ಮನೆ ಅಂತಾರಾಷ್ಟ್ರೀಯ ಟರ್ಕಿಯಲ್ಲಿ 7.9 ತೀವ್ರತೆಯ ಪ್ರಬಲ ಭೂಕಂಪ: ಧರೆಗುರುಳಿದ ಕಟ್ಟಡಗಳು

ಟರ್ಕಿಯಲ್ಲಿ 7.9 ತೀವ್ರತೆಯ ಪ್ರಬಲ ಭೂಕಂಪ: ಧರೆಗುರುಳಿದ ಕಟ್ಟಡಗಳು

0

ಟರ್ಕಿ(Turkey): ಸೋಮವಾರ ಬೆಳಿಗ್ಗೆ ಟರ್ಕಿಯ ನೂರ್ಡಗಿಯಿಂದ ಪೂರ್ವಕ್ಕೆ 23 ಕಿಮೀ ದೂರದಲ್ಲಿ ಪ್ರಬಲ ಭೂಕಂಪನದ ಅನುಭವವಾಗಿದೆ.

ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆಯನ್ನು 7.8 ಎಂದು ಅಳೆಯಲಾಗಿದೆ. ಹಲವು ನಗರಗಳಲ್ಲಿ ಕಟ್ಟಡಗಳು ಕುಸಿದಿವೆ. ನೆರೆಯ ಸಿರಿಯಾದಲ್ಲೂ ತೀವ್ರ ಹಾನಿಯುಂಟಾಗಿದೆ. ಆರಂಭಿಕ ವರದಿಗಳ ಪ್ರಕಾರ ಟರ್ಕಿಯಲ್ಲಿ ಕನಿಷ್ಠ ಐದು ಮಂದಿ ಮೃತಪಟ್ಟಿರುವುದಾಗಿ ಗೊತ್ತಾಗಿದೆ.

ಬಂಡುಕೋರರ ಹಿಡಿತದಲ್ಲಿರುವ ವಾಯುವ್ಯ ಸಿರಿಯಾದಲ್ಲಿ ಪರಿಸ್ಥಿತಿ ವಿನಾಶಕಾರಿಯಾಗಿದೆ ಎಂದು ವರದಿಗಳಾಗಿವೆ.

ಹಲವಾರು ಕಟ್ಟಡಗಳು ನೆಲಸಮಗೊಂಡಿದ್ದು, ಜನರು ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿದ್ದಾರೆ. ಕಟ್ಟಡಗಳನ್ನು ತೊರೆದು, ತೆರೆದ ಖಾಲಿ ಪ್ರದೇಶದಲ್ಲಿ ಸೇರುವಂತೆ ನಾಗರಿಕರಿಗೆ ರಕ್ಷಣಾ ತಂಡಗಳು ಸೂಚಿವೆ.

ಟರ್ಕಿಯ ಪ್ರಮುಖ ನಗರ ಮತ್ತು ಪ್ರಾಂತೀಯ ರಾಜಧಾನಿಯಾದ ಗಾಜಿಯಾಂಟೆಪ್‌’ನಿಂದ 33 ಕಿಲೋಮೀಟರ್ (20 ಮೈಲಿ) ದೂರದಲ್ಲಿ ಭೂಕಂಪನ ಕೇಂದ್ರವನ್ನು ಅಮೆರಿಕದ ಭೂವಿಜ್ಞಾನ ಸಂಸ್ಥೆ ಗುರುತಿಸಿದೆ.