ಮಡಿಕೇರಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಸಮೀಪದ ಎಳನೀರುಗುಂಡಿ ಎಸ್ಟೇಟ್’ನಲ್ಲಿ ಹಳೆಯ ಶೌಚ ಗುಂಡಿಗೆ ಬಿದ್ದು ಕಾಡಾನೆಯೊಂದು ಮೃತಪಟ್ಟಿದೆ.
ಶುಕ್ರವಾರ ತಡರಾತ್ರಿ ನಿಡ್ತ ಮಿಸಲು ಅರಣ್ಯದಿಂದ ಬಂದಿದ್ದ ಈ ಹೆಣ್ಣು ಕಾಡಾನೆ ಹಳೆಯ ಸಿಮೆಂಟ್ ಗುಂಡಿಗೆ ಬಿದ್ದು ಸಾವನ್ನಪ್ಪಿದೆ ಎಂದು ಡಿಸಿಎಫ್ ಪೂವಯ್ಯ ತಿಳಿಸಿದರು.
ಇದೊಂದು ತುಂಬಾ ಹಳೆಯ ಶೌಚಗುಂಡಿ. ಸದ್ಯ ಅದನ್ನು ಬಳಕೆ ಮಾಡುತ್ತಿರಲಿಲ್ಲ. ಆನೆಯ ಮೃತದೇಹವನ್ನು ಹೊರತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ ಎಂದು ಸ್ಥಳಕ್ಕೆ ತೆರಳಿದ್ದ ವಲಯ ಅರಣ್ಯಾಧಿಕಾರಿ ಪ್ರಫುಲ್ ಶೆಟ್ಟಿ ಹೇಳಿದರು.