ಮನೆ ಯೋಗಾಸನ ಮಹಾಮುದ್ರಾ

ಮಹಾಮುದ್ರಾ

0

‘ ಮಹಾ’ ಎಂದರೆ ಅತಿ ದೊಡ್ಡದಾದ ಅಥವಾ ಶ್ರೇಷ್ಠವಾದ ‘ಮುದ್ರಾ’ ಎಂದರೆ ಮುಚ್ಚಿಡುವುದು, ಆ ಕಾರಣವನ್ನು ಕಲ್ಪಿಸುವುದು.ಕುಳಿತು ಮಾಡುವ ಈ ಭಂಗಿಯಲ್ಲಿ ಮುಂಡಬಾಗದ ಮೇಲ್ಗಡೆಯ ಮತ್ತು ತಳಭಾಗದ ರಂಧ್ರಗಳನ್ನು ಮುಚ್ಚಿ ಭದ್ರಗೊಳಿಸಬೇಕಾದುದಿದೆ.

Join Our Whatsapp Group

ಅಭ್ಯಾಸ ಕ್ರಮ

1. ಮೊದಲು ನೆಲದಮೇಲೆ ಕುಳಿತು ಕಾಲುಗಳನ್ನು ಮುಂಗಡಗೆ ನೇರವಾಗಿ ಚಾಚಿಡಬೇಕು.

2. ಬಳಿಕ ಎಡಮಂಡಿಯನ್ನು ಬಾಗಿಸಿ,ಅದನ್ನು ಎಡಪಕ್ಕಕ್ಕೆ ಸರಿಸಿ, ಎಡತೊಡೆಯ ಹೊರಬದಿಯನ್ನೂ ಮತ್ತು ಮೀನಖಂಡವನ್ನೂ ನೆಲಕ್ಕೆ ಒರಗಿಸಿಇಡಬೇಕು.

3. ಬಳಿಕ ಎಡ ಹಿಮ್ಮಡಿಯನ್ನು ಎಡತೊಡೆಯ ಬಳಬದಿಗೆ ಒತ್ತಿಟ್ಟು ಗುದಗುಹ್ಯಗಳ ನಡುತಾಣದೆಡೆಗೆ ಅಳವಡಿಸಬೇಕು. ಅಲ್ಲದೆ ಎಡಗಾಲಿನುಂಗುಟವು  ತೊಡೆಯ ಒಳಬದಿಯನ್ನು ಮುಟ್ಟುವಂತಿರಬೇಕು.ನೀಳವಾಗಿ ಚಾಚಿದ್ದ ಬಲಗಾಲಿಗೂ ಮತ್ತು ಮಡಿಸಿಟ್ಟ ಎದೆಗಾಲಿಗೂ ನಡುವಣ ಅಂತರ 90 ಡಿಗ್ರಿಗಳಷ್ಟು ಮಾಡಿಡಬೇಕು.

4. ಅನಂತನ ತೋಳುಗಳನ್ನು ಬಲಗಾಲಿನ ಕಡೆಗೆ ಮುಂಚಾಚಿ, ಆ ಕಾಲಬೆರಳನ್ನೂ ಕೈ ಹೆಬ್ಬೆರಳನ್ನೂ ತೋರು ಬೆರಳುಗಳಿಂದ  ಬಿಗಿಯಾಗಿ ಬಗ್ಗಿಸಿ ಹಿಡಿದುಕೊಳ್ಳಬೇಕು.

5. ತಲೆಯನ್ನು ಬಗ್ಗಿಸಿ,ಗದ್ದವನ್ನು ಎದೆಯೆಲುಬಿನ ಮೇಲ್ಭಾಗ ಕಂಠದ ಬಳಿಯಿರುವ ಆಸ್ತಿಗಳ ನಡುಬಾಗ ಈ ಸ್ಥಳದಲ್ಲಿ ಒತ್ತಿಡಬೇಕು

6. ಈಗ ಬೆನ್ನೆಲುಬನ್ನು ನೆಟ್ಟಗೆ ಬಲಗಾಲು ಬಲಗಡೆಗೆ ಸ್ವಲ್ಪವೂ ಸರಿಯದಂತೆ ಮಾಡಬೇಕು.

7. ಬಳಿಕ ಉಸಿರನ್ನು ಪೂರಾ ಒಳಕ್ಕೆಳೆದು, ಆಸನದಿಂದ ಹಿಡಿದು ವಪೆಯವರೆವಿಗೂ ಇರುವ ಕಿಬೋಟ್ಟಿಯ ಭಾಗವನ್ನೆಲ್ಲ ಬಿಗಿಗೊಳಿಸಿ,ಕಿಬೋಟ್ಟೆಯನ್ನು ಬೆನ್ನೆಲುಬಿನ ಕಡೆಗೆ ಹಿಂದಕ್ಕೂ ವಾಪೆಯ ಕಡೆಗೆ ಹಿಂದಕ್ಕೂ ವಪೆಯ  ಕಡೆಗೆ  ಮೇಲಕ್ಕೂ ಎಳೆದಿಡಬೇಕು.

8. ಆಮೇಲೆ ಕಿಬ್ಬೊಟ್ಟೆಯ ಮೇಲಿನ ಬಿಗಿತವನ್ನು ಸಡಿಲಿಸಿ, ಬಹಳ ಉಸಿರನ್ನು ಹೊರಕ್ಕೆ ಬಿಟ್ಟು ಮತ್ತೆ ಉಸಿರನ್ನು ಒಳಕ್ಕೆಳೆದು, ಅದನ್ನು ಒಳಗೆ ತಡೆದಿಟ್ಟು, ಕಿಬ್ಬೊಟ್ಟೆಯನ್ನು ಮತ್ತೆ ಬಿಗಿಗೊಳಿಸಬೇಕು. ಈ ಭಂಗಿಯಲ್ಲಿ ಒಂದರಿಂದ ಮೂರು ನಿಮಿಷಗಳ ಕಾಲ ಇರಬೇಕು.

9. ಈಗ ಕಿಬ್ಬಟ್ಟೆಯ ಮೇಲಿನ ಬಿಗಿತವನ್ನು ಸಡಿಲಗೊಳಿಸಿ,ಉಸಿರನ್ನು ಹೊರಕ್ಕೆ ತಲೆಯನ್ನು ಮೇಲೆತ್ತಿ,ಕೈಗಳನ್ನು ಸಡಿಲಿಸಿ ಬಗ್ಗಿಸಿಟ್ಟು  ಕಾಲನ್ನು ನೇರಗೊಳಿಸಬೇಕು.

10. ಇದೇ ಭಂಗಿಯನ್ನು ಇನ್ನೊಂದು ಕಡೆಯೂ ಅಭ್ಯಸಿಸಬೇಕು. ಆದರೆ ಎಡ ಗಾಲನ್ನು ಮುಂಚಾಚಿ ಬಲಗಾಲನ್ನು ಮಡಿಸಿಟ್ಟು ಹಿಂದೆ ವಿವರಿಸಿದ ಕ್ರಮವನ್ನನುಸರಿಸಬೇಕು.  ಎರಡೂ ಭಂಗಿಗಳಲ್ಲಿ ಕಾಲಾಂತವು ಒಂದೇ ಆಗಿರಬೇಕು.

ಪರಿಣಾಮಗಳು

ಈ ಆಸನಾಭ್ಯಾಸವು ಕಿಬ್ಬೊಟ್ಟೆ ಯೊಳಗಿನ ಅಂಗಗಳನ್ನೂ ಮೂತ್ರಪಿಂಡಗಳನ್ನೂ ಅವುಗಳಿಗೆ ಸಂಬಂಧಿಸಿದ ಗ್ರಂಥಿಗಳನ್ನು ಚೆನ್ನಾಗಿ ಹುರುಪುಗೊಳ್ಳುವಂತೆ ಮಾಡುತದೆ.ಸ್ತ್ರೀಯರು ಇದನ್ನು ಅಭ್ಯಸಿಸಿದಲ್ಲಿ,ಅವರ ಗರ್ಭಕೋಶವು ಅದರ ಸ್ಥಳದಲ್ಲಿಯೇ ನೆಲಗೊಳಿಸಲು ನೆರವಾಗುತ್ತದೆ ; ಗರ್ಭಕೋಶದ ಸ್ಥಾನಪಲ್ಲಟದಿಂದಾಗುವ ಬಾಧೆಗಳಿಂದ ಪೀಡಿತರಾದವರು, ಈ ಆಸನಭಂಗಿಯಲ್ಲಿ ಹೆಚ್ಚುಕಾಲ ವಿದ್ದುದೇ ಆದರೆ, ಆ ನ್ಯೂನತೆಗಳನ್ನು ಕಳೆದುಕೊಂಡು ಗುಣ ಹೊಂದುವರು. ಅಲ್ಲದೆ ಅವರು ಅಜೀರ್ಣವನ್ನು ಹೋಗಲಾಡಿಸಿಕೊಳ್ಳುವುದಕ್ಕೆ ಇದು ತುಂಬಾ ಸಹಕಾರಿ.

ಹಿಂದಿನ ಲೇಖನಕಲೆಗಳ ಮುಖ
ಮುಂದಿನ ಲೇಖನಹಾಸ್ಯ