ಮನೆ ರಾಜ್ಯ ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ – ಹುಂಡಿಯಲ್ಲಿ 2.27 ಕೋಟಿ ರೂ. ಸಂಗ್ರಹ..!

ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ – ಹುಂಡಿಯಲ್ಲಿ 2.27 ಕೋಟಿ ರೂ. ಸಂಗ್ರಹ..!

0

ಚಾಮರಾಜನಗರ : ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ದೇಗುಲದ ಹುಂಡಿ ಎಣಿಕೆ ಕಾರ್ಯ ಇಂದು ನಡೆದಿದ್ದು, 2.27 ಕೋಟಿ ರೂ.ಗೂ ಹೆಚ್ಚು‌ ಹಣ ಸಂಗ್ರಹವಾಗಿದೆ.

ದಸರಾ, ಮಹಾಲಯ ಅಮಾವಾಸ್ಯೆ ಹಿನ್ನೆಲೆ ಮಾದಪ್ಪನ ಹುಂಡಿ ಭರ್ತಿಯಾಗಿದ್ದು, ಎಣಿಕೆ ನಡೆಸಲಾಯಿತು. ಕೇವಲ 28 ದಿನಕ್ಕೆ ಈ ಮೊತ್ತ ಸಂಗ್ರಹವಾಗಿದ್ದು, ಇಂದು ಬೆಳಗ್ಗೆಯಿಂದ ತಡರಾತ್ರಿವರೆಗೂ ಹುಂಡಿ ಎಣಿಕೆ ಕಾರ್ಯ ನಡೆಯಿತು.

ನಗದು ಮಾತ್ರವಲ್ಲದೆ 46 ಗ್ರಾಂ ಚಿನ್ನ, 1.350 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ. ಮಾದಪ್ಪನ ಹುಂಡಿಯಲ್ಲಿ 9 ವಿದೇಶಿ‌‌ ನೋಟುಗಳು ಹಾಗೂ ಚಲಾವಣೆ ಇಲ್ಲದ ಎರಡು‌ ಸಾವಿರ ಮುಖಬೆಲೆಯ 9 ನೋಟು ಸಿಕ್ಕಿವೆ ಎಂದು ವರದಿಯಾಗಿದೆ.