ಮೈಸೂರು: ಹುಣಸೂರಿನ ಪ್ರಾದೇಶಿಕ ಸಾರಿಗೆ ಕಚೇರಿ (ಆರ್ ಟಿ ಓ) ಮೇಲೆ ಇಂದು ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಕಚೇರಿ ಆವರಣದಲ್ಲಿ ಬ್ರೋಕರ್ ಗಳು ಪರಾರಿಯಾಗಿದ್ದಾರೆ.
ಕಚೇರಿ ಎದುರು ಅನಧಿಕೃತವಾಗಿ ದಾಖಲಾತಿ ಮಾಡಿಕೊಡುತ್ತಿದ್ದ 1 ಸ್ಯಾಂಟ್ರೋ ಕಾರು, 3ಓಮಿನಿ ವ್ಯಾನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರಿನಲ್ಲಿ ದ್ದ ಲ್ಯಾಪ್ ಟಾಪ್, ಸ್ಕ್ಯಾನರ್ ಮತ್ತಿತರ ದಾಖಲಾತಿಗಳನ್ನು ಲೋಕಾಯುಕ್ತರು ವಶಕ್ಕೆ ಪಡೆದಿದ್ದಾರೆ.
ವಿಪರ್ಯಾಸವೆಂದರೆ ಆರ್ ಟಿಓ ಕಚೇರಿಯಲ್ಲಿರಬೇಕಾದ ಅಧಿಕೃತ ಸರ್ಕಾರಿ ದಾಖಲಾತಿಗಳು ಕಾರಿನಲ್ಲಿ ದೊರೆತಿರುವುದು ಆರ್ ಟಿಓ ಕಚೇರಿಯಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಅತಿಯಾದ ಭ್ರಷ್ಟಚಾರ ಹಾಗೂ ಬ್ರೋಕರ್ ಗಳ ಹಾವಳಿಯಿಂದ ಬೇಸತ್ತು ಆರ್ ಟಿ ಓ ಕಛೇರಿಯ ಅಧಿಕಾರಿಗಳೇ ಲೋಕಾಯುಕ್ತಕ್ಕೆ ದೂರು ನೀಡಿ ದಾಳಿ ಮಾಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಅಧಿಕಾರಿಗಳೇ ಬ್ರೋಕರ್ ಗಳ ಹಾವಳಿಯಿಂದ ಬೇಸತ್ತಿದ್ದಾರೆ ಎನ್ನುವುದಾದರೆ ಕಚೇರಿಗೆ ಬರುವ ಸಾರ್ವಜನಿಕರು ಎಷ್ಟು ಸಂಕಷ್ಟ ಅನುಭವಿಸಿದ್ದಾರೆ ಎಂಬುದನ್ನು ಊಹಿಸಬಹುದು. ಸರ್ಕಾರಿ ಕೆಲಸಗಳಿಗೆ ದಿನಗಟ್ಟಲೇ ಅಲೆಯಬೇಕಾದ ಇಂದಿನ ಪರಿಸ್ಥಿತಿಯಲ್ಲಿ ಈ ಬ್ರೋಕರ್ ಗಳು ಹೆಚ್ಚು ಹೆಚ್ಚು ಲಂಚ ವಸೂಲಿ ಮಾಡುತ್ತಿದ್ದಾರೆ. ಇದರಿಂದ ಸಾರ್ವಜನಿಕರು ಸಂಕಷ್ಟಕ್ಕೆ ಈಡಾಗುತ್ತಾರೆ.
ಹುಣಸೂರು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಅವ್ಯವಹಾರಗಳ ಬಗ್ಗೆ ಈಗಾಗಲೇ ಸವಾಲ್ ಪತ್ರಿಕೆಯಲ್ಲಿ ಈ ಹಿಂದೆ ಸವಿವರವಾದ ವರದಿಯನ್ನು ಪ್ರಕಟಿಸಲಾಗಿತ್ತು.
ಪ್ರಸ್ತುತ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಆದ್ದರಿಂದ ಪ್ರಕರಣದನ್ನು ಗಂಭೀರವಾಗಿ ಪರಿಗಣಿಸಿ ಭ್ರಷ್ಟಚಾರದಲ್ಲಿ ಭಾಗಿಯಾದ ತಪ್ಪಿತಸ್ಥ ಅಧಿಕಾರಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಹಾಗೂ ಇನ್ನು ಮುಂದಾದರೂ ಅಧಿಕಾರಿಗಳು ಸಾರ್ವಜನಿಕರಿಗೆ ನ್ಯಾಯಯುತ ಸೇವೆಯನ್ನು ಒದಗಿಸಬೇಕಾಗಿದೆ.