ಮನೆ ಕಾನೂನು ಕಲಿಯುಗ ಬಂದಂತೆ ತೋರುತ್ತಿದೆ: ವೃದ್ಧ ದಂಪತಿಯ ಜೀವನಾಂಶ ಕಾನೂನು ಹೋರಾಟ

ಕಲಿಯುಗ ಬಂದಂತೆ ತೋರುತ್ತಿದೆ: ವೃದ್ಧ ದಂಪತಿಯ ಜೀವನಾಂಶ ಕಾನೂನು ಹೋರಾಟ

0

ನವದೆಹಲಿ: ಈ ಪ್ರಕರಣಗಳನ್ನು ಗಮನಿಸಿದರೆ “ಕಲಿಯುಗ ಬಂದಂತೆ ತೋರುತ್ತಿದೆ…ಹೀಗೆಂದು ಅಭಿಪ್ರಾಯವ್ಯಕ್ತಪಡಿಸಿದ್ದು ಅಲಹಾಬಾದ್‌ ಹೈಕೋರ್ಟ್.‌ ಅದಕ್ಕೆ ಕಾರಣ 75-80 ವರ್ಷ ನಡುವಿನ ದಂಪತಿಯ ಜೀವನಾಂಶದ ಕಾನೂನು ಹೋರಾಟದ ಪ್ರಕರಣ!

Join Our Whatsapp Group

ಪತ್ನಿಯ ಪರವಾಗಿ ಕೌಟುಂಬಿಕ ನ್ಯಾಯಾಲಯ ಜೀವನಾಂಶ ನೀಡಬೇಕೆಂದು ನೀಡಿರುವ ಆದೇಶದ ವಿರುದ್ಧ ಪತಿ, ಅಲಿಗಢ್‌ ನಿವಾಸಿ ಮುನೇಶ್‌ ಕುಮಾರ್‌ ಗುಪ್ತಾ(80ವರ್ಷ) ಸಲ್ಲಿಸಿದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ವೇಳೆ ಜಸ್ಟೀಸ್‌ ಸೌರಭ್‌ ಶ್ಯಾಮ್‌ ಶಂಶೇರಿ ಈ ಮೇಲಿನಂತೆ ಅಭಿಪ್ರಾಯವ್ಯಕ್ತಪಡಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ಜಸ್ಟೀಸ್‌ ಸೌರಭ್‌ ಅವರು, ಜೀವನಾಂಶದ ಕುರಿತ ಕಾನೂನು ಹೋರಾಟ ಕಳವಳಕಾರಿ ವಿಷಯವಾಗಿದೆ. ಆದರೂ ದಂಪತಿಗೆ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವ ಬಗ್ಗೆ ಸಲಹೆ ನೀಡಲು ಪ್ರಯತ್ನಿಸಿರುವುದಾಗಿ ವರದಿ ವಿವರಿಸಿದೆ.

ತನಗೆ ಕೌಟುಂಬಿಕ ನ್ಯಾಯಾಲಯ ನೀಡಿರುವ ಆದೇಶದ ಪ್ರಕಾರ ಪತಿ ಜೀವನಾಂಶ ನೀಡಬೇಕೆಂಬುದು ಪತ್ನಿಯ ಬೇಡಿಕೆಯಾಗಿದೆ. ಆದರೆ ಪತಿ ಗುಪ್ತಾ ಈ ಆದೇಶವನ್ನು ಪ್ರಶ್ನಿಸಿ ಪತ್ನಿಗೆ ನೋಟಿಸ್‌ ನೀಡಿದ್ದರು. ಏತನ್ಮಧ್ಯೆ ಅಲಹಾಬಾದ್‌ ಹೈಕೋರ್ಟ್‌, ಮುಂದಿನ ವಿಚಾರಣೆ ವೇಳೆ ದಂಪತಿ ಒಪ್ಪಂದದೊಂದಿಗೆ ಹಾಜರಾಗುವಂತೆ ಭರವಸೆ ವ್ಯಕ್ತಪಡಿಸಿ ವಿಚಾರಣೆ ಮುಂದೂಡಿರುವುದಾಗಿ ವರದಿ ತಿಳಿಸಿದೆ.