ಮನೆ ರಾಜ್ಯ ರಾಜ್ಯದ ಹಲವೆಡೆ ಆರ್’ಟಿಓ ಚೆಕ್ ಪೋಸ್ಟ್’ಗಳ ಮೇಲೆ ಲೋಕಾಯುಕ್ತ ದಾಳಿ

ರಾಜ್ಯದ ಹಲವೆಡೆ ಆರ್’ಟಿಓ ಚೆಕ್ ಪೋಸ್ಟ್’ಗಳ ಮೇಲೆ ಲೋಕಾಯುಕ್ತ ದಾಳಿ

0

ಬೆಂಗಳೂರು(Bengaluru): ರಾಜ್ಯದ ವಿವಿಧ ಆರ್ ಟಿ ಒ ಚೆಕ್ ಪೋಸ್ಟ್ ಗಳ ಮೇಲೆ ಲೋಕಾಯುಕ್ತ ತಂಡಗಳು ದಾಳಿ ನಡೆಸಿದ್ದು, ದಾಖಲೆಗಳನ್ನು ಪರಿಶೀಲನೆ ನಡೆಸಲಾಗಿದೆ.

ಚಾಮರಾಜನಗರ, ಬಳ್ಳಾರಿ, ವಿಜಯಪುರ, ವಿಜಯನಗರ, ಚಿಕ್ಕೋಡಿ ಹಾಗೂ ಬೀದರ್ ಇನ್ನೂ ಹಲವೆಡೆ ದಾಳಿ ನಡೆದಿದೆ.

ಬಳ್ಳಾರಿಯ ಎನ್.ಎಚ್ ರಸ್ತೆಯ ಗೋಡೆಹಾಳ್ನಲ್ಲಿ ಹಗರಿ ನದಿಯ ಸೇತುವೆ ಬಳಿ ಇರುವ ಆರ್’ಟಿಓ ಚೆಕ್ ಪೋಸ್ಟ್  ಮೇಲೆ ಎಸ್ಪಿ ಪುರುಷೋತ್ತಮ ನೇತೃತ್ವದ ಲೋಕಾಯುಕ್ತ ತಂಡ ದಾಳಿ ನಡೆಸಿದ್ದು, ದಾಖಲೆಗಳನ್ನು ಪರಿಶೀಲಿಸಿದೆ.

ಬಳ್ಳಾರಿಯಿಂದ 12 ಕಿ.ಮೀ ದೂರದಲ್ಲಿ ಆಂಧ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿರುವ ಈ ಚೆಕ್ ಪೋಸ್ಟ್ ನಲ್ಲಿ ಗಣಿಗಾರಿಕೆ ಸಂದರ್ಭದಲ್ಲಿ ಇಲ್ಲಿ ಗಣಿ, ಆರ್’ಟಿಓ ಸೇರಿದಂತೆ ಮೂರು ಇಲಾಖೆ ತಂಡಗಳು ಇಲ್ಲಿದ್ದವು. ಈಗ ಕೇವಲ ಆರ್’ಟಿಓ ಮಾತ್ರ ಇದೆ. ಗಡಿಭಾಗದಿಂದ ನಿತ್ಯ ನೂರಾರು ವಾಹನಗಳು ಬಳ್ಳಾರಿಗೆ ಬರುತ್ತಿದ್ದು, ದಾಖಲೆಗಳನ್ನು ಸರಿಯಾಗಿ ಚೆಕ್ ಮಾಡದೆ ಬಿಡುತ್ತಿದ್ದಾರೆ ಹಾಗೂ ವಸೂಲಿ ಮಾಡುತ್ತಿದ್ದಾರೆಂಬ ಆರೋಪವಿತ್ತು.

ವಿಜಯಪುರ ಮಹಾರಾಷ್ಟ್ರ ಗಡಿಯಲ್ಲಿರುವ ಧೂಳಖೇಡ ಆರ್’ಟಿ ಒ ಚೆಕ್ ಪೋಸ್ಟ್ ಮೇಲೆ ಲೋಕಾಯುಕ್ತ ಎಸ್ಪಿ ಅನಿತಾ ನೇತೃತ್ವದಲ್ಲಿ ದಾಳಿ ನಡೆದಿದೆ. 3 ರಿಂದ 4 ಲಕ್ಷ ರೂ. ಹಣ ವಶಕ್ಕೆ ಪಡೆಯಲಾಗಿದೆ. ಪ್ರಮುಖ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದ್ದು, 7 8 ಹೋಮ್ ಗಾರ್ಡ್’ಗಳ ವಿಚಾರಣೆ ನಡೆಸಿ ಅಗತ್ಯ ದಾಖಲೆ ಕಲೆ ಹಾಕಲಾಗುತ್ತಿದೆ.