ಮನೆ ತಂತ್ರಜ್ಞಾನ ಮೇಡ್ ಇನ್ ಇಂಡಿಯಾ ಶ್ರೇಣಿಯ ಸೌಂಡ್ ಬಾರ್

ಮೇಡ್ ಇನ್ ಇಂಡಿಯಾ ಶ್ರೇಣಿಯ ಸೌಂಡ್ ಬಾರ್

0

ಭಾರತದ ಪ್ರಮುಖ ಸ್ವದೇಶಿ ಎಲೆಕ್ಟ್ರಾನಿಕ್ಸ್ ಉಪಕರಣಗಳ ಕಂಪನಿ ಮಿವಿ ಎರಡು ನೂತನ ಸೌಂಡ್‌ ಬಾರ್‌ಗಳನ್ನು ಬಿಡುಗಡೆ ಮಾಡಿದೆ.

ಮೇಡ್ ಇನ್ ಇಂಡಿಯಾ ಶ್ರೇಣಿಯಲ್ಲಿ ‘ಎಸ್ 16’ ಮತ್ತು ‘ಎಸ್ 24’ ಎಂಬ 2 ಸೌಂಡ್‌ ಬಾರ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ವಿಭಿನ್ನ ಶೈಲಿ ಮತ್ತು ಪರಿಪೂರ್ಣ ಧ್ವನಿಯನ್ನು ಹೊಂದಿರುವ ಈ ಸೌಂಡ್‌ ಬಾರ್‌ಗಳನ್ನು ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿದೆ.‘ಎಸ್ 16’ ಸರಣಿಯ ಸೌಂಡ್‌ಬಾರ್‌ ₹1,499 ಮತ್ತು ‘ಎಸ್ 24’ ಸರಣಿಯ ಸೌಂಡ್‌ಬಾರ್‌ ₹1,999ಕ್ಕೆ ದೊರೆಯಲಿವೆ.

ಮುಂದಿನ ಪೀಳಿಗೆಯ ಈ ಸೌಂಡ್‌ ಬಾರ್‌ಗಳನ್ನು ವಿಶೇಷ ಶೈಲಿಯಲ್ಲಿ ವಿನ್ಯಾಸ ಮಾಡಲಾಗಿದೆ. ಆಡಿಯೊ ಕ್ಷೇತ್ರದಲ್ಲಿ ನಮ್ಮ ಸೌಂಡ್‌ ಬಾರ್‌ಗಳು ಹೊಸ ಸೇರ್ಪಡೆಯಾಗಿವೆ. ಸಂಗೀತಪ್ರಿಯರಿಗೆ ಕಡಿಮೆ ಬೆಲೆಯಲ್ಲಿ ಇವುಗಳನ್ನು ನೀಡಲಾಗುತ್ತಿದೆ. ಈ ಸೌಂಡ್‌ ಬಾರ್‌ಗಳಲ್ಲಿ 6 ಗಂಟೆಗಳ ಕಾಲ ಬ್ಯಾಟರಿ ಬರಲಿದೆ. ಇವುಗಳು ಹೆಚ್ಚಿನ ಕಾರ್ಯಕ್ಷಮತೆ, ದೀರ್ಘ ಬಾಳಿಕೆ ಮತ್ತು ಗುಣಮಟ್ಟದಿಂದ ಕೂಡಿವೆ ಎಂದು ಕಂಪನಿಯ ಸಹ ಸಂಸ್ಥಾಪಕ ಮಿದುಲಾ ದೇವಭಕ್ತುನಿ ಹೇಳಿದ್ದಾರೆ.

ಈ ಸೌಂಡ್‌ಬಾರ್‌ಗಳು ಎಯುಎಕ್ಸ್‌, ಬ್ಯೂಟೂಥ್‌, 5.1, ಟಿಎಫ್‌/ ಯುಎಸ್‌ಬಿ ಮತ್ತು ಮೈಕ್ರೊ ಎಸ್‌ಡಿ ಕಾರ್ಡ್‌ಗಳ ಬೆಂಬಲದೊಂದಿಗೂ ಕೆಲಸ ಮಾಡಲಿವೆ. ದೀರ್ಘ ಕಾಲದಲ್ಲಿ ಹಾಡುಗಳನ್ನು ಕೇಳಬಹುದು ಹಾಗೇ ಗ್ರಾಹಕರಿಗಾಗಿ ಗೂಗಲ್ ಅಸಿಸ್ಟೆಂಟ್ ಸಂಯೋಜನೆ ಮಾಡಲಾಗಿದೆ.

2015ರಲ್ಲಿ ಮಿವಿ ಕಂಪನಿಯನ್ನು ವಿಶ್ವನಾಥ ಕಂದುಲಾ ಮತ್ತು ಮಿಧುಲಾ ದೇವಭಕ್ತುನಿ ಪ್ರಾರಂಭ ಮಾಡಿದರು. ಭಾರತೀಯ ಮಾರುಕಟ್ಟೆಯಲ್ಲಿ ಕೈಗೆಟುಕುವ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು, ಇಯರ್ ಫೋನ್‌ಗಳು ಸೇರಿದಂತೆ ಆಡಿಯೊ ವಿಭಾಗದಲ್ಲಿನ ಹಲವಾರು ಸಾಧನಗಳನ್ನು ಈ ಕಂಪನಿ ಉತ್ಪಾದನೆ ಮಾಡುತ್ತಿದೆ.