ಮನೆ ರಾಷ್ಟ್ರೀಯ ಭೂಸೇನೆಯ ನೂತನ ಮುಖ್ಯಸ್ಥರಾಗಿ ಲೆ.ಜ ಉಪೇಂದ್ರ ದ್ವಿವೇದಿ ನೇಮಕ

ಭೂಸೇನೆಯ ನೂತನ ಮುಖ್ಯಸ್ಥರಾಗಿ ಲೆ.ಜ ಉಪೇಂದ್ರ ದ್ವಿವೇದಿ ನೇಮಕ

0

ನವದೆಹಲಿ: ಜಗತ್ತಿನ ಅತೀ ದೊಡ್ಡ ಮಿಲಿಟರಿ ಪಡೆಗಳಲ್ಲಿ ಒಂದಾದ ಭಾರತದ ಭೂಸೇನೆಯ ನೂತನ ಮುಖ್ಯಸ್ಥರಾಗಿ ಲೆಫ್ಟಿನೆಂಟ್‌ ಜನರಲ್‌ ಉಪೇಂದ್ರ ದ್ವಿವೇದಿ ನೇಮಕಗೊಂಡಿದ್ದಾರೆ. ಸದ್ಯ ಭೂಸೇನೆ ಉಪ ಮುಖ್ಯಸ್ಥರಾಗಿರುವ ಅವರು ಜೂ.30ರಂದು ಅಧಿಕಾರ ಸ್ವೀಕರಿಸಲಿದ್ದಾರೆ.

Join Our Whatsapp Group

ಜನರಲ್‌ ಮನೋಜ್‌ ಸಿ.ಪಾಂಡೆ ಅವರು ಜೂನ್‌ 30ರಂದು ಸೇವೆಯಿಂದ ನಿವೃತ್ತರಾಗಲಿದ್ದು, ಅಂದು ಲೆ.ಜ. ಉಪೇಂದ್ರ ದ್ವಿವೇದಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ವರದಿ ವಿವರಿಸಿದೆ.

ಲೆ.ಜ.ಉಪೇಂದ್ರ ದ್ವಿವೇದಿ ಹಿನ್ನೆಲೆ:

1964ರ ಜುಲೈ 1ರಂದು ಉಪೇಂದ್ರ ದ್ವಿವೇದಿ ಜನಿಸಿದ್ದು, ಸೈನಿಕ್‌ ಶಾಲೆ ರೇವಾ, ನ್ಯಾಷನಲ್‌ ಡಿಫೆನ್ಸ್‌ ಕಾಲೇಜು ಮತ್ತು ಅಮೆರಿಕದ ಆರ್ಮಿ ವಾರ್‌ ಕಾಲೇಜ್‌ ನಲ್ಲಿ ಶಿಕ್ಷಣ ಪಡೆದಿದ್ದರು. ಡಿಫೆನ್ಸ್‌ & ಮ್ಯಾನೇಜ್‌ ಮೆಂಟ್‌ ಸ್ಟಡೀಸ್‌ ನಲ್ಲಿ ಎಂ.ಫಿಲ್‌ ಪಡೆದಿದ್ದು, ಜೊತೆಗೆ ಎರಡು ಮಾಸ್ಟರ್‌ ಪದವಿ ಗಳಿಸಿದ್ದಾರೆ.

1984ರ ಡಿಸೆಂಬರ್‌ 15ರಂದು ದ್ವಿವೇದಿ ಅವರು‌ ಭಾರತೀಯ ಸೇನೆಯ ಜಮ್ಮು-ಕಾಶ್ಮೀರ ರೈಫಲ್ಸ್ ಪದಾತಿಗಳಕ್ಕೆ ನೇಮಕಗೊಂಡಿದ್ದರು. ಸುದೀರ್ಘ 40ವರ್ಷಗಳ ಸೇವೆಯಲ್ಲಿ ದ್ವಿವೇದಿ ಅವರು ಹಲವಾರು ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು.

ಜಮ್ಮು-ಕಾಶ್ಮೀರ್‌ ರೈಫಲ್ಸ್‌ ನ ಕಮಾಂಡ್‌ ಆಫ್‌ ರೆಜಿಮೆಂಟ್ಸ್‌, ಬ್ರಿಗೇಡ್‌ (26 ಸೆಕ್ಟರ್‌ ಅಸ್ಸಾಂ ರೈಫಲ್ಸ್)‌, ಇನ್ಸ್‌ ಪೆಕ್ಟರ್‌ ಜನರಲ್‌ ಸೇರಿದಂತೆ ವಿವಿಧ ಹುದ್ದೆಗಳನ್ನು ದ್ವಿವೇದಿ ಅಲಂಕರಿಸಿದ್ದರು.

ಲೆಫ್ಟಿನೆಂಟ್‌ ಜನರಲ್‌ ದ್ವಿವೇದಿ ಅವರು 2022-2024ರ ಅವಧಿವರೆಗೆ ಡೈರೆಕ್ಟರ್‌ ಜನರಲ್‌ ಇನ್‌ ಫ್ಯಾಂಟ್ರಿ & ಜನರಲ್‌ ಆಫೀಸರ್‌ ಕಮಾಂಡಿಂಗ್‌ ಇನ್‌ ಚೀಫ್‌ ಆಗಿ ಸೇವೆ ಸಲ್ಲಿಸಿದ್ದರು.

ಉಪೇಂದ್ರ ದ್ವಿವೇದಿ ಅವರ ಸೇವೆಯನ್ನು ಪರಿಗಣಿಸಿ ಪರಂ ವಿಶಿಷ್ಠ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ.