ಮಾಗಡಿ: ಜಮೀನಿಗೆ ತೆರಳುತ್ತಿದ್ದ ವ್ಯಕ್ತಿ ಮೇಲೆ ಕರಡಿ ದಾಳಿ ನಡೆಸಿದ ಘಟನೆ ಮಾಗಡಿ ತಾಲೂಕಿನ ಚಕ್ಕಳ್ಳಿ ಗ್ರಾಮದ ಟಿ.ಎನ್. ಕೆರೆ ಬಳಿ ನಡೆದಿದೆ.
45 ವರ್ಷದ ಮಹೇಂದ್ರ ಎಂಬವರ ಮೇಲೆ ಕರಡಿ ದಾಳಿ ನಡೆಸಿದೆ. ಮಹೇಂದ್ರ ಅವರು ಗಂಭೀರ ಗಾಯಗೊಂಡಿದ್ದಾರೆ.
ಮಹೇಂದ್ರ ಅವರು ಬೆಳಗ್ಗೆ ಜಮೀನಿಗೆ ತೆರಳುವಾಗ ಕರಡಿ ಏಕಾಏಕಿ ದಾಳಿ ಮಾಡಿದೆ. ಕರಡಿಯು ತಲೆ ಭಾಗಕ್ಕೆ ದಾಳಿ ಮಾಡಿ ಗಂಭೀರ ಗಾಯ ಮಾಡಿದೆ.
ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ತಾಲೂಕು ಅರಣ್ಯಾಧಿಕಾರಿ ಚೈತ್ರ ಭೇಟಿ ನೀಡಿದ್ದಾರೆ.
ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
Saval TV on YouTube