ಗದಗ : ಇರಾನ್ ಯುದ್ಧದಿಂದ ಮುದ್ರಣಾಕಾಶಿಯಲ್ಲೂ ಎಲ್ಪಿಜಿ ಗ್ಯಾಸ್ಗಾಗಿ ಆಟೋ ಚಾಲಕರು ಪರದಾಡುವಂತಾಗಿದೆ. ನಗರದ ಎಪಿಎಂಸಿ ಬಳಿ ಇರುವ ಗ್ಯಾಸ್ ಬಂಕ್ಗೆ ಆಟೋ ಚಾಲಕರು ಮುಗಿಬಿದ್ದಾರೆ.
ಇರಾನ್-ಇಸ್ರೇಲ್ ಯುದ್ಧದಿಂದ ನಮಗೆ ಗ್ಯಾಸ್ ಸಿಗ್ತಿಲ್ಲ. ಎಲ್ಲಾ ವಸ್ತುಗಳ ಬೆಲೆ ಏರಿಕೆ ಆಗ್ತಿದೆ. ಇದರಿಂದ ಬಡ ಆಟೋ ಚಾಲಕರಿಗೆ ಇದು ಗಾಯದ ಮೇಲೆ ಬರೆ ಎಳೆದಂತಾಗುತ್ತಿದೆ. ಆಟೋ ನಂಬಿ ಜೀವನ ನಡೆಸುತ್ತಿರುವ ನಮಗೆ ಸಾಕಷ್ಟು ತೊಂದರೆ ಆಗ್ತಿದೆ. ಹತ್ತಾರು ವರ್ಷಗಳಿಂದ ಆಟೋ ನಂಬಿಕೊಂಡು ಬಂದಿದ್ದೇವೆ ಎಂದು ಬೇಸರ ಹೊರಹಾಕಿದ್ದಾರೆ.
ನಾವು ಬೇಡಿಕೆ ಇಟ್ಟಿದ್ದರೂ ವಿತರಣೆ ಆಗುತ್ತಿಲ್ಲ. ಸ್ಟಾಕ್ ಇಲ್ಲ ಎನ್ನುತ್ತಿದ್ದಾರೆ. ಇಂದು ಅಥವಾ ನಾಳೆ ಬಂಕ್ ಖಾಲಿ ಆಗಬಹುದು. ಗ್ಯಾಸ್ ಖಾಲಿ ಆದ ಮೇಲೆ ಸ್ಟಾಕ್ ಬರುವವರೆಗೆ ಬಂದ್ ಮಾಡಬೇಕಾಗುತ್ತದೆ ಎಂದು ಬಂಕ್ ಸಿಬ್ಬಂದಿ ಹೇಳಿದ್ದಾರೆ. ಕಳೆದ 10 ದಿನಗಳಲ್ಲಿ ರಿಕ್ಷಾಗಳಲ್ಲಿ ಬಳಸುವ ಎಲ್ಪಿಜಿ ಗ್ಯಾಸ್ ದರ ಬರೋಬ್ಬರಿ 20 ರೂಪಾಯಿ ಏರಿಕೆಯಾಗಿದೆ.















