ಮನೆ ಆರೋಗ್ಯ ಲೋಯರ್ ರೆಸ್ಪಿರೇಟರಿ ಟ್ರ್ಯಾಕ್ಟ್ ಇನ್ಫೆಕ್ಷನ್

ಲೋಯರ್ ರೆಸ್ಪಿರೇಟರಿ ಟ್ರ್ಯಾಕ್ಟ್ ಇನ್ಫೆಕ್ಷನ್

0

ಇದರಲ್ಲಿ ಸೋಂಕಿಗೆ ತಕ್ಕಂತೆ ಲಕ್ಷಣಗಳಿರುತ್ತದೆ. ಗಂಟಲುನೋವು, ಮಾತನಾಡಲಾಗದಿರುವುದು. ಎದೆಯಲ್ಲಿಉರಿ, ಕೆಮ್ಮಿನ ಲಕ್ಷಣಗಳು ಇರುತ್ತದೆ. ಚಿಕ್ಕ ಮಕ್ಕಳಿಗೆ 6 ತಿಂಗಳಿನಿಂದ ಎರಡು ವರ್ಷದವರೆಗೆ ಎಕ್ಯೂಟ್ ಬ್ರಾಂಖೈಟಿಸ್ ಬರುವುದು ಜಾಸ್ತಿ.

ಈ ರೋಗ ಚಳಿಗಾಲದಲ್ಲಿ ಹೆಚ್ಚಾಗಿ ಬರುತ್ತದೆ. ಗಂಟಲಲ್ಲಿ ಗೊರಗುರ ಸದ್ದಿರುತ್ತದೆ. ಈ ರೋಗಕ್ಕೆ ಮುಖ್ಯವಾಗಿ ವೈರಸ್ ಗಳು ಕಾರಣವಾಗುತ್ತದೆ. ಕೆಮ್ಮು, ನೆಗಡಿ,ಇದ್ದಕ್ಕಿದ್ದಂತೆ ಆರಂಭವಾಗುತ್ತದೆ. ರೋಗದ ಲಕ್ಷಣಗಳು ತೀವ್ರವಾಗಿ ಕಂಡುಬಂದರೂ ಸುಲಭವಾಗಿ ಮತ್ತು ಶೀಘ್ರವಾಗಿ ಕಡಿಮೆಯಾಗುತ್ತದೆ.

ನ್ಯುಮೋನಿಯಾ :

ನ್ಯುಮೋನಿಯಾ ಬ್ಯಾಕ್ಟೀರಿಯ, ವೈರಸ್, ಫಂಗಸ್, ಪ್ಯಾರಾಸೈಟ್ಸನಿಂದ ಬರಬಹುದು. ಭಾರತದಲ್ಲಿ ಬ್ಯಾಕ್ಟೀರಿಯಾಗಳಿಂದ ನಿಮೋನಿಯಾ ಬರುವುದೇ ಹೆಚ್ಚು. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ವೈರಸ್ ಗಳಿಂದ ನ್ಯುಮೋನಿಯಾ ಬರುತ್ತದೆ. ಬ್ಯಾಕ್ಟಿರಿಯ ರೋಗಾಣುಗಳಲ್ಲಿ ಸ್ಟ್ರೆಪ್ಟೋಕೋಕಸ್ ನ್ಯುಮೋನಿಯಾ, ಸ್ಟೆಪಲೊಕೋಕಸ್ ಅರಿಯಾಸ್, ಹಿಮೋಫಿಲಿಸ್ ಇನ್ ಫ್ಲುಯೆಂಜಾ ಮುಖ್ಯಾವಾದವುಗಳು…