1. ಒಂದು ಟೀ ಚಮಚದ ಕೊತಂಬರಿ ಸೊಪ್ಪಿನ ರಸಕ್ಕೆ ಇನ್ನೊಂದು ಚಮಚ ಜೇನುತುಪ್ಪವನ್ನು ಬೆರೆಸಿಕೊಂಡು ಪ್ರತಿರಾತ್ರಿ ಊಟ ಆದ ನಂತರ ಸೇವಿಸುತ್ತಿದ್ದರೆ ಶ್ವಾಸಕೋಶದ ರೋಗ ಹಾಗೂ ಕ್ಷಯರೋಗ ನಿರ್ವಹಣೆ ಆಗುವುದು ಉಬ್ಬಸ ರೋಗದ ಬಾಧೆಯೂ ಇರುವುದಿಲ್ಲ.
ಶೀತದ ರೋಗ:-
1. ಬಿಸಿ ನೀರಿಗೆ ನಿಂಬೆಹಣ್ಣಿನ ರಸ ಸೇರಿಸಿ ಕುಡಿದರೆ ಶೀತ ರೋಗ ನಿವಾರಣೆ ಆಗುವುದು.
ಸಂತಾನಶಕ್ತಿ ವೃದ್ಧಿಸಲು :
1. ಬೆಲ್ಲದ ಹಣ್ಣನ್ನು ಹೆಚ್ಚಾಗಿ ತಿನ್ನುತ್ತಿದ್ದರೆ ಸಂತಾನ ಶಕ್ತಿ ಹೆಚ್ಚುವುದು.
ಸಂಭೋಗ ಶಕ್ತಿ ವೃದ್ಧಿಸಲು:
1. ಜೇನುತುಪ್ಪವನ್ನು ನಿಯಮಿತವಾಗಿ ಸೇವಿಸುವುದರಿಂದ ಸಂಭೋಗಶಕ್ತಿ ವೃದ್ಧಿಸುವುದು. ಸ್ವಪ್ನಸ್ಖಲನ ಆಗುವುದೂ ಸಹ ನಿಲ್ಲುವುದು.
2. ನುಗ್ಗೆ ಸೊಪ್ಪಿನ ಹೂವನ್ನು ಹಾಲಿನಲ್ಲಿ ಚೆನ್ನಾಗಿ ಬೇಯಿಸಿ,ಅದಕ್ಕೆ ಜೇನುತುಪ್ಪ ಸೇರಿಸಿ, ಸೇವಿಸುವುದರಿಂದ ಸಂಭೋಗಶಕ್ತಿಯು ವೃದ್ಧಿಸುವುದು.
3. ಎಳನೀರಿಗೆ ಜೇನುತುಪ್ಪ ಸೇರಿಸಿ, ದಿನವೂ ಕುಡಿಯುತ್ತಿದ್ದರೆ ಸಂಭೋಗ ಶಕ್ತಿ ಹೆಚ್ಚುವುದಲ್ಲದೆ, ಸಂಭೋಗದ ಸಮಯದಲ್ಲಿ ಸಂತೋಷವೂ ಹೆಚ್ಚುವುದು.
4. ಹುರಿಗಡಲೆಯನ್ನು ದಿನವೂ ಮಿತವಾಗಿ ಬಳಸುತ್ತಿದ್ದರೆ ವೀರ್ಯ ವೃದ್ಧಿಸುವುದಲ್ಲದೆ ಬಂಜೆತನವನ್ನು ದೂರ ಮಾಡುವುದು.
5. ಅಲಸಂದೆ ಕಾಳಿನ ಪಲ್ಯ ತಿನ್ನುವುದರಿಂದ ವೀರ್ಯವೃದ್ದಿ ಆಗುವುದು
6. ಹಸಿಮೆಣಸಿನ ಕಾಯಿಯನ್ನು ಬೇಯಿಸದೆ ಉಪಯೋಗಿಸುವುದರಿಂದಲೂ ಸಂಭೋಗಶಕ್ತಿ ಹೆಚ್ಚು.
7. ಹಲಸಿನ ಬೀಜವನ್ನು ಹುರಿದು, ಚಟ್ನಿ ಮಾಡಿ ತಿಂದರೆ ವಿರ್ಯವೃದ್ಧಿಸುವುದರೊಂದಿಗೆ ಸಂಭೋಗ ಶಕ್ತಿ ಹೆಚ್ಚುವುದು.
8. ಹಕ್ಕರಿಗೆ ಸೊಪ್ಪನ್ನು ಸೌತೆಕಾಯಿಯೊಂದಿಗೆ ಬಳಸುವುದರಿಂದ ವೀರ್ಯ ವೃದ್ಧಿ ಆಗುವುದು.
9. ಸಪೋಟಾ ಹಣ್ಣನ್ನು ದಿನವೂ ಬಳಸುವುದರಿಂದ ವೀರ್ಯ ವೃದ್ಧಿ ಆಗುವುದು.
10. ಸಪೋಟಾ ಹಣ್ಣನ್ನು ಜೇನುತುಪ್ಪದಲ್ಲಿ ಅದ್ದಿ ತಿನ್ನುತ್ತಿದ್ದರೆ ಸಂಭೋಗಶಕ್ತಿ ಹೆಚ್ಚುವುದರೊಂದಿಗೆ ಸಂಭೋಗದ ಸಮಯದಲ್ಲಿ ಆಲ್ಲಾದ ಉಂಟಾಗುವುದು.