ಲಕ್ನೋ: ಬೀದಿನಾಯಿಗಳ ದಾಳಿಗೆ ಬಾಲಕನೊಬ್ಬ ಗಂಭೀರ ಗಾಯಗೊಂಡು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯ ಬಿಲಾರಿ ಪ್ರದೇಶದಲ್ಲಿ ಭಾನುವಾರ ನಡೆದಿದೆ.
ಸವೇಂದ್ರ ಕುಮಾರ್ (7) ಮೃತ ಬಾಲಕ.
ಬಾಲಕ ಸವೇಂದ್ರ ಕುಮಾರ್ ತನ್ನ ಅಕ್ಕನೊಂದಿಗೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ತಂದೆ ಮತ್ತು ತಾಯಿಗೆ ಚಹಾ ನೀಡಲು ಹೋಗಿದ್ದಾಗ ಈ ಘಟನೆ ನಡೆದಿದೆ.
ಬೀದಿ ನಾಯಿಗಳು ಏಕಾಏಕಿ ಬಂದು ಬಾಲಕನ ಮೇಲೆ ಎರಗಿದೆ. ಈ ವೇಳೆ ಬಾಲಕನ ಅಕ್ಕ ಕಿರುಚಾಡಿ ಅಕ್ಕಪಕ್ಕದವರ ಸಹಾಯ ಕೇಳಿದ್ದಾರೆ. ಸ್ಥಳೀಯರು ಕೋಲು, ಕಲ್ಲುಗಳಿಂದ ಬೀದಿ ನಾಯಿಗಳ ಗುಂಪನ್ನು ಓಡಿಸಲು ಯತ್ನಿಸಿದ್ದಾರೆ. ಬೀದಿ ನಾಯಿಗಳ ದಾಳಿಯಿಂದ ಗಂಭೀರ ಸ್ವರೂಪದಿಂದ ಗಾಯಗೊಂಡ ಬಾಲಕನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ತೀವ್ರವಾಗಿ ಗಾಯಗೊಂಡಿದ್ದ ಬಾಲಕ ಸಾವನ್ನಪ್ಪಿದ್ದಾನೆ.
Saval TV on YouTube