ಮನೆ ರಾಜ್ಯ ಲೋಕಸಭಾ ಚುನಾವಣೆ: ಮೈಸೂರು ಪಾಲಿಕೆ ಆಯುಕ್ತರೂ ಸೇರಿದಂತೆ ವಿವಿಧ ಅಧಿಕಾರಿಗಳ ವರ್ಗಾವಣೆ

ಲೋಕಸಭಾ ಚುನಾವಣೆ: ಮೈಸೂರು ಪಾಲಿಕೆ ಆಯುಕ್ತರೂ ಸೇರಿದಂತೆ ವಿವಿಧ ಅಧಿಕಾರಿಗಳ ವರ್ಗಾವಣೆ

0

ಮೈಸೂರು: ಲೋಕಸಭಾ ಚುನಾವಣೆ ಕಾರ್ಯ ನಿಮಿತ್ತ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರೂ ಸೇರಿದಂತೆ ಎ ಮತ್ತು ಬಿ ವೃಂದದ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

ಚುನಾವಣಾ ನೀತಿ ಸಂಹಿತೆ ಮುಕ್ತಾಯಗೊಂಡ ಕೂಡಲೇ ಅಧಿಕಾರಿಗಳು ಈ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ಸ್ಥಳದಲ್ಲಿ ವರದಿ ಮಾಡಿಕೊಳ್ಳಬೇಕೆಂದು ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಎನ್.ಮಂಗಳ ಗೌರಿ ಆದೇಶ ಹೊರಡಿಸಿದ್ದಾರೆ.

ಮೈಸೂರು ಪಾಲಿಕೆ ಆಯುಕ್ತ ಅಶಾದ್ ಉ‌ರ್ ರೆಹಮಾನ್ ಷರೀಫ್ ಅವರನ್ನು ವಿಜಯಪುರ ಮಹಾನಗರ ಪಾಲಿಕೆ ಆಯುಕ್ತರಾಗಿ, ಉಪ ಆಯುಕ್ತ ಸೋಮಶೇಖರ್ ಬೆಳಗಾವಿ ಮಹಾನಗರ ಪಾಲಿಕೆ, ಅವರ ಸ್ಥಳಕ್ಕೆ ವಿಜಯಪುರ ಮಹಾನಗರ ಪಾಲಿಕೆಯ ಉಪ ಆಯುಕ್ತ ಯಶವಂತ್ ಹೆಚ್.ನಾರಾಯಣಕರ ಅವರನ್ನು ವರ್ಗಾಯಿಸಲಾಗಿದೆ. ಕಲಬುರ್ಗಿ ಪಾಲಿಕೆಯ ಕೌನ್ಸಿಲ್ ಸೆಕ್ರೆಟರಿ ಮಲ್ಲೇಶ್ ತಂಗಾ ಅವರನ್ನು ಮೈಸೂರು ಪಾಲಿಕೆಗೆ ವರ್ಗಾಯಿಸಲಾಗಿದೆ.

ವಲಯ ಆಯುಕ್ತರಾದ ಎಂ.ಎಸ್.ಪ್ರತಿಭಾ ಮಂಗಳೂರಿಗೆ, ವೈ.ಎನ್.ಚಂದ್ರಮ್ಮ ಮಂಗಳೂರು, ಎಂ.ನಂಜುಂಡಯ್ಯ ಅವರನ್ನು ಬೆಳಗಾವಿಗೆ ವರ್ಗಾಯಿಸಿದ್ದು, ಮಂಗಳೂರಿನ ರೇಖಾ ಜೆ.ಶೆಟ್ಟಿ, ವಾಣಿ ವಿ.ಆಳ್ವಾ, ಸುನೀಲ್ ಪಾಟೀಲ್ ಅವರನ್ನು ಮೈಸೂರು ಪಾಲಿಕೆಗೆ ವರ್ಗಾಯಿಸಲಾಗಿದೆ.

ಪಾಲಿಕೆಯ ಕಂದಾಯ ವಿಭಾಗದ ಕಚೇರಿ ಸಹಾಯಕ ಕೆ.ಸುರೇಶ್ ಅವರನ್ನು ಮಂಗಳೂರಿಗೆ ವರ್ಗಾಯಿಸಲಾಗಿದ್ದು, ಅವರ ಸ್ಥಳಕ್ಕೆ ಮಂಗಳೂರಿನ ಎಸ್. ಭಾರತಿ, ಎಸ್ಟೇಟ್ ಆಫೀಸರ್ ಹೆಚ್.ಎಂ. ಸುರೇಶ್ ಅವರನ್ನು ಮಂಗಳೂರಿಗೆ ವರ್ಗಾಯಿಸಿದ್ದು, ಅವರ ಸ್ಥಳಕ್ಕೆ ಮಂಗಳೂರಿನ ಎನ್.ವಿಜಯಕುಮಾರ್, ಕಂದಾಯಾಧಿಕಾರಿ ಅರಸು ಕುಮಾರಿ ಅವರನ್ನು ಮಂಗಳೂರಿಗೆ ವರ್ಗಾಯಿಸಿದ್ದು, ಅತ ಅವರ ಸ್ಥಳಕ್ಕೆ ದಾವಣಗೆರೆಯ ಡಿ.ಕೃಷ್ಣಮೂರ್ತಿ, ಕಂದಾಯಾಧಿಕಾರಿ ಎಂ.ಎಸ್.ಸತೀಶ್ ಅವರನ್ನು ಕಲಬುರ್ಗಿಗೆ ವರ್ಗಾಯಿಸಿದ್ದು, ಅವರ ಸ್ಥಳಕ್ಕೆ ಅಲ್ಲಿನ ಕಚೇರಿ ಸಹಾಯಕ ನೀಲಕಂಠರಾಯ, ಕಂದಾಯಾಧಿಕಾರಿ ಎಸ್.ಸ್ವರ್ಣಲತಾ ಅವರನ್ನು ಹುಬ್ಬಳ್ಳಿ-ಧಾರವಾಡ ಪಾಲಿಕೆಗೆ ವರ್ಗಾಯಿಸಿದ್ದು, ಅವರ ಸ್ಥಳಕ್ಕೆ ಬೆಳ ಗಾವಿಯ ಉಮಾ ಬೆಟಗೇರಿ, ಕಂದಾಯಾಧಿಕಾರಿ ಬಿ.ಟಿ.ಧನಲಕ್ಷ್ಮೀ ಅವರನ್ನು ಕಲಬುರ್ಗಿಗೆ ವರ್ಗಾಯಿಸಿದ್ದು, ಅವರ ಸ್ಥಳಕ್ಕೆ ಮಂಗಳೂರಿನ ಕೆ.ಸುಶಾಂತ್, ಕಂದಾಯಾಧಿಕಾರಿ ಜೆ.ಆಶಾ ಅವರನ್ನು ಶಿವಮೊಗ್ಗಕ್ಕೆ ವರ್ಗಾಯಿಸಿದ್ದು, ಅವರ ಸ್ಥಳಕ್ಕೆ ಅಲ್ಲಿನ ಹೆಚ್ ಸುನೀತಾ ವರ್ಗಾಯಿಸಲಾಗಿದೆ.

ಕಚೇರಿ ಸಹಾಯಕ ಬಿ. ವೆಂಕಟರಾಮ್ ಅವರನ್ನು ತುಮಕೂರಿಗೆ ವರ್ಗಾವಣೆ ಮಾಡಲಾಗಿದ್ದು, ಅವರ ಸ್ಥಳಕ್ಕೆ ತುಮಕೂರಿನ  ಎಂ.ಕೆ.ರಾಘವೇಂದ್ರ, ಕಚೇರಿ ಸಹಾಯಕಿ ಎಂ.ಲಕ್ಷ್ಮಿ ಅವರನ್ನು ತುಮಕೂರಿಗೆ ವರ್ಗಾಯಿಸಿದ್ದು, ಅವರ ಸ್ಥಳಕ್ಕೆ ಬಳ್ಳಾರಿಯ ಎಂ.ಕೆ.ಗೋವಿಂದ ಬಾಬು ಅವರನ್ನು ವರ್ಗಾವಣೆ ಮಾಡಲಾಗಿದೆ.