಲಿ ಉಗುರಿನ ಲಾಕೆಟ್ ಹೊಂದಿರುವ ಆರೋಪದಲ್ಲಿ ಕಳಸ ಉಪ ವಲಯ ಅರಣ್ಯಾಧಿಕಾರಿ ಎಂ.ದರ್ಶನ್ ಕುಮಾರ್ ಅವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಲಾಕೆಟ್ ಹೊಂದಿರುವ ಬಗ್ಗೆ ಸುಪ್ರಿತ್ ಮತ್ತು ಅಬ್ದುಲ್ ಎಂಬುವರು ಗುರುವಾರ ದೂರು ಸಲ್ಲಿಸಿದ್ದರು. ಈ ಬಗ್ಗೆ ವಿವರಣೆ ಕೇಳಿದ ನಂತರ ಅಧಿಕಾರಿಗಳ ಸಂಪರ್ಕಕ್ಕೆ ಸಿಗದೆ ಮೊಬೈಲ್ ದೂರವಾಣಿ ಸ್ವಿಚ್ ಆಫ್ ಮಾಡಿಕೊಂಡಿದ್ದರು.
ಅಧಿಕಾರಿಗಳ ತಂಡ ಅವರನ್ನು ಶುಕ್ರವಾರ ಬಂಧಿಸಿ ಕೊಪ್ಪ ಉಪ ಅರಣ್ಯ ಸಂರಕ್ಷಣಾಧಿಕಾರಿ(ಡಿಸಿಎಫ್) ಮುಂದೆ ಹಾಜರುಪಡಿಸಿತು. ಈ ನಡುವೆ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಿ ಕೊಪ್ಪ ಡಿಸಿಎಫ್ ಆದೇಶ ಹೊರಡಿಸಿದ್ದಾರೆ.