ಮನೆ ಆರೋಗ್ಯ ಲೋ ಬಿಪಿ ಎಂದರೆ….

ಲೋ ಬಿಪಿ ಎಂದರೆ….

0

 ★ಬಿಪಿ 90 /60 ಕ್ಕಿಂತ ಕಡಿಮೆ ಇದ್ದು, ಕಣ್ಣು ಕತ್ತಲಿಟ್ಟುಕೊಳ್ಳುವುದು, ತಲೆ ಸುತ್ತುವುದು, ಮೈತಣ್ಣಗಾಗಿ ಬೆವರು ಬರುವುದು ಇಂತಹ ಲಕ್ಷಣಗಳು ಕಂಡು ಬಂದಾಗ  ಲೋ ಬಿಪಿ ಅಥವಾ ಹೈಫೋಟೆನ್ಷನ್ ಇದೆ ಎಂದರ್ಥ.

Join Our Whatsapp Group

★. ಕೆಲವರಿಗೆ 90 /60 ಇರುವುದರಿಂದ ಸಾಮಾನ್ಯ.  ಅಂತಹವರಿಗೆ ಮೇಲೆ ಹೇಳಿದ ಯಾವ ಲಕ್ಷಣಗಳೂ ಇಲ್ಲದಿದ್ದರೆ ಅದನ್ನು ಲೋ  ಬಿಪಿ ಎಂದು ಭಾವಿಸುವ ಅವಶ್ಯಕತೆಯಿಲ್ಲ.

      ★ ಕೆಲವು ಕುಟುಂಬದಲ್ಲಿ ಲೋ ಬಿಪಿ  ಹಿರಿಯರ ಬಳುವಳಿಯಾಗಿ (ವಂಶಪಾರಂಪರ್ಯವಾಗಿ )ಬರುತ್ತದೆ. ಇಂತಹ ಸಂದರ್ಭದಲ್ಲಿ ಏನು ತಿಂದರೂ, ಯಾವ ಔಷಧಿಗಳನ್ನು ತೆಗೆದುಕೊಂಡರೂ ಎಷ್ಟು ವಯಸ್ಸಾದರೂ ಇದರಿಂದ ಬಾಧೆ ಪಡುತ್ತಾರೆ.

ಬಿಸಿದು ಸೆಕೆಯಿಂದ

 ★ಬಹಳ ಹೊತ್ತು ಬಿಸಿಲಿನಲ್ಲಿ ಸೆಕೆಯಲ್ಲಿ ಇದ್ದಾಗ ಕಣ್ಣು ಕತ್ತಲಿಡುವುದು, ತಲೆ ಸುತ್ತಿ ಬಿಳುವುದು ಸಹಜ. ಅಂತಹ ಸಂದರ್ಭದಲ್ಲಿ ಯಾವುದಾದರೂ ಒಂದು ವಸ್ತುವನ್ನು ಆಧಾರವಾಗಿ ಹಿಡಿದುಕೊಂಡು ತಲೆತಗ್ಗಿಸಿ ನಿಲ್ಲುವುದು, ಮೊಣಕಾಲುಗಳ ಮೇಲೆ ತಲೆಯನ್ನು ಆಧಾರವಾಗಿಸಿಕೊಂಡು ಕುಳಿತುಕೊಳ್ಳುವುದು ಮಾಡಬೇಕು. ಎದ್ದು ನಿಂತಾಗ ಈ ಕ್ಷಣಗಳು ಮರುಕಳಿಸಬಹುದು.

★ಅತಿ ಹೆಚ್ಚಾದ ಬಿಸಿಲು,  ಸೆಕೆ, ಬಿಪಿಯನ್ನು ತಾತ್ಕಾಲಿಕವಾಗಿ ಕಡಿಮೆ ಮಾಡಬಹುದು ಬಹಳ ಹೊತ್ತು ಕ್ಯೂನಿಂತಾಗಲೂ, ಬಿಪಿ ಕಡಿಮೆಯಾಗಿ ಪ್ರಜ್ಞೆ ತಪ್ಪಬಹುದು ಇದು ತಾತ್ಕಾಲಿಕ ಅಂತ ಸಮಯದಲ್ಲಿ ಕುಳಿತುಕೊಳ್ಳುವುದು,ಮಲಗಿಕೊಳ್ಳುವುದು ಮಾಡಿದಾಗ ಸರಿ ಹೋಗುತ್ತದೆ.

★   ಈಗ ನಮ್ಮ ಬಿಪಿಯನ್ನು ನಾವೇ ನೋಡಿಕೊಳ್ಳಬಹುದಾಂದ ತಹ ಎಲೆಕ್ಟ್ರಾನಿಕ್ ಬಿಪಿ ಇನ್ ಸ್ಟ್ರುಮೆಂಟ್ ಲಭ್ಯವಿದೆ. ಆದರೆ ಇವು ಸರಿಯಾದ ರೀಡಿಂಗ್ ತೋರಿಸಲಾರವು.ಅಂತಹ ರೀಡಿಂಗ್ ಗಳನ್ನು ನೋಡೇ ಕೆಲವರಿಗೆ ಬಿಪಿ ಅಧಿಕವಾಗುತ್ತದೆ!ಅನವಶ್ಯಕ ಟೆನ್ಷನ್ ಗೆ ಗುರಿಯಾಗಬೇಕಾಗುತ್ತದೆ. ಆದಷ್ಟು ಮರ್ಕ್ಯುರಿ ಇನ್ ಸ್ಟ್ರುಮೆಂಟ್ ಉಪ ಯೋಗಿಸುವುದು ಒಳ್ಳೆಯದು. ವೈದ್ಯರಿಂದ ಪರೀಕ್ಷೆ ಮಾಡಿಸಿಕೊಳ್ಳುವುದು ಎಲ್ಲಕ್ಕಿಂತ ಉತ್ತಮ.

 ಮಾನಸಿಕವಾಗಿ

★ಇತ್ತೀಚಿನ ದಿನಗಳಲ್ಲಿ  ಎಲ್ಲರೂ ಮನೆಯಲ್ಲಿ ಅಥವಾ ಹೊರಗೆ ಯಾವುದಾದರೂ ಒಂದು ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಖಿನ್ನತೆ  (ಡಿಪ್ರೆಷನ್ ),ನಿರುತ್ಸಾಹ  (ಫಸ್ಟ್ರೇಷನ್), ಉದ್ವೇಗ( ಆಂಕ್ಸೈಟಿ )ಇವುಗಳ ಪರಿಣಾಮವಾಗಿ ಲೋ ಬಿಪಿಗೆ ತುತ್ತಾಗುತ್ತಾರೆ.ಇಂತಹವರು ಡಾಕ್ಟರರ ಬಳಿ – ಅವರು ಏನೂ ಹೇಳುವ ಮೊದಲೇ ‘ನನಗೆ ಲೋ ಬಿಪಿ’  ಇರಬಹುದು ಡಾಕ್ಟರ್ ಎಂದು ಹೇಳಬಲ್ಲರು.

    ★ಶಾರೀರಿಕ ಲಕ್ಷಣಗಳು – ಭಂಗಿ/ ಕುಳಿತಲ್ಲಿಂದ ತಕ್ಷಣ ಏಳುವುದು. ಬಿಪಿಯಲ್ಲಿ ವ್ಯತ್ಯಾಸವಾಗುತ್ತದೆ,ಬಹಳ ಹೊತ್ತು ಮಲಗಿದ್ದಾಗ,ಕುಳಿತಿದ್ದಾಗ ತಕ್ಷಣ ಎದ್ದಾಗ ತೊಂದರೆಯಾಗುವುದು ಸಾಧ್ಯವಿದೆ. ಅಂತಹ ಸಂದರ್ಭದಲ್ಲಿ ಬಿಪಿಯನ್ನು ನೆನಪಿಟ್ಟುಕೊಳ್ಳಬೇಕು.

ಲೋ ಬಿಪಿಯಲ್ಲಿ ‘ಅತಿ’

 ★ಕೆಲವು ಬಾರಿ ಯುವಕರಿಗೂ ವಿನಾಕಾರಣ ರೋಗರಹಿತರಾಗಿದ್ದರೂ ಬಿಪಿ ಹೆಚ್ಚು ಕಡಿಮೆಯಾಗಬಹುದು. ಬಿಪಿ ರೇಡಿಂಗ್ 90/ 60 ನೋಡೇ ಭಯವುಂಟಾಗಬಹುದು.

   ಸಾಮಾನ್ಯವಾಗಿ ಲೋ ಬಿಪಿಗೆ ಯಾವ ವಿಶೇಷವಾದ ಚಿಕಿತ್ಸೆ ಇಲ್ಲ. ಸಮಯವೇ ಅದಕ್ಕೆ ಔಷಧಿ. ಕಾಲಕ್ರಮೇಣ ಸರಿಹೋಗುತ್ತದೆ.ದೇಹದ ಪರಿಸ್ಥಿತಿಗೆ ತಕ್ಕಂತೆ ಬಿಪಿ  ಸರಿಹೊಂದುತ್ತದೆ.  ಇಂತಹವರು ಜೇನುತುಪ್ಪ ನಿಂಬೆಹಣ್ಣಿನ ರಸದಲ್ಲಿ ಒಂದು ಚಿಟಕಿ ಉಪ್ಪು ಸೇರಿಸಿ ಸೇವಿಸುತ್ತಿದ್ದರೆ ಉತ್ಸಾಹಭರಿತರಾಗಿರುತ್ತಾರೆ.

    ★ಕೆಲವೊಂದು ಬಾರಿ ಫ್ಲೊನಂತಹ ವೈರಲ್ ಇನ್ ಫೆಕ್ಷನ್ನಿಂದಲೂ  ಬಿಪಿ ಕಡಿಮೆಯಾಗಬಹುದು. ಆದರೆ ಅದು ತಾತ್ಕಾಲಿಕವಾದ್ದು, ಕೆಲವು ದಿನಗಳ ನಂತರ ಸಾಮಾನ್ಯ ಸ್ಥಿತಿಗೆ  ಬರುತ್ತದೆ.