ಮನೆ ರಾಷ್ಟ್ರೀಯ ವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್‌ ಬೆಲೆ ಏರಿಕೆ

ವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್‌ ಬೆಲೆ ಏರಿಕೆ

0

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಮಾರ್ಚ್‌ 1ರಿಂದ (ಶುಕ್ರವಾರ) ಅನ್ವಯವಾಗುವಂತೆ ವಾಣಿಜ್ಯ ಬಳಕೆಯ 19ಕೆಜಿ ಎಲ್‌ ಪಿಜಿ ಸಿಲಿಂಡರ್‌ ಬೆಲೆಯನ್ನು 25.50 ರೂಪಾಯಿ ಏರಿಕೆ ಮಾಡಿರುವುದಾಗಿ ತಿಳಿಸಿದೆ.

ಬೆಲೆ ಏರಿಕೆ ನಂತರ ರಾಜಧಾನಿ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್‌ ಬೆಲೆ 1,795 ರೂಪಾಯಿಗೆ ಏರಿಕೆಯಾಗಿದೆ. ಮುಂಬೈನಲ್ಲಿ ವಾಣಿಜ್ಯ ಸಿಲಿಂಡರ್‌ ಬೆಲೆ 1,1749 ರೂಪಾಯಿ, ಚೆನ್ನೈನಲ್ಲಿ 1960 ರೂಪಾಯಿ ಮತ್ತು ಕೋಲ್ಕತಾದಲ್ಲಿ 1,911 ರೂಪಾಯಿಗೆ ಏರಿಕೆಯಾಗಿದೆ.

ಫೆಬ್ರವರಿ 1ರಂದು ತೈಲ ಮಾರಾಟ ಕಂಪನಿಗಳು 19ಕೆಜಿ ವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್‌ ಬೆಲೆಯನ್ನು 14 ರೂಪಾಯಿ ಹೆಚ್ಚಳ ಮಾಡಿತ್ತು. ಫೆಬ್ರವರಿ ತಿಂಗಳಿನಲ್ಲಿ ದೆಹಲಿಯಲ್ಲಿ ಎಲ್‌ ಪಿಜಿ ಸಿಲಿಂಡರ್‌ ಬೆಲೆ 1,769.50 ರೂಪಾಯಿ ಆಗಿದ್ದು, ಕೋಲ್ಕತಾದಲ್ಲಿ 1,887 ರೂಪಾಯಿ, ಮುಂಬೈನಲ್ಲಿ 1723 ರೂಪಾಯಿ ಮತ್ತು ಚೆನ್ನೈನಲ್ಲಿ 1937ರೂಪಾಯಿಗೆ ಏರಿಕೆಯಾಗಿತ್ತು. ಇದು ಎರಡನೇ ಬಾರಿಯ ಬೆಲೆ ಏರಿಕೆಯಾಗಿದೆ.

2023ರ ಡಿಸೆಂಬರ್‌ 1ರಂದು ತೈಲ ಕಂಪನಿಗಳು ದೇಶಾದ್ಯಂತ ವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್‌ ಬೆಲೆಯನ್ನು 21 ರೂಪಾಯಿ ಏರಿಕೆ ಮಾಡಿತ್ತು. ಆದರೆ ಈ ಬಾರಿಯೂ ಗೃಹಬಳಕೆಯ ಎಲ್‌ ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಯಾವುದೇ ಏರಿಕೆ ಮಾಡಿಲ್ಲ ಎಂದು ವರದಿ ತಿಳಿಸಿದೆ.