“ಓಂ ತ್ರಯಂಬಕಂ ಯಜಾಮಹೇ
ಸುಗಂಧಿಂ ಪುಷ್ಟಿವರ್ಧನಂ
ಉರ್ವಾರುಕಮೇವ ಬಂಧನಾನ್
ಮೃತ್ಯೊರ್ಮುಕ್ಷೀಯ ಮಾಂಮೃತಾತ್”
ಅರ್ಥ: ಓಂ, ನಾವು ಮೂರು ಕಣ್ಣುಳ್ಳವನನ್ನು ಆರಾಧಿಸುತ್ತೇವೆ. ಸಾವಿನಿಂದ, ಮಾರಣಾಂತಿಕ ರೋಗಗಳಿಂದ ವಿಮೋಚನೆಯನ್ನು ನೀಡುವವನು. ಸ್ಥಿರವಾದುದು, ಶಾಶ್ವತವಾದುದು, ಅನಂತವಾದುದರ ಕಡೆಗೆ ಹೋಗುವ ನನ್ನ ಯತ್ನದಿಂದ ನನ್ನನ್ನು ಬಿಡಿಸಬೇಡ. ಮಾಗಿದ ಸೌತೆಕಾಯಿ ಬಳ್ಳಿಯಿಂದ ಹೇಗೆ ಬಿಡುಗಡೆ ಹೊಂದುತ್ತದೆಯೋ ಹಾಗೇ ನನ್ನನ್ನು ಸಾವಿನಿಂದ ಅಮರತ್ವವು ಬಿಡುಗಡೆಯಾಗಲಿ
ಉಪಯೋಗ: ಮಹಾ ಮೃತ್ಯುಂಜಯ ಮಂತ್ರವನ್ನು ಅತ್ಯಂತ ಶಕ್ತಿಶಾಲಿ ಮಂತ್ರವೆಂದು ಹೇಳಲಾಗುತ್ತದೆ. ಓಂ ನಮಃ ಶಿವಾಯ ಮಂತ್ರವನ್ನು ನೀವು ಯಾವುದೇ ಸಮಯದಲ್ಲಾಗಿರಬಹುದು ಅಥವಾ ಸಂದರ್ಭದಲ್ಲಾಗಿರಬಹುದು ಪಠಿಸಬಹುದು ಆದರೆ ಮಹಾಮೃತ್ಯುಂಜಯ ಮಂತ್ರವನ್ನು ಪಠಿಸಲು ಅದರದ್ದೇ ಆದ ವಿಧಿ – ವಿಧಾನಗಳಿವೆ. ಸಾವಿನ ಭಯದಿಂದ ದೂರಾಗಲು ಮತ್ತು ಇತರೆ ಭೌತಿಕ ಸಂಕಟಗಳಿಂದ ಹೊರಬರಲು ಈ ಮಂತ್ರವನ್ನು ಪಠಿಸಬೇಕು.