ಮನೆ ರಾಜ್ಯ ಲೋಕಸಭಾ ಚುನಾವಣೆ: ಮೈಸೂರಿನಾದ್ಯಾಂತ 18 ಚೆಕ್ ಪೋಸ್ಟ್ ಸ್ಥಾಪನೆ

ಲೋಕಸಭಾ ಚುನಾವಣೆ: ಮೈಸೂರಿನಾದ್ಯಾಂತ 18 ಚೆಕ್ ಪೋಸ್ಟ್ ಸ್ಥಾಪನೆ

0

ಮೈಸೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರಿನಾದ್ಯಾಂತ 18 ಚೆಕ್ ಪೋಸ್ಟ್ ಗಳನ್ನು ಸ್ಥಾಪನೆ ಮಾಡಲಾಗಿದೆ.

ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ. ಕೆ ವಿ ರಾಜೇಂದ್ರ ಅವರ ನಿರ್ದೇಶನದಂತೆ ನಗರ ಪೊಲೀಸ್ ಆಯುಕ್ತ ರಮೇಶ್ ಅವರ ಮಾರ್ಗದರ್ಶನದಲ್ಲಿ ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿದೆ.

ಮೈಸೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ, ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳಲ್ಲಿ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿದ್ದು ದಿನದ 24 ಗಂಟೆಯೂ ವಾಹನಗಳ ತಪಾಸನೆ ಕಾರ್ಯವನ್ನು ಅಧಿಕಾರಿಗಳು ನಡೆಸುತ್ತಿದ್ದಾರೆ.

ಚೆಕ್ ಪೋಸ್ಟ್ ಗಳಲ್ಲಿ ತಪಾಸಣಾ ಕಾರ್ಯಚರಣೆ ನಡೆಸುತ್ತಿರುವುದರಿಂದ ಚುನಾವಣೆಗೆ ಸಂಬಂಧಿಸಿದ ಅಕ್ರಮ ತಡೆಯಲು ಕಡಿವಾಣ ಹಾಕಿದಂತಾಗಿದೆ.

ಹಿಂದಿನ ಲೇಖನಅಕ್ರಮವಾಗಿ ಅರವಿಂದ್ ಕೇಜ್ರಿವಾಲ್ ಬಂಧನ: ಪ್ರತಿಭಟನೆಗೆ ಬೆಂಬಲಿಸುವಂತೆ ಮುಖ್ಯಮಂತ್ರಿ ಚಂದ್ರು ಕರೆ
ಮುಂದಿನ ಲೇಖನಲೋಕಸಭಾ ಸಾರ್ವತ್ರಿಕ ಚುನಾವಣೆ: ಇವಿಎಂ ಪ್ರಥಮ ರ್‍ಯಾಂಡಮೈಜೇಷನ್