ಮನೆ ಜ್ಯೋತಿಷ್ಯ ಧನಿಷ್ಠ ನಕ್ಷತ್ರ ಮತ್ತು ಜಾತಕ 

ಧನಿಷ್ಠ ನಕ್ಷತ್ರ ಮತ್ತು ಜಾತಕ 

0

        ಧನಿಷ್ಠಾ ನಕ್ಷತ್ರದ ಪೂರ್ವಾರ್ಧ ಕ್ಷೇತ್ರದ ವ್ಯಾಪ್ತಿ23 ಅಂಶ 20 ಕಲಾದಿಂದ 30 ಅಂಶ ಮಕರ ರಾಶಿಯವರೆಗೆ. ರಾಶಿ ಸ್ವಾಮಿ ಶನಿ, ನಕ್ಷತ್ರ ಸ್ವಾಮಿ – ಮಂಗಳ, ನಕ್ಷತ್ರ ದೇವತೆ – ವಸು, ತಾರಾಸಮೂಹ -4, ಆಕಾಶಭಾಗ – ಮಧ್ಯ, ಮಧ್ಯನಾಡಿ, ಸಿಂಹಯೋನಿ, ರಾಕ್ಷಸಗಣ, ನಾಮಾಕ್ಷರ- ಗಾ, ಗೀ. ನಕ್ಷತ್ರದ ಪೂರ್ವಾರ್ಧ ಭಾಗ ಪ್ರತಿನಿಧಿಸುವ ಜಾತಕನ ಶರೀರ ಭಾಗ – ಮಂಡಿಗಳ ಮೂಳೆ, ಕೀಲುಗಳು, ಬೃಹತ್ ಮೂಳೆ.

Join Our Whatsapp Group

* ಧನಿಷ್ಠಾ ನಕ್ಷತ್ರದ ಜಾತಕನ ಸ್ವರೂಪ (ಪೂರ್ವಾರ್ಧ):

ದೃಢ ಇಚ್ಛಾಶಕ್ತಿಯುಕ್ತ ಮೋಸಗಾರ, ಚಟುವಟಿಕೆಯುಕ್ತ ಜಾಗೃತ, ಎಚ್ಚರಯುಕ್ತ ಬಲಶಾಲಿ, ನೀಳಶರೀರ, ಧೂರ್ತ, ಸಾಹಸಿ, ಘೋರ ಸ್ವಾರ್ಥಿ, ಕ್ರೋಧಿ, ಸೇಡು ತೀರಿಸಿಕೊಳ್ಳುವವ, ಹಿಂಸಕ, ಕೆಲವೊಮ್ಮೆ ಅಸಂಗತ ಅಥವಾ ನಿಯಂತ್ರಣ ತಪ್ಪುವವ, ಉಚ್ಚಾಭಿಲಾಷಿ, ವ್ಯವಹಾರಿಕ ವಿಷಯಗಳಲ್ಲಿ ಉದಾರ, ಗುಪ್ತದಾನಿ, ವಚನಬದ್ಧ ಕ್ಷುದ್ರತನ, ಸಂಗೀತ ಅಥವಾ ಲೇಖನ ಪ್ರೇಮಿ ಕ್ರೀಡಾಪಟು, ಕ್ರೀಡೆಗಳ ಪ್ರೇಮಿ, ನಪುಂಸಕ, ವಿವಾದಗ್ರಸ್ತ ಪ್ರತಿಕ್ಷಣ ಅಶಾಂತನಾಗಿರುವನ, ಕೂಟನೀತಿಜ್ಞ, ವಾಚಾಳಿ ಮತ್ತು ವಿಚಾರವಿಲ್ಲದೆ ಹರಟುವವ, ಮಲಿನ ಭಾಷೆ ಪ್ರಯೋಗಿಸುವವ, ದೀರ್ಘಾಯು, ನೇತೃತ್ವ ಪ್ರಧಾನ ಮತ್ತು ಮುಖ್ಯಸ್ಥ

* ಧನಿಷ್ಠಾ ಜಾತಕನ ಉದ್ಯೋಗ :

ಕಮ್ಮಾರ, ಪಾತ್ರೆಗಳನ್ನು ಸಿದ್ಧಪಡಿಸುವವ, ಬೇಟೆಗಾರ, ಗಣಿ ಅಥವಾ ಮಣ್ಣಿಗೆ ಸಂಬಂಧಿತ ಕಾರ್ಯಗಳಲ್ಲಿ ಸಫಲ, ಇಂಜಿನಿಯರ್, ಮೃತ್ಯುಕರ ವಿಭಾಗ, ಅಂತ್ಯೋಷಿ ಕ್ರಿಯಾ ಸಾಮಗ್ರಿಗಳ ಮಾರಾಟಗಾರ, ಆದಾಯಕರ, ಪಶುಪಾಲಕ, ಗೃಹಮಂಡಳಿ, ಧರ್ಮಶಾಲೆಯ ಕೆಲಸಗಾರ, ಮೋಸಗಾರ, ಡಕಾಯಿತ, ಕೊಲೆಗಾರ, ಜೀವವಿಮಾ ಏಜೆಂಟ್, ತತ್ವಜ್ಞಾನಿ, ಸಾಧು-ಸನ್ಯಾಸಿ, ನ್ಯಾಯಾಧೀಶ (ನ್ಯಾಯಾಲಯ), ಕಸಾಯಿಖಾನೆ, ಮೂಳೆಮುರಿತದ ವೈದ್ಯ, ಮೂಳೆ ಕೂಡಿಸುವ ತಜ್ಞ, ಪುನರ್ವಸತಿ ಇಲಾಖೆ, ಶರಣಾರ್ಥಿಗಳ ಶಬಿರ, ಉದ್ಯೋಗ, ಆಯುಧ, ಬಿಡಿಭಾಗಗಳು, ಡಿಸ್ಟಿಲರಿ, ಮಧ್ಯ-ಉದ್ಯೋಗ, ಜಿಂಕ್, ಸಿಮೆಂಟ್, ಹವಾಮಾನ ಇಲಾಖೆ,, ವಾಹನಯುಕ್ತ ಜಗಳ-ವಿವಾದ ನಿರ್ಣಯ, ನಿರೀಕ್ಷಕ, ಗುಪ್ತಚರ, ಪೋಲಿಸ್, ಜ್ಯೂಟ್, ಜೋಳ ಅಥವಾ ಆಲೂಗಡ್ಡೆ ವ್ಯಾಪಾರಿ.

* ಧನಿಷ್ಠಾ ಜಾತಕನ ರೋಗ :

ಕಾಲುಗಳ ಮೇಲೆ ಪೆಟ್ಟು, ಇನ್ನೋನೋಫಿಲಿಯಾ, ಒಣಕೆಮ್ಮು, ಕಫ, ಫ್ಲೖಯಿಂಗ್ ಗೌಟ್, ಕುಂಟುತನ, ಅಂಗಚ್ಛೇದನ, ಬಾವು, ಕೀವು, ಗುಳ್ಳೆ, ಕಜ್ಜಿ ನೀರಸತೆ, ಕುರುಗಡ್ಡೆ

 ವಿಶೇಷ:

         ಶನಿಯ ರಾಶಿ ಮತ್ತು ಮಂಗಳನ ನಕ್ಷತ್ರದಲ್ಲಿ ಜನಿಸಿದ ಅಧಿಕಾಂಶ ಜಾತಕರು ದೂರದರ್ಶಿ, ಉನ್ನತಿಯ ಕಾರ್ಯಗಳಲ್ಲಿ ಬಾಧೆಗಳನ್ನು ಎದುರಿಸುವರು, ಬಡವರು,ಶ್ರಮದಿಂದ ಪ್ರಗತಿ ಹೊಂದುವವರು, ಸ್ತ್ರೀ ಪ್ರೇಮಿ, ಪ್ರಾಮಾಣಿಕ, ಸ್ವಚ್ಛ ವಸ್ತ್ರಧಾರಿ, ಕ್ರೋಧಿ, ಗರ್ವಿಷ್ಯ ಉನ್ನತೀಯ ಆಕಾಂಕ್ಷೆ ಹೊಂದಿರುವವರು, ಲೋಹದ ಕಾರ್ಯ ಗಳಿಂದ ಲಾಭ ಪ್ರಾಪ್ತಿ ಹೊಂದುವವರು ಹಾಗೂ ಹೊಡೆತ ಬಡಿತದಲ್ಲಿ ಹಾನಿ ಅನುಭವಿಸುವವರಾಗುತ್ತಾರೆ.

      ಸೂರ್ಯನು ಈ ನಕ್ಷತ್ರ ಭಾಗದ ಮೇಲೆ ಮಾಘ ಮಾಸದ ಅಂತಿಮದಲ್ಲಿ ಸುಮಾರು ಆರೂವರೆ ದಿನಗಳವರೆಗಿರುತ್ತಾನೆ. ಚಂದ್ರನು ಪ್ರತಿ ಇಪ್ಪತ್ತೇಳನೆಯ ದಿನ ಸುಮಾರು 12 ಗಂಟೆಗಳವರೆಗೆ ಈ ನಕ್ಷತ್ರ ಭಾಗದ ಮೇಲೆ ಭ್ರಮಣ ಮಾಡುತ್ತಾನೆ.

* ಚರಣದ ಸ್ವಾಮಿಯ ಫಲ :

★ ಪ್ರಥಮ ಚರಣದ ಸ್ವಾಮಿ ಮಂಗಳ-ಸೂರ್ಯ ಜಾತಕನನ್ನು ಅಹಂಕಾರಿ ಯನ್ನಾಗಿ ಮಾಡುವರು.

★ದ್ವಿತೀಯ ಚರಣದ ಸ್ವಾಮಿ ಮಂಗಳ-ಬುಧ ವಿಮರ್ಶಕ ಹಾಗೂ ಛಿದ್ರಾನ್ವೇಷಕನನ್ನಾಗಿ ಮಾಡುವರು.

★ ತೃತೀಯ ಚರಣದ ಸ್ವಾಮಿ ಮಂಗಳ-ಶುಕ್ರ ಆತ್ಮವಿಶ್ವಾಸವನ್ನು ವೃದ್ಧಿ ಮಾಡುವರು.

* ★ಚತುರ್ಥ ಚರಣದ ಸ್ವಾಮಿ ಮಂಗಳ-ಮಂಗಳ ಗಂಭೀರ ಪ್ರವೃತ್ತಿಯವ ಮತ್ತು ರಹಸ್ಯಮಯಿಯನ್ನಾಗಿ ಮಾಡುವರು.