ಮನೆ ರಾಜ್ಯ ಪ್ರಜ್ವಲ್‌ ರೇವಣ್ಣ ವಿರುದ್ಧ ಲುಕ್‌ ಔಟ್ ನೋಟಿಸ್

ಪ್ರಜ್ವಲ್‌ ರೇವಣ್ಣ ವಿರುದ್ಧ ಲುಕ್‌ ಔಟ್ ನೋಟಿಸ್

0

ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯಾಗಿರುವ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ಎಸ್ಐಟಿ ಅಧಿಕಾರಿಗಳು ಲುಕ್‌ ಔಟ್ ನೋಟಿಸ್ ಹೊರಡಿಸಿದ್ದಾರೆ.

Join Our Whatsapp Group

ಹೊಳೆನರಸೀಪುರ ಟೌನ್ ಠಾಣೆಯಲ್ಲಿ ದಾಖಲಾಗಿರುವ‌ ಪ್ರಕರಣದಲ್ಲಿ ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ ಹಾಗೂ ಅವರ ಮಗ ಪ್ರಜ್ವಲ್ ಆರೋಪಿಗಳಾಗಿದ್ದಾರೆ.

ಪ್ರಕರಣ ದಾಖಲಾಗುವ‌ ಮುನ್ನವೇ ಪ್ರಜ್ವಲ್‌ ದೇಶದಿಂದ‌ ಪರಾರಿಯಾಗಿದ್ದಾರೆ. ವಿಚಾರಣೆಗೆ ನೋಟಿಸ್ ನೀಡಿದರೂ ಹಾಜರಾಗಿಲ್ಲ.

ಪ್ರಜ್ವಲ್ ವಿದೇಶದಲ್ಲಿರುವ ಬಗ್ಗೆ ಎಸ್ಐಟಿ ಅಧಿಕಾರಿಗಳು ಮಾಹಿತಿ ಕಲೆ‌ ಹಾಕಿದ್ದಾರೆ. ಪ್ರಜ್ವಲ್ ಪತ್ತೆಗಾಗಿ‌ ಲುಕ್ ಔಟ್ ನೋಟಿಸ್ ಜಾರಿ‌ ಮಾಡಿ, ವಿಮಾನ ನಿಲ್ದಾಣ ಅಧಿಕಾರಿಗಳು ಹಾಗೂ ಅಂತರರಾಷ್ಟ್ರೀಯ ತನಿಖಾ ಸಂಸ್ಥೆಗಳಿಗೆ ರವಾನಿಸಿದ್ದಾರೆ.

ಲುಕ್‌ಔಟ್ ನೋಟಿಸ್ ಬಳಿಕವೂ ಪ್ರಜ್ವಲ್‌ ಪತ್ತೆಯಾಗದಿದ್ದರೆ, ಆತನ ಪತ್ತೆಗೆ ನ್ಯಾಯಾಲಯದಿಂದ ಜಾಮೀನು ರಹಿತ ವಾರೆಂಟ್ ಜಾರಿಯಾಗುವ ಸಾಧ್ಯತೆ ಇದೆ.

ಹಿಂದಿನ ಲೇಖನಊಟಿ, ಕೊಡೈಕೆನಾಲ್ ಪ್ರವೇಶಿಸುವ ವಾಹನಗಳಿಗೆ ಪ್ರಾಯೋಗಿಕವಾಗಿ ಇ ಪಾಸ್ ವ್ಯವಸ್ಥೆ: ಮದ್ರಾಸ್ ಹೈಕೋರ್ಟ್ ಆದೇಶ
ಮುಂದಿನ ಲೇಖನಏ.೮ ಕ್ಕೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ