ಮನೆ ಮನರಂಜನೆ ಲೂಸ್‌ ಮಾದ ಯೋಗಿ 50ನೇ ಚಿತ್ರ ‘ರೋಸಿ’

ಲೂಸ್‌ ಮಾದ ಯೋಗಿ 50ನೇ ಚಿತ್ರ ‘ರೋಸಿ’

0

“ಲೂಸ್‌ ಮಾದ’ ಯೋಗಿ ನಾಯಕರಾಗಿರುವ 50ನೇ ಚಿತ್ರದ ಮುಹೂರ್ತ ಹಾಗೂ ಟೈಟಲ್‌ ಲಾಂಚ್‌ ಸಮಾರಂಭ ಭಾನುವಾರ ನಡೆದಿದೆ. ನಗರದ ನವರಂಗ್‌ ಚಿತ್ರಮಂದಿರದ ಮುಂದೆ ಹಾಕಲಾಗಿದ್ದ ಕಲರ್‌ ಫುಲ್‌ ವೇದಿಕೆಯಲ್ಲಿ ನಟ ಧನಂಜಯ್‌ ಚಿತ್ರದ ಟೈಟಲ್‌ ಲಾಂಚ್‌ ಮಾಡಿ, ಶುಭಕೋರಿದರು.

Join Our Whatsapp Group

ಅಂದಹಾಗೆ, ಯೋಗಿಯ 50ನೇ ಚಿತ್ರಕ್ಕೆ “ರೋಸಿ’ ಎಂದು ಟೈಟಲ್‌ ಇಡಲಾಗಿದೆ. ಶೂನ್ಯ ಈ ಸಿನಿಮಾದ ನಿರ್ದೇಶಕರು. ಈ ಹಿಂದೆ “ಹೆಡ್‌ ಬುಷ್‌’ ಸಿನಿಮಾ ನಿರ್ದೇಶನ ಮಾಡದ್ದ ಶೂನ್ಯ ಈಗ “ರೋಸಿ’ ಹಿಂದೆ ಬಿದ್ದಿದ್ದಾರೆ. ಇದೊಂದು ಔಟ್‌ ಅಂಡ್‌ ಔಟ್‌ ಗ್ಯಾಂಗ್‌ ಸ್ಟರ್‌ ಸಬ್ಜೆಕ್ಟ್.

ಚಿತ್ರದ ಬಗ್ಗೆ ಮಾತನಾಡುವ ಯೋಗಿ, “ನಿರ್ದೇಶಕ ಶೂನ್ಯ ಬೇರೆ ತರಹದ ಕಥೆ ಮಾಡಿಕೊಂಡಿದ್ದಾರೆ. ಇದು ನೆಕ್ಸ್ಟ್ ಲೆವೆಲ್‌ ಸಿನಿಮಾ ಆಗಲಿದೆ. ಗ್ಯಾಂಗ್‌ಸ್ಟಾರ್‌ ಕಥೆ. ಇಲ್ಲಿ ರೋಸಿ ನಾಯಕನ ಹೆಸರು. ನಾನು ಈ ಹಿಂದೆ ಲವ್‌, ಕಾಮಿಡಿ ಸಿನಿಮಾಗಳನ್ನು ಪ್ರಯತ್ನ ಮಾಡಿದೆ. ಆದರೆ, ಅವ್ಯಾವುವು ದೊಡ್ಡ ಮಟ್ಟ ದಲ್ಲಿ ವರ್ಕೌಟ್‌ ಆಗಲಿಲ್ಲ. ಆಗ ಗೊತ್ತಾಯ್ತು, ನಮ್ಮ ರೂಟ್‌ ಇದೇ ಎಂಬುದು. ಹಾಗಾಗಿ, ಮತ್ತೆ ಗ್ಯಾಂಗ್‌ ಸ್ಟರ್‌ ಸಿನಿಮಾ ಒಪ್ಪಿಕೊಂಡಿದ್ದೇನೆ’ ಎಂದರು.

ಇನ್ನು, 50 ಸಿನಿಮಾಗಳನ್ನು ಪೂರೈಸಿದ ಯೋಗಿಗೆ ತಮ್ಮ ಸಿನಿಜರ್ನಿ ಬಗ್ಗೆ ಖುಷಿ ಇದೆ. “ನಾನು ಸಿನಿಮಾ ಏನೂ ಕಲಿಯದೇ ಚಿತ್ರರಂಗಕ್ಕೆ ಬಂದವನು. ಮೊದಲ ಸಿನಿಮಾದಲ್ಲಿ ಸೂರಿಯವರ ಸಿನಿಮಾ ಪಾಠದಿಂದ ಹಿಡಿದು ಆ ನಂತರ ಮಾಡಿದ ಪ್ರತಿ ಸಿನಿಮಾದ ನಿರ್ದೇಶಕರಿಂದಲೂ ಸಿನಿಮಾ ಬಗ್ಗೆ ಕಲಿಯುತ್ತಾ ಬಂದಿದ್ದೇನೆ. ಸೋಲು-ಗೆಲುವು ಏನೇ ಇದ್ದರೂ ಇಷ್ಟು ವರ್ಷದ ಸಿನಿಮಾ ಜರ್ನಿ ಖುಷಿ ಕೊಟ್ಟಿದೆ. ಮುಖ್ಯವಾಗಿ ಇವತ್ತು 50ನೇ ಸಿನಿಮಾ ಮುಹೂರ್ತ ಆಚರಿಸಿಕೊಳ್ಳಲು ಕಾರಣ ಅಭಿಮಾನಿಗಳು. ಅವರ ಪ್ರೋತ್ಸಾಹವಿಲ್ಲದೇ ಇದು ಸಾಧ್ಯವಿಲ್ಲ’ ಎಂದರು. ಅಂದಹಾಗೆ, “ರೋಸಿ’ ಕನ್ನಡದ ಜೊತೆಗೆ ಬೇರೆ ಭಾಷೆಗಳಲ್ಲೂ ಬಿಡುಗಡೆಯಾಗಲಿದೆ.

ಹಿಂದಿನ ಲೇಖನಜೆಡಿಎಸ್ ಅಧಿಕಾರಕ್ಕೆ ಬಂದರೆ ರೈತ ಮಕ್ಕಳನ್ನು ಮದುವೆಯಾದವರಿಗೆ 2 ಲಕ್ಷ ಅನುದಾನ: ಹೆಚ್ ​ಡಿ ಕುಮಾರಸ್ವಾಮಿ
ಮುಂದಿನ ಲೇಖನಮೋದಿ ಪ್ರಪಂಚದ ಹುಲಿ: ಕೆ.ಎಸ್.ಈಶ್ವರಪ್ಪ