ಮನೆ ಅಂತಾರಾಷ್ಟ್ರೀಯ 7.7 ತೀವ್ರತೆಯ ಭೂಕಂಪ: ದಕ್ಷಿಣ ಪೆಸಿಫಿಕ್ ದೇಶಗಳಿಗೆ ಸುನಾಮಿ ಎಚ್ಚರಿಕೆ

7.7 ತೀವ್ರತೆಯ ಭೂಕಂಪ: ದಕ್ಷಿಣ ಪೆಸಿಫಿಕ್ ದೇಶಗಳಿಗೆ ಸುನಾಮಿ ಎಚ್ಚರಿಕೆ

0

ನೌಮಿಯಾ: ಫ್ರಾನ್ಸಿನ ನ್ಯೂ ಕ್ಯಾಲೆಡೋನಿಯಾದ ಲಾಯಲ್ಟಿ ಐಲ್ಯಾಂಡ್ಸ್ ನ ಆಗ್ನೇಯ ಭಾಗದಲ್ಲಿ ಶುಕ್ರವಾರ 7.7 ತೀವ್ರತೆ ಪ್ರಬಲ ಭೂಕಂಪ ಉಂಟಾಗಿದೆ. ಹೀಗಾಗಿ ದಕ್ಷಿಣ ಪೆಸಿಫಿಕ್ ನ ದೇಶಗಳಿಗೆ ಸುನಾಮಿ ಎಚ್ಚರಿಕೆಗಳನ್ನು ನೀಡಲಾಗಿದೆ.

Join Our Whatsapp Group

ವನವಾಟು, ಫಿಜಿ ಮತ್ತು ನ್ಯೂ ಕ್ಯಾಲೆಡೋನಿಯಾಕ್ಕೆ ಸುನಾಮಿ ಎಚ್ಚರಿಕೆ ನೀಡಲಾಗಿದೆ ಎಂದು ‘ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರ (ಪಿಟಿಡಬ್ಲ್ಯುಸಿ)’ ತಿಳಿಸಿದೆ.

ಆಸ್ಟ್ರೇಲಿಯಾದ ಹವಾಮಾನ ಇಲಾಖೆ ತನ್ನ ಪೂರ್ವ ಕರಾವಳಿಯಲ್ಲಿರುವ ಲಾರ್ಡ್ ಹೋವ್ ದ್ವೀಪಕ್ಕೆ ಅಪಾಯವಿದೆ ಎಂದು ಹೇಳಿದೆ.

ಲಾಯಲ್ಟಿ ಐಲ್ಯಾಂಡ್ಸ್ ನ ಆಗ್ನೇಯ ಭಾಗದಲ್ಲಿ ಸುಮಾರು 38 ಕಿಮೀ (24 ಮೈಲುಗಳು) ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಅಮೆರಿಕದ ಭೂವಿಜ್ಞಾನ ಇಲಾಖೆ ಹೇಳಿದೆ.

ಭೂಕಂಪದಿಂದಾಗಿ ತನ್ನ ಕರಾವಳಿ ಪ್ರದೇಶಕ್ಕೆ ಸುನಾಮಿ ಅಪ್ಪಳಿಸುವ ಸಾಧ್ಯತೆಗಳಿವೆಯೇ ಎಂಬುದನ್ನು ನಿರ್ಣಯಿಸುತ್ತಿರುವುದಾಗಿ ನ್ಯೂಜಿಲೆಂಡ್ ಹೇಳಿದೆ.