ಮನೆ ರಾಜ್ಯ ಮದ್ಯ ಸಾಗಿಸುತ್ತಿದ್ದ ಲಾರಿ ಪಲ್ಟಿ: ಇಬ್ಬರಿಗೆ ಗಂಭೀರ ಗಾಯ

ಮದ್ಯ ಸಾಗಿಸುತ್ತಿದ್ದ ಲಾರಿ ಪಲ್ಟಿ: ಇಬ್ಬರಿಗೆ ಗಂಭೀರ ಗಾಯ

0

ಯಲ್ಲಾಪುರ: ಮದ್ಯ ಪ್ಯಾಕೆಟ್ ಗಳನ್ನು ತುಂಬಿದ ಲಾರಿ ಚಾಲಕನ‌ ನಿಯಂತ್ರಣ ತಪ್ಪಿ ಕಂದಕದಲ್ಲಿ ಪಲ್ಟಿಯಾಗಿರುವ ಘಟನೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63ರ ಬಳಗಾರ ಕ್ರಾಸ್ ಬಳಿ ನಡೆದಿದೆ.

Join Our Whatsapp Group

ಕಲಬುರ್ಗಿಯಿಂದ ಉಡುಪಿಗೆ ಸಾರಾಯಿ ಪಾಕೇಟ್ ತುಂಬಿದ್ದ ಲಾರಿ ಆರತಿಬೈಲ್ ಘಟ್ಟದ ಇಳಿಜಾರಿನಲ್ಲಿ ನಿಯಂತ್ರಣ ತಪ್ಪಿ ಹಳ್ಳದ ಪಕ್ಕದ ಕಂದಕದಲ್ಲಿ ಬಿದ್ದು ಮರಕ್ಕೆ ಢಿಕ್ಕಿ ಹೊಡೆದು ನಿಂತಿದೆ. ಲಾರಿ ಚಾಲಕನಿಗೆ ಅಲ್ಪಪ್ರಮಾಣದ ಗಾಯವಾಗಿದೆ. ನಿರ್ವಾಹಕ ಲಾರಿಯಲ್ಲಿ ಸಿಕ್ಕಿ ಒದ್ದಾಡಿದ್ದು,ತಾಸು ಗಟ್ಟಲೆ ಒದ್ದಾಡಿ ಹೊರತೆಗೆಯಲಾಗಿದೆ.ಆತನ ಕೈಕಾಲು ಮುರಿದಿದ್ದು,ಗಂಭೀರ ಗಾಯಗೊಂಡಿದ್ದಾನೆ.

ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಲಾರಿ ಸಂಪೂರ್ಣ ನುಜ್ಜು ಗುಜ್ಜಾಗಿದೆ. ಲಾರಿಯಲ್ಲಿ1700 ಬಾಕ್ಸ್ ಮದ್ಯದ ಪ್ಯಾಕೆಟ್ ಗಳಿದ್ದು, ಅರ್ಧದಷ್ಟು ಒಡೆದು ಹಾಳಾಗಿದೆ. ಸುತ್ತ ಮುತ್ತಲಿನ ದಾರಿ ಹೋಕರು ಹಲವನ್ನು ದೋಚಿದ್ದಾರೆ.

ಹಿಂದಿನ ಲೇಖನಸಿದ್ಧರಾಮಯ್ಯ ಸಿಎಂ, ಡಿಕೆಶಿ ಡಿಸಿಎಂ: ಲೋಕಸಭಾ ಚುನಾವಣಾ ದೃಷ್ಠಿಯಿಂದ ನಿರ್ಧಾರ – ಶಾಸಕ ಲಕ್ಷ್ಮಣ್ ಸವದಿ.
ಮುಂದಿನ ಲೇಖನಸಕ್ಕರೆಗಿಂತ ಬೆಲ್ಲ ಉತ್ತಮವೇ? ಕ್ಯಾಲೋರಿಗಳು, ಪೋಷಕಾಂಶಗಳ ಬಗ್ಗೆ ತಿಳಿಯಿರಿ