ಈಗಾಗಲೇ ಆರ್ಹೆತ್ಮಿಯಾ ಅಥವಾ ಒಂದು ರೀತಿಯ ಹೃದಯರಕ್ತನಾಳದ ಕಾಯಿಲೆಯನ್ನು ಹೊಂದಿರುವವರ ಮೇಲೆ ಮೂರನೇ ಅಧ್ಯಯನವನ್ನು ಕೈಗೊಳ್ಳಲಾಗಿತ್ತು. ಹೃದಯರಕ್ತನಾಳದ ಕಾಯಿಲೆ ಇರುವ ಜನರಿಗೆ, ಕಾಫಿ ಸೇವನೆ ಅವರ ಆರ್ಹೆತ್ಮಿಯಾವನ್ನು ಹೆಚ್ಚು ಮಾಡಿ ತೊಂದರೆಗೀಡು ಮಾಡಿದ ಉದಾಹರಣೆಗಳು ಲಭಿಸಿಲ್ಲ. ದಿನಕ್ಕೆ ಒಂದು ಕಪ್ ಕಾಫಿ ಸೇವಿಸುವ, ಆರ್ಹೆತ್ಮಿಯಾ ಹೊಂದಿರುವ ವಯಸ್ಕರಲ್ಲಿ ಅಕಾಲಿಕ ಮರಣದ ಅಪಾಯವನ್ನು ಕಡಿಮೆಗೊಳಿಸಿರುವುದು ಕಂಡು ಬಂದಿದೆ..
ಅತಿಯಾದ ಕಾಫಿ ಸೇವನೆಯಿಂದ ಆರೋಗ್ಯ ಹಾಳಾಗುತ್ತದೆ ಎಂಬದನ್ನು ಎಲ್ಲರೂ ಹೇಳುತ್ತಾರೆ.. ಆದರೆ, ಇಲ್ಲಿ ಮೂರು ಸಂಶೋಧನಾ ಸಾರಾಂಶಗಳ ಪ್ರಕಾರ ಪ್ರತಿದಿನ ಎರಡರಿಂದ ಮೂರು ಕಪ್ ಕಾಫಿ ಕುಡಿಯುವುದರಿಂದ ಶೇ.10 ರಿಂದ15ರಷ್ಟು ಹೃದ್ರೋಗ, ಹೃದಯದ ವೈಫಲ್ಯ ಅಪಾಯದಿಂದ ಪಾರಾಗಿ ದೀರ್ಘಾಯುಷಿಯಾಗಬಹುದು ಎಂದು ಸಿಎನ್ಎನ್ ವರದಿ ಮಾಡಿದೆ.
ಕಾಫಿ ಸೇವನೆಯಿಂದ ಯಾವುದೇ ತೊಂದರೆಗಳಿಲ್ಲ ಎಂಬುದನ್ನು ನಾವು ಅಧ್ಯಯನದಿಂದ ಕಂಡುಕೊಂಡಿದ್ದೇವೆ. ಅಂದರೆ ಅದರಿಂದ ಯಾವುದೇ ಹಾನಿಯಿಲ್ಲ. ಹೃದಯದ ಉತ್ತಮ ಆರೋಗ್ಯಕ್ಕೆ ಕಾಫಿ ಸಹಕಾರಿಯಾಗಿದೆ ಎಂದು ಮೆಲ್ಬೋರ್ನ್ ವಿಶ್ವವಿದ್ಯಾಲಯದ ಸಂಶೋಧಕ ಪೀಟರ್ ಎಂ. ಕಿಸ್ಟ್ಲರ್ ಹೇಳಿದ್ದಾರೆ. ಸಂಶೋಧಕರು ತಾವು ಮಾಡಿದ ಎಲ್ಲಾ ಅಧ್ಯಯನಗಳಿಗೆ, ಯುಕೆ ಬಯೋಬ್ಯಾಂಕ್‌ನಿಂದ ಡೇಟಾವನ್ನು ಬಳಸಿಕೊಂಡಿದ್ದಾರೆ.
ಬಯೋಬ್ಯಾಂಕ್ ಕನಿಷ್ಠ 10 ವರ್ಷಗಳವರೆಗೆ 5,00,000ಕ್ಕೂ ಅಧಿಕ ಜನರ ಆರೋಗ್ಯ ಫಲಿತಾಂಶಗಳನ್ನು ಕಲೆ ಹಾಕುತ್ತದೆ. ಇದರಲ್ಲಿ ಜನ ನೋಂದಣಿ ಮಾಡಿಕೊಳ್ಳುವಾಗ ತಾವು ದಿನಕ್ಕೆ ಒಂದು ಕಪ್‌ನಿಂದ ಆರು ಕಪ್‌ಗಳವರೆಗೆ ಅಥವಾ ಅದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಕಾಫಿ ಕುಡಿಯುತ್ತೇವೆ ಎಂಬುದನ್ನು ಹಂಚಿಕೊಂಡಿದ್ದಾರೆ.ಸದ್ಯದ ಸಂಶೋಧನೆಯನ್ನು ಪೂರೈಸಿದ ಸಂಶೋಧಕರು ಕಾಫಿ ಕುಡಿಯುವುದು ಮತ್ತು ಕಾಫಿ ಕುಡಿಯುವವರ ಹೃದಯದ ಆರೋಗ್ಯದ ನಡುವಿನ ಸಂಬಂಧವನ್ನು ಕಂಡು ಹಿಡಿಯಲು ಬಯಸಿದ್ದರು.
ಕಾರ್ಡಿಯೋವಾಸ್ಕುಲರ್, ಹೃದ್ರೋಗ, ಹೃದಯಾಘಾತ ಮತ್ತು ಪಾರ್ಶ್ವವಾಯು ಸೇರಿದಂತೆ ಹೃದಯ ರಕ್ತನಾಳದ ಕಾಯಿಲೆ, ಹೃದ್ರೋಗವಿದ್ದು ಸಾವನ್ನಪ್ಪಿದವರು ಹಾಗೂ ಹೃದಯದ ಕಾಯಿಲೆಗಳಿಲ್ಲದೆ ಸಾವನ್ನಪ್ಪಿದವರ ಬಗ್ಗೆ ಅಧ್ಯಯನ ಮಾಡಿದ್ದಾರೆ.ಸಾಮಾನ್ಯವಾಗಿ ವೈದ್ಯರು ಕಾಫಿ ಕುಡಿಯುವುದನ್ನು ಕಡಿಮೆಗೊಳಿಸಲು ಅಥವಾ ಕಾಫಿ ಕುಡಿಯುವುದನ್ನೇ ನಿಲ್ಲಿಸಲು ಸಲಹೆ ನೀಡುವುದರಿಂದ ಕೆಲವರಿಗೆ ಕಾಫಿ ಸೇವನೆಯಿಂದ ಹೃದಯದ ಸಮಸ್ಯೆಗಳು ಇನ್ನಷ್ಟು ಹೆಚ್ಚಾಗಬಹುದು ಎಂಬ ಭಯ ಇರುತ್ತದೆ. ಆದರೆ, ಕಾಫಿ ಸೇವನೆ ಹೃದಯಬಡಿತವನ್ನು ವೇಗಗೊಳಿಸುತ್ತದೆ. ನಾವು ಸಂಗ್ರಹಿಸಿದ ಡಾಟಾದ ಫಲಿತಾಂಶ, ಪ್ರತಿದಿನ ಕಾಫಿ ಸೇವಿಸಲು ಹೇಳುತ್ತದೆ.
ಹೃದಯ ಸಂಬಂಧಿ ಕಾಯಿಲೆಗಳಿದ್ದವರಿಗೆ ಅಥವಾ ಇಲ್ಲದೇ ಇದ್ದವರಿಗೂ ಆರೋಗ್ಯಕರ ಆಹಾರಗಳ ಒಂದು ಭಾಗವಾಗಿ ಕಾಫಿಯನ್ನೂ ಸೂಚಿಸುತ್ತದೆ ಎಂಬುದನ್ನು ಪೀಟರ್ ಹೇಳುತ್ತಾರೆ. ಮೂರು ಅಧ್ಯಯನಗಳಲ್ಲಿ, ಹೃದಯ ಸಂಬಂಧಿ ಕಾಯಿಲೆಗಳಿಲ್ಲದ ಸರಾಸರಿ 57 ವರ್ಷ ವಯಸ್ಸಿನ 382,500 ಕ್ಕಿಂತ ಹೆಚ್ಚು ವಯಸ್ಕರ ಮೇಲೆ ಮೊದಲ ಅಧ್ಯಯನ ಕೈಗೊಳ್ಳಲಾಗಿತ್ತು.ಇದರಲ್ಲಿ ಭಾಗವಹಿಸಿದವರಲ್ಲಿ ಪ್ರತಿದಿನ ಎರಡರಿಂದ ಮೂರು ಕಪ್ ಕಾಫಿ ಸೇವಿಸುವವರು, ಹೃದಯ ಸಂಬಂಧಿ ಸಮಸ್ಯೆಗಳ ಅಪಾಯವನ್ನು ಕಡಿಮೆ ಅನುಭವಿಸಿದವರು.
ದಿನಕ್ಕೆ ಒಂದು ಕಪ್ ಕಾಫಿ ಕುಡಿಯುವವರು ಪಾರ್ಶ್ವವಾಯು ಅಥವಾ ಹೃದಯರಕ್ತನಾಳದ ಕಾಯಿಲೆಯಿಂದ ಸಾಯುವ ಅಪಾಯ ಕಡಿಮೆ ಇರುತ್ತದೆ ಎಂಬುದನ್ನು ಸಂಶೋಧಕರು ಈ ಮೊದಲ ಅಧ್ಯಯನದಲ್ಲಿ ಕಂಡುಕೊಂಡಿದ್ದಾರೆ.ಇನ್ನೊಂದು ಅಧ್ಯಯನ ವಿವಿಧ ರೀತಿಯ ಕಾಫಿಗಳಾದ ಕೆಫಿಯೆನೇಟೆಡ್ ಗ್ರೌಂಡ್, ಕೆಫಿಯೆನೇಟೆಡ್ ಇನ್ಸ್ಟ್ಯಾಂಟ್ ಮತ್ತು ಡಿಕೆಫಿಯೆನೇಟೆಡ್ ಮತ್ತು ಮೇಲೆ ತಿಳಿಸಿದ ಕಾಯಿಲೆಗಳ ಬಗ್ಗೆ ಸಂಶೋಧನೆ ನಡೆಸಿದೆ. ದಿನಕ್ಕೆ ಒಂದರಿಂದ ಐದು ಕಪ್ ಗ್ರೌಂಡ್ ಅಥವಾ ಇನ್‌ಸ್ಟಂಟ್ ಕಾಫಿ ಕುಡಿಯುವುದರಿಂದ ಆರ್ಹೆತ್ಮಿಯಾ, ಹೃದ್ರೋಗ ಅಥವಾ ವೈಫಲ್ಯ ಅಥವಾ ಪಾರ್ಶ್ವವಾಯುಗೆ ತುತ್ತಾಗುವುದು ಕಡಿಮೆ. ಪ್ರತಿದಿನ ಎರಡರಿಂದ ಮೂರು ಕಪ್‌ಗಳಷ್ಟು ಯಾವುದೇ ರೀತಿಯ ಕಾಫಿಯನ್ನು ಕುಡಿಯುವುದರಿಂದ ಬೇಗ ಸಾಯುವ ಅಥವಾ ಹೃದ್ರೋಗದಿಂದ ಸಾಯುವ ಅಪಾಯ ಕಡಿಮೆ ಇರುತ್ತದೆ.ಈಗಾಗಲೇ ಆರ್ಹೆತ್ಮಿಯಾ ಅಥವಾ ಒಂದು ರೀತಿಯ ಹೃದಯರಕ್ತನಾಳದ ಕಾಯಿಲೆಯನ್ನು ಹೊಂದಿರುವವರ ಮೇಲೆ ಮೂರನೇ ಅಧ್ಯಯನವನ್ನು ಕೈಗೊಳ್ಳಲಾಗಿತ್ತು. ಹೃದಯರಕ್ತನಾಳದ ಕಾಯಿಲೆ ಇರುವ ಜನರಿಗೆ, ಕಾಫಿ ಸೇವನೆ ಅವರ ಆರ್ಹೆತ್ಮಿಯಾವನ್ನು ಹೆಚ್ಚು ಮಾಡಿ ತೊಂದರೆಗೀಡು ಮಾಡಿದ ಉದಾಹರಣೆಗಳು ಲಭಿಸಿಲ್ಲ. ದಿನಕ್ಕೆ ಒಂದು ಕಪ್ ಕಾಫಿ ಸೇವಿಸುವ, ಆರ್ಹೆತ್ಮಿಯಾ ಹೊಂದಿರುವ ವಯಸ್ಕರಲ್ಲಿ ಅಕಾಲಿಕ ಮರಣದ ಅಪಾಯವನ್ನು ಕಡಿಮೆಗೊಳಿಸಿರುವುದು ಕಂಡು ಬಂದಿದೆ.
ಹೃದಯರಕ್ತನಾಳದ ಕಾಯಿಲೆಯುಳ್ಳವರ ಮೇಲೆ ಪ್ರಭಾವ ಬೀರಬಹುದಾದಂತಹ ಆಹಾರದ ಅಂಶಗಳು, ಕಾಯಿಲೆಯುಳ್ಳವರು ಯಾವುದೇ ಕ್ರೀಮರ್, ಹಾಲು ಅಥವಾ ಸಕ್ಕರೆಗೆ ಹೊಂದಿಕೊಳ್ಳತ್ತಾರೆಯೇ ಎಂಬುದನ್ನು ಇಲ್ಲಿ ಪರಿಗಣಿಸಿಲ್ಲ. ಭಾಗವಹಿಸದವರೆಲ್ಲ ಬಿಳಿಯರಾಗಿದ್ದು, ಈ ಸಂಶೋಧನೆ ಇತರರಿಗೂ ಅನ್ವಯಿಸುತ್ತದೆಯೋ ಇಲ್ಲವೋ ಎಂಬುದು ಗೊತ್ತಿಲ್ಲ. ಕಾಫಿ ಸೇವನೆಯ ಬಗ್ಗೆ ಪ್ರಶ್ನಾವಳಿಗೆ ಉತ್ತರಿಸಿದವರು ತಮಗನಿಸಿದ ರೀತಿಯಲ್ಲಿ ತಮ್ಮದೇ ಅಭಿಪ್ರಾಯವನ್ನು ನಮೂದಿಸಿರುತ್ತಾರೆ. ಅದು ನೈಜ ಮಾಹಿತಿಯೋ ಅಲ್ಲವೋ ಎಂಬುದನ್ನು ಮತ್ತೆ ಪರೀಕ್ಷೆಗೊಳಪಡಿಸಿಲ್ಲ ಎಂಬುದನ್ನು ಇಲ್ಲಿ ನಾವು ಗಮನಿಸಬೇಕಾಗುತ್ತದೆ.ಒಂದು ಅಧ್ಯಯನದ ಆವಿಷ್ಕಾರಗಳನ್ನು ಅರ್ಥೈಸುವಾಗ ನಾವು ಇದನ್ನೆಲ್ಲ ಪರಿಗಣಿಸಬೇಕಾಗುತ್ತದೆ. ಆದರೂ ಜನರ ಆಹಾರ ಪದ್ಧತಿಯು ಪ್ರೌಢಾವಸ್ಥೆಯಲ್ಲಿ ಅಥವಾ ನಂತರದಲ್ಲಿ ಹೆಚ್ಚು ಬದಲಾವಣೆಯಾಗುವುದಿಲ್ಲ. ಹಾಗಾಗಿ ಈ ಸಂಶೋಧನೆಯ ಫಲಿತಾಂಶವನ್ನು ಪರಿಗಣಿಸಬೇಕು ಎಂದು ಸಂಶೋಧಕ ಪೀಟರ್ ಎಂ. ಕಿಸ್ಟ್ಲರ್ ಹೇಳುತ್ತಾರೆ.