ಮನೆ ರಾಜ್ಯ ಮಡಿಕೇರಿ: ಬಿಜೆಪಿಯ ಎಂ.ಪಿ. ಅಪ್ಪಚ್ಚು ರಂಜನ್ ಅವರನ್ನು ಸೋಲಿಸಿದ ಕಾಂಗ್ರೆಸ್’ನ ಮಂಥರ್ ಗೌಡ

ಮಡಿಕೇರಿ: ಬಿಜೆಪಿಯ ಎಂ.ಪಿ. ಅಪ್ಪಚ್ಚು ರಂಜನ್ ಅವರನ್ನು ಸೋಲಿಸಿದ ಕಾಂಗ್ರೆಸ್’ನ ಮಂಥರ್ ಗೌಡ

0

ಮಡಿಕೇರಿ: ಬಿಜೆಪಿಯ ಭದ್ರಕೋಟೆಯಾಗಿದ್ದ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ.

Join Our Whatsapp Group

ಐದು ಬಾರಿ ಶಾಸಕರಾಗಿದ್ದ ಬಿಜೆಪಿಯ ಎಂ.ಪಿ. ಅಪ್ಪಚ್ಚು ರಂಜನ್ ಅವರನ್ನು ಕಾಂಗ್ರೆಸ್’​ನ ಡಾ. ಮಂಥರ್ ಗೌಡ ಸೋಲಿಸಿದ್ದಾರೆ.

ಡಾ. ಮಂಥರ್ ಗೌಡ 53,767 ಮತಗಳನ್ನು ಪಡೆದರೆ ಅಪ್ಪಚ್ಚು ರಂಜನ್ 48,975 ಮತಗಳನ್ನು ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಉಳಿದ ಎಲ್ಲಾ ಅಭ್ಯರ್ಥಿಗಳೂ ಠೇವಣಿ ಕಳೆದುಕೊಂಡಿದ್ದಾರೆ. ಮೂರನೇ ಶಕ್ತಿ ಎನಿಸಿದ್ದ ಜೆಡಿಎಸ್’​ನ ನಾಪಂಡ ಮುತ್ತಪ್ಪ ಕೇವಲ 4,642 ಮತಗಳನ್ನು ಪಡೆದಿದ್ದಾರೆ. ಉಳಿದ ಬೇರೆ ಅಭ್ಯರ್ಥಿಗಳು ಪಡೆದ ಮತ 1 ಸಾವಿರ ಗಡಿ ದಾಟಿಲ್ಲ.

ಡಾ. ಮಂಥರ್ ಗೌಡ ಈ ಕ್ಷೇತ್ರದಲ್ಲಿ ಯುವ ಮುಖವಾಗಿ ಕಾಣಿಸಿಕೊಂಡಿದ್ದರು. ಮಾಜಿ ಸಚಿವ ಎ ಮಂಜು ಅವರ ಮಗ ಡಾ. ಮಂಥರ್ ಗೌಡಗೆ ಈ ಅಂಶ ವರದಾನವಾಗಿದೆ. ಮೇಲಾಗಿ, ಕ್ಷೇತ್ರದಲ್ಲಿ ಒಕ್ಕಲಿಗರ ಸಂಖ್ಯೆ ಸಾಕಷ್ಟು ಇರುವುದು ಮಂಥರ್ ಗೌಡರ ಗೆಲುವಿಗೆ ಸಹಕಾರಿ ಆಗಿದೆ. ಸತತವಾಗಿ ಶಾಸಕರಾಗಿದ್ದ ಅಪ್ಪಚ್ಚು ರಂಜನ್ ಅವರ ವಿರೋಧಿ ಅಲೆ ಕ್ಷೇತ್ರದಲ್ಲಿ ಕಂಡುಬಂದಿತ್ತು. ಅಲ್ಲದೇ ಇಲ್ಲಿ ಜೆಡಿಎಸ್ ಅಭ್ಯರ್ಥಿ ಹೆಚ್ಚು ಮತಗಳನ್ನು ಪಡೆಯದೇ ಇದ್ದದ್ದೂ ಕೂಡ ಅಪ್ಪಚ್ಚು ರಂಜನ್ ಗೆಲುವಿನ ಓಟಕ್ಕೆ ಹಿನ್ನಡೆ ತಂದಿರಬಹುದು ಎಂದು ವಿಶ್ಲೇಷಿಸಲಾಗಿದೆ.