ಮಧ್ಯಪ್ರದೇಶ: ಹರ್ದಾ ಜಿಲ್ಲೆಯ ಬೈರಾಗರ್ ಗ್ರಾಮದ ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಮಂಗಳವಾರ ಬೆಳಗ್ಗೆ ಒಂದರ ಹಿಂದೆ ಸ್ಫೋಟ ಸಂಭವಿಸಿದೆ.
ಹಲವು ಜನರು ಒಳಗೆ ಸಿಲುಕಿರುವ ಶಂಕೆ ಇದೆ, ರಾಜ್ಯ ವಿಪತ್ತು ನಿರ್ವಹಣಾ ಪಡೆ ಜನರನ್ನು ಸ್ಥಳಾಂತರಿಸುವ ಕಾರ್ಯ ನಡೆಸುತ್ತಿದೆ.
ಕಾರ್ಖಾನೆಯಿಂದ ಬೆಂಕಿಯ ಜ್ವಾಲೆ ತೀವ್ರಗೊಳ್ಳುತ್ತಿದೆ, ಬೆಂಕಿ ನಂದಿಸಲು ಹಲವು ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಅಗಮಿಸಿದೆ. ಕಾರ್ಖಾನೆಯೊಳಗೆ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಸ್ಫೋಟವು ಎಷ್ಟು ತೀವ್ರವಾಗಿತ್ತೆಂದರೆ ಬೆಂಕಿಯ ಜ್ವಾಲೆ ಭುಗಿಲೇಳುತ್ತಿತ್ತು, ಇದರಿಂದ ಸುತ್ತಮುತ್ತಲಿನಲ್ಲಿರುವ ಜನರು ಭಯಭೀತರಾಗಿದ್ದರು. ಮುಂಜಾಗ್ರತಾ ಕ್ರಮವಾಗಿ ಸಮೀಪದ ಕಟ್ಟಡಗಳಿಂದ ಜನರನ್ನು ದೂರ ಕಳುಹಿಸಲಾಗಿದೆ.
ಮಾಹಿತಿ ಪ್ರಕಾರ, ಕಾರ್ಖಾನೆಯಲ್ಲಿ ಪಟಾಕಿಗಾಗಿ ಇರಿಸಲಾಗಿದ್ದ ಗನ್ ಪೌಡರ್ ಗೆ ಬೆಂಕಿ ತಗುಲಿದ ನಂತರ ಶೀಘ್ರದಲ್ಲಿ ಬೆಂಕಿ ಗಂಭೀರ ಸ್ವರೂಪವನ್ನು ತಾಳಿತ್ತು. ಜನರು ತಕ್ಷಣ ಸ್ಥಳಕ್ಕೆ ದೌಡಾಯಿಸಿತ್ತು. ಅಕ್ಕಪಕ್ಕದ ಮನೆಗಳಿಗೂ ಬೆಂಕಿ ತಗುಲಿದೆ ಎನ್ನಲಾಗುತ್ತಿದೆ.