ಮನೆ ರಾಜ್ಯ ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ತೀರ್ಮಾನ: ಸಂಸದ ಸಂಗಣ್ಣ ಕರಡಿ

ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ತೀರ್ಮಾನ: ಸಂಸದ ಸಂಗಣ್ಣ ಕರಡಿ

0

ಕೊಪ್ಪಳ:  ಮುಂದಿನ ರಾಜಕೀಯ ನಿರ್ಧಾರಕ್ಕೆ ಗುರುವಾರ ಮಾ 21 ರಂದು ನಿರ್ಧಾರ ಮಾಡುತ್ತೇನೆ.  ಅಂದು ಬೆಂಬಲಿಗರ ಸಭೆ ಕರೆದಿರುವೆ.  ಬೆಂಬಲಿಗರ ಸಭೆಯ ನಂತರ ಮುಂದಿನ ರಾಜಕೀಯ ನಡೆಯ ಬಗ್ಗೆ ನಿರ್ಧಾರ ಮಾಡುತ್ತೇನೆ ಸಂಸದ ಸಂಗಣ್ಣ ಕರಡಿ ಹೇಳಿದ್ದಾರೆ.

ಕೊಪ್ಪಳದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಂಸದ ಸಂಗಣ್ಣ ಕರಡಿ  ಕೊಪ್ಪಳ ಲೋಕಸಭಾ ಕ್ಷೇತ್ರದ ಟಿಕೆಟ್ ಡಾ ಬಸವರಾಜ ಅವರಿಗೆ ಘೋಷಣೆಯಾಗಿದೆ. ಅವರಿಗೆ ಶುಭ ಕೋರುತ್ತೇನೆ. ನನಗೆ 8 ವಿಧಾನ ಸಭಾ ಕ್ಷೇತ್ರದ ಮುಖಂಡರು ಅನ್ಯಾಯವಾಗಿದೆ ಎನ್ನುತ್ತಿದ್ದಾರೆ. ಎಲ್ಲಾ ಕಡೆಯಿಂದಲೂ ಒಂದೇ ಕೂಗು ಅನ್ಯಾಯವಾಗಿದೆ ಎನ್ನುವ ಮಾತು ಕೇಳಿ ಬಂದಿದೆ.  ವಿಪಕ್ಷ ಮುಖ್ಯ ಸಚೇತಕ ದೊಡ್ಡನಗೌಡರು ಮಾತನಾಡಿದ್ದಾರೆ. ರಾಜ್ಯ ನಾಯಕರು ಸೌಜನ್ಯಕ್ಕೂ ಮಾತನಾಡಿಲ್ಲ. ಈಗ  ವಿಜಯೇಂದ್ರ ಮಾತನಾಡಿದರು. ನಾನು ಕೇಳಿದ ಮೂರು ಪ್ರಶ್ನೆಗೆ ಉತ್ತರವಿಲ್ಲ ಎಂದರು.

ನಾನು ಗುರುವಾರ ಶಾಂತವೀರ ಕಲ್ಯಾಣ ಕಾರ್ಯಕರ್ತರ ಸಭೆ ಕರೆಯುತ್ತೇನೆ. ಬೆಂಬಲಿಗರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ಹೆಜ್ಜೆ ಇಡುವೆ. ಟಿಕೆಟ್ ಘೋಷಣೆ ನಂತರ ಆರ್ ಅಶೋಕ, ವಿಜಯೇಂದ್ರ, ಯಡಿಯೂರಪ್ಪ,  ಬೊಮ್ಮಾಯಿ ನನ್ನೊಂದಿಗೆ ಮಾತನಾಡಲಿಲ್ಲ . ಯಾವ ಕಾರಣಕ್ಕೆ ಟಿಕೆಟ್ ತಪ್ಪಿದೆ ಎನ್ನುವ ಉತ್ತರವಿಲ್ಲ. ನನಗೆ ರಾಜಕೀಯ ಬಿಟ್ಟು ಬೇರೆ ಏನೂ ಗೊತ್ತಿಲ್ಲ.ನಾನು ಆರೋಗ್ಯವಾಗಿ ಇರುವ ವರೆಗೂ ರಾಜಕೀಯದಲ್ಲಿ ಇರುವೆ. ಜಿಲ್ಲಾ ಬಿಜೆಪಿ ಮುಖಂಡರ ಮೂಲಕ ಲಾಬಿ ಮಾಡಿ ನನಗೆ ಅವಮಾನ ಮಾಡಿದ್ದಾರೆ. ರಾಜ್ಯ ನಾಯಕರಿಗೆ ನಾನು ಲೆಕ್ಕಕ್ಕಿಲ್ಲ ಎಂದುಕೊಂಡಿದ್ದಾರೆ. ನಿರಂತರವಾಗಿ ಕೆಲಸ ಮಾಡಿ ಜನರ ಆಶೀರ್ವಾದಕ್ಕೆ ಚ್ಯುತಿ ಬಾರದಂತೆ ನಾನು ಕೆಲಸ ಮಾಡಿದ್ದೇನೆ ಎಂದರು.

ಹೈಕಮಾಂಡ್ ನಡೆಯಿಂದ ನನಗೆ ನೋವು ಆಗಿದೆ. ಇಂದು ರಾಜೇಶ್, ಯಡಿಯೂರಪ್ಪ ಮಾತನಾಡಿದ್ದಾರೆ. ನಾನು ಟಿಕೆಟ್ ಸಿಗುತ್ತದೆ ಎಂದು ನಂಬಿಕೆಕೊಂಡಿದ್ದೆ. ನಂಬಿದವರೇ ನನ್ನ ಕೈಬಿಟ್ಟಿದ್ದಾರೆ ಎಂದರು.

ಡಾ. ಬಸವರಾಜ್ ಗೆ ದೊಡ್ಡನಗೌಡ, ಹಾಲಪ್ಪ, ಬಸವರಾಜ ದಡೇಸಗೂರು ಟಿಕೆಟ್ ಕೊಡಿಸಿದ್ದಾರೆ ಎಂದು ಅವರೇ ಹೇಳಿಕೊಂಡಿದ್ದಾರೆ. ನಾನು ಬಿಜೆಪಿ ಮುಖಂಡತ್ವ ವಹಿಸಲ್ಲ  ಈ ಎಲ್ಲ ನಾಯಕರೇ ಮುಖಂಡತ್ವ ವಹಿಸಲಿ . ನೇರವಾಗಿ ನಾನು ಬಿಜೆಪಿ ಅಭ್ಯರ್ಥಿಯ ಪರವಾಗಿ ಇರೋಲ್ಲ. ಲೀಡರ್ ಶಿಪ್ ತೆಗೆದುಕೊಳ್ಳಲ್ಲ ಎಂದರು.

ಕಾಂಗ್ರೆಸ್ ನವರು ಸೌಜನ್ಯಕ್ಕಾಗಿ ಮಾತನಾಡಿದ್ದಾರೆ. ಕಾಂಗ್ರೆಸ್ ಸರ್ಪಡೆ ಬಗ್ಗೆ ಮಾತನಾಡಿಲ್ಲ. ಅಲ್ಲಿ ಏನು ನಡೆಯುತ್ತದೆ ಎಂಬುವುದು ಗೊತ್ತಿಲ್ಲ. ಕಾಂಗ್ರೆಸ್ ಸೇರುವ ಪ್ರಶ್ನೆ ಬಂದಿಲ್ಲ ನಾನು ಗುರುವಾರ ಬೆಂಬಲಿಗರ  ಅಭಿಪ್ರಾಯ ಪಡೆದು  ನಿರ್ಧಾರ ಮಾಡುವೆ ಬಿಜೆಪಿ ನೇತೃತ್ವದಲ್ಲಿ ಸಭೆ ಕರೆಯುವೆ. ಸಭೆಗೆ ಎಂಟೂ ಕ್ಷೇತ್ರದಿಂದ ಜನತೆ ಬರಲಿದ್ದಾರೆ.  ನನ್ನ ನಿರ್ಧಾರ ಅಲ್ಲಿ ಪ್ರಕಟ ಮಾಡುವೆ ಎಂದು ಹೇಳಿದ್ದಾರೆ.