ಮನೆ ಕಾನೂನು ರಾಮನಗರ ಸಾರಿಗೆ ಕಚೇರಿ ಮೇಲೆ ಲೋಕಾಯುಕ್ತ ದಾಳಿ: ಮೂವರ ಸೆರೆ

ರಾಮನಗರ ಸಾರಿಗೆ ಕಚೇರಿ ಮೇಲೆ ಲೋಕಾಯುಕ್ತ ದಾಳಿ: ಮೂವರ ಸೆರೆ

500 ಹಳೆ ವಾಹನಗಳನ್ನು ಹೊಸದೆಂದು ನೋಂದಣಿ, ಜಪ್ತಿ ವಾಹನಗಳಿಗೂ ರಿಜಿಸ್ಟರ್ ಮಾಡಿಸಿ ಕೋಟಿ ಕೋಟಿ ಸುಲಿಗೆ

0

Join Our Whatsapp Group

ರಾಮನಗರ: ಹತ್ತು ವರ್ಷದ ಹಳ ಟ್ಯಾಕ್ಟರ್ ಗಳು ಹಾಗೂ ಇಎಂದ ಪಾವತಿಸಿಲ್ಲವೆಂದು ಜಪ್ತಿ ಮಾಡಿದ ವಾಹನಗಳೂ ಸೇರಿದಂತೆ ಗುಜರಿ ಗಾಡಿಗಳಿಗೂ ರಾಮನಗರದ ಪ್ರಾದೇಶಿಕ ಸಾರಿಗೆ ಕಚೇರಿ(ಆರ್ ಟಿಒ)ಯಲ್ಲಿ ಹೊಸ ರಿಜಿಸ್ಟರ್ ನಂಬರ್ ನಮೂದು ಮಾಡಿರುವ ಪ್ರಕರಣಗಳು ಶುಕ್ರವಾರ ನಡೆದ ಲೋಕಾಯುಕ್ತ ದಾಳಿಯಲ್ಲಿ ಬಹಿರಂಗಗೊಂಡಿವೆ.

2 ಸಾವಿರಕ್ಕೂ ಹೆಚ್ಚಿನ ಬ್ಯಾಕ್ಟರ್‌ ಗಳಿಗೆ ಅಕ್ರಮ ನೋಂದನೆ, ಎಫ್ ಸಿ ಪೂರ್ಣಗೊಂಡಿರುವ ವಾಹನಗಳಿಗೂ ಈಗಷ್ಟೇ ಶೋರೂಂನಿಂದ ಖರೀದಿ ಮಾಡಿದ ರೀತಿಯಲ್ಲಿ ರಿಜಿಸ್ಟರ್ ಮಾಡಿಸುವುದು, ಕಳವು ಮಾಡಿದ ಗಾಡಿಗಳಿಗೂ ರಿಜಿಸ್ಟರ್ ಮಾಡಿಕೊಡುವುದು, ಎಫ್‌ ಸಿ ನವೀಕರಿಸಲು ಸಾಧ್ಯವಿಲ್ಲದ ವಾಹನಗಳಿಗೂ ನೂತನ ಎಫ್‌ ಸಿ ನೀಡುವುದು ಸೇರಿದಂತೆ ಬಗೆಬಗೆಯ ವಂಚನೆಗಳ ಮೂಲಕ ಸರಕಾರದ ಬೊಕ್ಕಸಕ್ಕೆ ಕೋಟಿಗಟ್ಟಲೆ ನಷ್ಟ ಮಾಡಿದ್ದಾರೆ.

ಸದರಿ ಪ್ರಕರಣದ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಾಮನಗರ ಆರ್ ಟಿಒ ನಡೆಸುತ್ತಿರುವ ದಂಧೆಗಳ ಬಗ್ಗೆ ಗುರುವಾರ ದೂರು ಸಲ್ಲಿಕೆಯಾಗಿತ್ತು, ಅದರ ಅನ್ವಯ ಮಾಳಿ ನಡೆಸಿ ನಾವೇ ಬೆಚ್ಚಿ ಬಿದ್ದಿದ್ದೇವೆ. 3 ಸಾವಿರಕ್ಕೂ ಹೆಚ್ಚಿನ ಟ್ರ್ಯಾಕ್ಟರ್, ಇತರ ಬಸ್ತಿವಾಹನಗಳಿಗೆ ನಿಯಮ ಉಲ್ಲಂಘಿಸಿ ನೋಂದಣಿ ಮಾಡಿದ್ದಾರೆ. ಹೀಗಾಗಿ ಬೆಳಗ್ಗೆಯಿಂದ ಸಂಜೆ ವೇಳೆಗೆ 1500ಕ್ಕೂ ಹೆಚ್ಚು ಟ್ರಾಕ್ಟರ್‌ ಗಳ ರಿಜಿಸ್ಟರ್ ನಲ್ಲಿ ನಿಯಮ ಉಲ್ಲಂಘನೆ ಪತ್ತೆಯಾಗಿದೆ. ಆರ್‌ ಟಿಒ ಸೇರಿದಂತೆ ಒಟ್ಟು ಮೂವರನ್ನು ವಶಕ್ಕೆ ಪಡೆದಿದ್ದೇವೆ. ಆರ್.ಟಿಒ ಹಗರಣದಲ್ಲಿನ ಎಲ್ಲ ಟ್ರ್ಯಾಕ್ಟರ್ ಗಳ ಜಪ್ತಿ ಮಾಡಲಾಗಿದೆ.

ಡಿಎಲ್, ಆರ್ ಸಿ, ಸಿಸಿ ವರ್ಗಾವಣೆ, ಎಫ್ ಸಿ ನವೀಕರಣಕ್ಕೆ ನೇರವಾಗಿ ಫಲಾನುಭವಿಗಳು ಆರ್ ಟಿಸಿಗೆ ಬರು ವಂತಿಲ್ಲ, ಏಜೆಂಟರ್‌ ಗಳ ಮೂಲಕ ಏನು ಬೇಕಿದ್ದರೂ ಮಾಡಬಹುದು ಎಂಬುದಕ್ಕೆ ರಾಮನಗರ ಆ‌ರ್ ಟಿಒ ಸಾಕ್ಷಿಯಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ಹೇಳುತ್ತಾರೆ.

ಮೂವರ ಬಂಧನ

ಈ ಪ್ರಕರಣ ಸಂಬಂಧ ಜೂ.28ರ ಶನಿವಾರ ನಿವೃತ್ತಿಯಾಗಬೇಕಿದ್ದ ಆರ್‌ಟಿಒ ಅಧಿಕಾರಿ ಶಿವಕುಮಾರ್‌, ದ್ವಿತೀಯ ದರ್ಜೆ ಸಹಾಯಕಿ ರಚಿತಾ ರಾಜ್, ಮಧ್ಯವರ್ತಿ ಸತೀಶ್ ಎಂಬುವರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ. ಶುಕ್ರವಾರ ಬೆಳಿಗ್ಗೆ ಬೆಂಗಳೂರು ನಿವಾಸ ಸೇರಿದಂತೆ ರಾಮನಗರ ಆರ್‌ಟಿಒ ಕಚೇರಿಗಳ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಕೋಟ್ಯಾಂತರ ರೂ. ಮೌಲ್ಯದ ಹಗರಣವನ್ನು ಬಯಲಿಗೆಳೆದಿದ್ದಾರೆ.

ಕೃಷಿಕಾರ್ಯದ ಹೆಸರಲ್ಲಿ ಮೋಸ

ಕೃಷಿ ಕಾರ್ಯಕ್ಕೆ ಬಳಕೆಯಾಗುವ ಟ್ರ್ಯಾಕ್ಟರ್ ಗಳಿಗೆ ತೆರಿಗೆ ವಿನಾಯಿತಿ ಇದೆ. ರೈತರು ಕಂದಾಯ ಇಲಾಖೆಯಿಂದ ಬೊನೋಫೈಡ್ ಸರ್ಟಿಫಿಕೇಟ್ (ರೈತ ದೃಢೀಕರಣ ಪತ್ರ)ಅನ್ನು ನೋಂದಣಿ ಸಮಯದಲ್ಲಿ ಆರ್ ಟಿಒ ಅಧಿಕಾರಿಗಳಿಗೆ ನೀಡಬೇಕು. ಆಗ ಟ್ರ್ಯಾಸ್ಟನ್ 2750 ರೂ. ಲೈಫ್ ಟೈಂ ಶುಲ್ಕ ಕಟ್ಟುಕೊಂಡು ನೋಂದಣಿ ಮಾಡಿಕೊಡುತ್ತಾರೆ. ಇಲ್ಲವಾದಲ್ಲಿ ವಾಣಿಜ್ಯ ಬಳಕೆ ಟ್ರಾಸ್ಟರ್ ಎಂದು ಪರಿಗಣಿಸಲಾಗುತ್ತದೆ. ಹೀಗೆ ನೋಂದಣಿ ಮಾಡಿಸಿಕೊಳ್ಳುವ ಟ್ರ್ಯಾಕ್ಟರ್‌ಗಳು ಪ್ರತಿ 3 ತಿಂಗಳಿಗೊಮ್ಮೆ 3000 ರೂ. ಹಾಗೂ ಇತರೆ ತೆರಿಗೆ ಪಾವತಿ ನೋಂದಣಿ ನವೀಕರಿಸಿಕೊಳ್ಳಬೇಕು. ಆರ್.ಟಿಒ ಅಧಿಕಾರಿಗಳು ವಿಜೆಂಟರ ಮೂಲಕ ಬಂದ ಟ್ರ್ಯಾಕ್ಟರ್ ಗಳಿಗೆ ಬೋನೋಫೈಡ್ ಸರ್ಟಿಫಿಕೇಟ್ ಇಲ್ಲದೆ ಇದ್ದರೂ, ಕೃಷಿ ಉದ್ದೇಶಕ್ಕೆ ಬಳಕೆಯಾಗುವ ಟ್ರ್ಯಾಕ್ಟರ್ ಎಂದು ನೋಂದಣಿ ಮಾಡಿಕೊಡುತ್ತಿದ್ದರು. ಇದಕ್ಕೆ ಭಾರಿ ಮೊತ್ತದ ಹಣವನ್ನು ಲಂಚವಾಗಿ ಪಡೆಯುತ್ತಿದ್ದರು ಎಂಬುದು ಬಯಲಾಗಿದೆ.

ಹಿಂದಿನ ಲೇಖನವಾಲ್ಮೀಕಿ ನಿಗಮದ ಹಗರಣ : 10 ಕೋಟಿ ಜಪ್ತಿ, ಮತ್ತೊಬ್ಬ ಆರೋಪಿ ಬಂಧನ
ಮುಂದಿನ ಲೇಖನಪೊಲೀಸರ ವಾಹನಕ್ಕೆ ಡಿಕ್ಕಿ ಹೊಡೆದು ಕೊಲೆಗೆ ಯತ್ನ: ಮೂವರು ದರೋಡೆಕೋರರ ಬಂಧನ, ಇಬ್ಬರು ಪರಾರಿ