ಮನೆ ಅಪರಾಧ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಮನೆಯಲ್ಲಿ ಲೋಕಾಯುಕ್ತ ಶೋಧ

ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಮನೆಯಲ್ಲಿ ಲೋಕಾಯುಕ್ತ ಶೋಧ

0

ಚನ್ನಗಿರಿ: ಲೋಕಾಯುಕ್ತ ಬಲೆಗೆ ಬಿದ್ದ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಬಿಡಬ್ಲೂಎಸ್’ಎಸ್ ಇಲಾಖೆಯ ಮುಖ್ಯ ಲೆಕ್ಕ ಪರಿಶೋಧಕ ಪ್ರಶಾಂತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳು ಗುರುವಾರ ತಾಲ್ಲೂಕಿನ ಚನ್ನೇಶಪುರ(ಮಾಡಾಳ್) ಗ್ರಾಮದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಮನೆಯಲ್ಲಿ ಶೋಧ ನಡೆಸಿದರು.

ಲೋಕಾಯುಕ್ತ ಎಸ್‌ಪಿ ಎಂ.ಎಸ್. ಕೌಲಾಪುರೆ ನೇತೃತ್ವದಲ್ಲಿ ಅಧಿಕಾರಿಗಳು ಇಡೀ ಮನೆಯನ್ನು ಶೋಧ ಮಾಡಿದರು.

4 ಬ್ಯಾಗ್‌’ಗಳಲ್ಲಿ ಮಹತ್ವದ ದಾಖಲೆ ಪತ್ರಗಳನ್ನು ಸಂಗ್ರಹಿಸಿದರು. ಶೋಧ ಸಮಯದಲ್ಲಿ ಮಾಡಾಳ್ ವಿರೂಪಾಕ್ಷಪ್ಪ ಅವರ ಪತ್ನಿ ಲೀಲಾವತಿ ವಿರೂಪಾಕ್ಷಪ್ಪ ಹಾಗೂ ಎರಡನೇ ಪುತ್ರ ಪ್ರವೀಣ್ (ರಾಜು) ಮನೆಯಲ್ಲಿ ಇದ್ದರು.

ಬೆಂಗಳೂರಿನ ಕೆಎಸ್‌’ಡಿಎಲ್ ಕಚೇರಿಯಲ್ಲಿ ಬುಧವಾರ ಟೆಂಡರ್‌’ಗೆ ಸಂಬಂಧಪಟ್ಟಂತೆ ಟೆಂಡರ್‌’ದಾರನಿಂದ ₹ 40 ಲಕ್ಷ ಲಂಚ ಪಡೆಯುತ್ತಿದ್ದಾಗ ಪ್ರಶಾಂತ್ ಲೋಕಾಯುಕ್ತ ಬಲೆಗೆ ಬಿದ್ದಿದ್ದರು.

ಹಿಂದಿನ ಲೇಖನರಾಮರಾಜ್ಯವಾಗಿದ್ದ ಕರ್ನಾಟಕವನ್ನು ಬಿಜೆಪಿ ಕಮೀಷನ್ ರಾಜ್ಯ ಮಾಡಿದೆ: ಹೆಚ್.ಡಿ.ಕುಮಾರಸ್ವಾಮಿ
ಮುಂದಿನ ಲೇಖನಶ್ರೀರಾಮನ ಪಾದಸ್ಪರ್ಶದಿಂದ ಪುನೀತವಾದ ರಾಮನಾಥಪುರ