ಮನೆ Uncategorized ಲಾರಿ ಚಾಲಕನ ಅಜಾಗರೂಕತೆ : ರೈಲ್ವೆ ಹಳಿ ಮೇಲೆ ಬಿದ್ದ ಕಬ್ಬಿಣದ ಪ್ಲೇಟ್‌ಗಳು

ಲಾರಿ ಚಾಲಕನ ಅಜಾಗರೂಕತೆ : ರೈಲ್ವೆ ಹಳಿ ಮೇಲೆ ಬಿದ್ದ ಕಬ್ಬಿಣದ ಪ್ಲೇಟ್‌ಗಳು

0

ಬಳ್ಳಾರಿ : ಅತಿ ವೇಗದಲ್ಲಿ ಬಂದು ಟರ್ನ್ ಮಾಡಿದ ಲಾರಿ ಚಾಲಕನ ಅಜಾಗರೂಕತೆಯಿಂದ ಲಾರಿಯಲ್ಲಿದ್ದ 20ಕ್ಕೂ ಹೆಚ್ಚು ಭಾರಿ ಕಬ್ಬಿಣದ ಪ್ಲೇಟ್‌ಗಳು ನೇರವಾಗಿ ರೈಲ್ವೆ ಹಳಿ ಮೇಲೆ ಬಿದ್ದ ಘಟನೆ ಬಳ್ಳಾರಿ ಹೊರವಲಯದ ಬೆಂಗಳೂರು ಮಾರ್ಗದಲ್ಲಿ ನಡೆದಿದೆ.

ಘಟನೆ ಸ್ಥಳ ಬಳ್ಳಾರಿಯ ಹಲಕುಂದಿ ಗ್ರಾಮದ ಬಳಿ ಇರುವ ಐದನೇ ಗೇಟ್‌ನಲ್ಲಿ ನಡೆದ ಅವಘಡದಿಂದ ಬಹುದೊಡ್ಡ ಅನಾಹುತವೊಂದು ತಪ್ಪಿದೆ. ಲಾರಿ ಸ್ಟೀಲ್ ಕಂಪನಿಯೊಂದರಿಂದ ಕಬ್ಬಿಣದ ಪ್ಲೇಟ್‌ಗಳನ್ನು ಬೆಂಗಳೂರು ಕಡೆಗೆ ಸಾಗಿಸುತ್ತಿತ್ತು. ಆದರೆ ಚಾಲಕ 80 ಕಿ.ಮೀ. ವೇಗದಲ್ಲಿ ಸಾಗುತ್ತಲೇ ಕಿರಿದಾದ ರಸ್ತೆಯಲ್ಲಿ ತಿರುವು ತೆಗೆದು ಕೊಂಡಾಗ ಲಾರಿಯಲ್ಲಿದ್ದ ಕಬ್ಬಿಣದ ಪ್ಲೇಟ್‌ಗಳು ನಿಯಂತ್ರಣ ತಪ್ಪಿ ರೈಲ್ವೆ ಹಳಿ ಮೇಲೆ ಬಿದ್ದುಹೋಗಿದೆ.

ಘಟನೆಯು ಸಂಭವಿಸಿದ ತಕ್ಷಣ ಸ್ಥಳೀಯ ನಾಗರಿಕರು ತಕ್ಷಣ ಸ್ಪಂದಿಸಿ ಹಳಿ ಮೇಲೆ ಬಿದ್ದ ಕಬ್ಬಿಣದ ಪ್ಲೇಟ್‌ಗಳನ್ನು ತೆರವುಗೊಳಿಸಲು ಮುಂದಾದರು. ಅವರ ಶೀಘ್ರ ಕಾರ್ಯಚಟುವಟಿಕೆಯಿಂದ ಭಾರೀ ಅನಾಹುತ ತಪ್ಪಿತು. ಯಾವುದಾದರೂ ರೈಲು ಆ ಸಮಯದಲ್ಲಿ ಹಳಿ ಮೂಲಕ ಸಾಗಿದ್ದರೆ, ಬಹುದೊಡ್ಡ ಅನಾಹುತ ನಡೆಯುತ್ತಿತ್ತು.

ಸ್ಥಳಕ್ಕೆ ರೈಲ್ವೆ ಅಧಿಕಾರಿಗಳು ಕೂಡ ತಕ್ಷಣ ಬಂದು ಪರಿಶೀಲನೆ ನಡೆಸಿದ್ದಾರೆ. ಅಧಿಕಾರಿಗಳು ಲಾರಿ ಚಾಲಕನ ವಿರುದ್ಧ ಕ್ರಮಕೈಗೊಳ್ಳಲು ಕ್ರಮಾರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.