ಮನೆ ರಾಜ್ಯ ವಿಧಾನಪರಿಷತ್‌ ಉಪ ಸಭಾಪತಿಯಾಗಿ ಎಂ.ಕೆ. ಪ್ರಾಣೇಶ್ ಆಯ್ಕೆ

ವಿಧಾನಪರಿಷತ್‌ ಉಪ ಸಭಾಪತಿಯಾಗಿ ಎಂ.ಕೆ. ಪ್ರಾಣೇಶ್ ಆಯ್ಕೆ

0

ಬೆಂಗಳೂರು(Bengaluru): ವಿಧಾನಪರಿಷತ್‌ ಉಪ ಸಭಾಪತಿಯಾಗಿ ಬಿಜೆಪಿ ಸದಸ್ಯ ಎಂ.ಕೆ. ಪ್ರಾಣೇಶ್ ಆಯ್ಕೆಯಾಗಿದ್ದಾರೆ.

ಎಂ.ಕೆ. ಪ್ರಾಣೇಶ್ ಮತ್ತು ಅರವಿಂದ ಅರಳಿ ಅವರು ಪರಿಷತ್‌ ಕಾರ್ಯದರ್ಶಿ ಕೆ.ಆರ್. ಮಹಾಲಕ್ಷ್ಮಿ ಅವರಿಗೆ ಗುರುವಾರ ನಾಮಪತ್ರ ಸಲ್ಲಿಸಿದ್ದರು.

ಶುಕ್ರವಾರ ನಡೆದ ಉಪ ಸಭಾಪತಿ ಚುನಾವಣೆ ಎಂ.ಕೆ. ಪ್ರಾಣೇಶ್ 39 ಮತಗಳನ್ನು ಪಡೆದಿದ್ದಾರೆ.

ಕಾಂಗ್ರೆಸ್ ಸದಸ್ಯ ಅರವಿಂದ ಅರಳಿ 26 ಮತಗಳನ್ನು ಪಡೆದಿದ್ದಾರೆ. ಜೆಡಿಎಸ್‌ ಸದಸ್ಯರು ಮತಚಲಾಯಿಸದೆ ತಟಸ್ಥರಾಗಿದ್ದರು.

ಸದನದಲ್ಲಿ ಬಿಜೆಪಿ 39, ಕಾಂಗ್ರೆಸ್‌ 26, ಜೆಡಿಎಸ್‌ 8 ಹಾಗೂ ಒಬ್ಬರು ಪಕ್ಷೇತರ ಸದಸ್ಯರಿದ್ದರು.