ಮನೆ ಮನರಂಜನೆ ರಜಿನಿಕಾಂತ್‌ 171ನೇ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಲಿರುವ ಲೋಕೇಶ್‌ ಕನಕರಾಜ್‌

ರಜಿನಿಕಾಂತ್‌ 171ನೇ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಲಿರುವ ಲೋಕೇಶ್‌ ಕನಕರಾಜ್‌

0

ಚೆನ್ನೈ: ಸೂಪರ್‌ ಸ್ಟಾರ್‌ ರಜಿನಿಕಾಂತ್‌ ಅವರ ʼಜೈಲರ್‌ʼ ಸೂಪರ್‌ ಹಿಟ್‌ ಆಗಿದೆ. ಈ ನಡುವೆಯೇ ರಜಿನಿಕಾಂತ್‌ ಅವರ ʼತಲೈವರ್171’ ಸಿನಿಮಾದ ಬಗ್ಗೆ ಬಿಗ್‌ ಅಪ್ಡೇಟ್‌ ಹೊರಬಿದ್ದಿದೆ.

ಕಳೆದ ಕೆಲ ದಿನಗಳಿಂದ ಕಾಲಿವುಡ್‌ ಸಿನಿಮಾರಂಗದಲ್ಲಿ ‘ತಲೈವರ್ 170’ ಕುರಿತು ಚರ್ಚೆಗಳು ನಡೆಯುತ್ತಿದೆ. ಟಿಜೆ ಜ್ಞಾನವೇಲ್ ನಿರ್ದೇಶನದ ಈ ಸಿನಿಮಾದಲ್ಲಿ ಮಲ್ಟಿಸ್ಟಾರ್ಸ್‌ ಇರಲಿದ್ದಾರೆ ಎನ್ನುವುದು ಟ್ರೆಂಡ್‌ ಆಗಿತ್ತು. ಬಾಲಿವುಡ್‌ ನಿಂದ ಅಮಿತಾಭ್ ಬಚ್ಚನ್ ಮಲಯಾಳಂ ಸಿನಿಮಾರಂಗದಿಂದ ಫಾಹದ್ ಫಾಸಿಲ್ ಅವರು ಕಾಣಿಸೊಕೊಳ್ಳಲಿದ್ದು, ಟಾಲಿವುಡ್‌ ರಂಗದಿಂದ ರಾಣಾ ದಗ್ಗುಬಾಟಿ ಹಾಗೂ ಮಾಲಿವುಡ್ ನಟಿ ಮಂಜು ವಾರಿಯರ್ ಕೂಡ ‌ಸಿನಿಮಾದ‌ ಭಾಗವಾಗಲಿದ್ದಾರೆ ಎಂದು ಇತ್ತೀಚೆಗೆ ಸುದ್ದಿಯಾಗಿತ್ತು.

ಈ ಸಿನಿಮಾದ ಬಗ್ಗೆ ಚರ್ಚೆ ಇರುವಾಗಲೇ ಇದೀಗ ರಜಿನಿಕಾಂತ್‌ ಅವರ ʼತಲೈವರ್171’ ಸಿನಿಮಾದ ಕುರಿತು ಬಿಗ್‌ ಅಪ್ಡೇಟ್‌ ವೊಂದು ಹೊರಬಿದ್ದಿದೆ.

ರಜಿನಿಕಾಂತ್‌ ಅವರೊಂದಿಗೆ ಲೋಕೇಶ್‌ ಕನಕರಾಜ್‌ ಸಿನಿಮಾ ಮಾಡಲಿದ್ದಾರೆ ಎನ್ನುವ ಬಗ್ಗೆ ಕಾಲಿವುಡ್‌ ನಲ್ಲಿ ಕಳೆದ ಕೆಲ ದಿನಗಳಿಂದ ಟಾಕ್‌ ಆಫ್‌ ದಿ ಟೌನ್‌ ಆಗಿ ಸುದ್ದಿ ಹರಿದಾಡಿತ್ತು. ಇದೀಗ ಸನ್‌ ಪಿಕ್ಚರ್ಸ್‌ ಈ ಸುದ್ದಿಯನ್ನು ಅಧಿಕೃತಗೊಳಿಸಿದೆ.

ಸೂಪರ್‌ ಸ್ಟಾರ್ ಅವರ ʼತಲೈವರ್171’ ಸಿನಿಮಾವನ್ನು ಘೋಷಿಸಲು ನಾವು ಸಂತೋಷಪಡುತ್ತೇವೆ. ಈ ಸಿನಿಮಾವನ್ನು ಲೋಕೇಶ್‌ ಕನಕರಾಜ್‌ ನಿರ್ದೇಶನ ಮಾಡಲಿದ್ದಾರೆ. ಅನಿರುದ್ಧ್‌ ಅವರ ಮ್ಯೂಸಿಕ್‌ ಇರಲಿದೆ. ಅನ್ಬುಅರಿವು ಅವರ ಸಾಹಸ ನಿರ್ದೇಶನ ಇರಲಿದೆ ಎಂದು ಸನ್‌ ಪಿಕ್ಚರ್ಸ್‌ ಟ್ವೀಟ್‌ ಮಾಡಿದೆ.

ಸಿನಿಮಾದ ಇತರ ಮಾಹಿತಿ ಮುಂದಿನ ದಿನಗಳಲ್ಲಿ ಹೊರಬೀಳಲಿದ್ದು, ಸದ್ಯ ಲೋಕೇಶ್‌ ಅವರು ʼಲಿಯೋʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಆ  ಬಳಿಕ ʼಕೈತಿ-2ʼ, ʼವಿಕ್ರಮ್-2‌ʼ ಮಾಡುವ ಯೋಜನೆಯಲ್ಲಿದ್ದಾರೆ.

ʼಜೈಲರ್‌ʼ ಬಳಿಕ ಸನ್‌ ಪಿಕ್ಚರ್ಸ್‌ ಮತ್ತೆ ರಜಿನಿಕಾಂತ್‌ ಸಿನಿಮಾವನ್ನು ನಿರ್ಮಾಣ ಮಾಡಲಿದೆ.

ʼತಲೈವರ್ 171ʼ ಲೋಕೇಶ್ ಸಿನೆಮ್ಯಾಟಿಕ್ ಯೂನಿವರ್ಸ್‌ನ ಭಾಗವಾಗಿದೆ ಎಂದು ಹೇಳಲಾಗುತ್ತದೆ, ಇದು ತಮಿಳು ಚಿತ್ರರಂಗದ ಎಲ್ಲಾ ಸೂಪರ್‌ಸ್ಟಾರ್‌ಗಳನ್ನು ಒಟ್ಟುಗೂಡಿಸುತ್ತದೆ ಎನ್ನಲಾಗುತ್ತಿದೆ.

ಹಿಂದಿನ ಲೇಖನಸೋಮನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಆರ್ ಡಿಪಿಆರ್ ಮುಖ್ಯ ಕಾರ್ಯದರ್ಶಿ ಡಾ.ಪಿ.ಸಿ.ಜಾಫರ್ ದಿಢೀರ್ ಭೇಟಿ
ಮುಂದಿನ ಲೇಖನಅರಣ್ಯ ಭೂಮಿ ಒತ್ತುವರಿ ತೆರೆವಿಗೆ ಪ್ರಾಮಾಣಿಕ ಯತ್ನ ಮಾಡಲು ಅಧಿಕಾರಿಗಳಿಗೆ ಈಶ್ವರ ಖಂಡ್ರೆ ಸೂಚನೆ