ಮನೆ ರಾಜ್ಯ ಮಹಾರಾಣಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 4 ಕೊಠಡಿ, ಶೌಚಾಲಯ ಬ್ಲಾಕ್ ಉದ್ಘಾಟನೆ ಮಾಡಿದ ಶಾಸಕ...

ಮಹಾರಾಣಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 4 ಕೊಠಡಿ, ಶೌಚಾಲಯ ಬ್ಲಾಕ್ ಉದ್ಘಾಟನೆ ಮಾಡಿದ ಶಾಸಕ ಕೆ. ಹರೀಶ್ ಗೌಡ

0

ಮೈಸೂರು: ಮಹಾರಾಣಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿವೇಕ ಶಾಲೆ ಯೋಜನೆ (ಪ.ಪೂ.ಕಾಲೇಜು) ಯಡಿಯಲ್ಲಿ 4 ತರಗತಿ ಕೊಠಡಿಗಳ ನಿರ್ಮಾಣ ಕಾಮಗಾರಿಯನ್ನು (ಅಂದಾಜು ವೆಚ್ಚ ರೂ. 75.00 ಲಕ್ಷ) ಪೂರ್ಣಗೊಳಿಸಿದ್ದು.  4 ತರಗತಿ ಹೊಸ ಕೊಠಡಿಗಳ ಕಟ್ಟಡದ ಬ್ಲಾಕ್ ಹಾಗೂ ಸದರಿ ಕಾಲೇಜಿನಲ್ಲಿಯೇ ಶೌಚಾಲಯ ನಿರ್ಮಾಣ ಕಾಮಗಾರಿಯನ್ನು (ಅಂದಾಜು ವೆಚ್ಚ ರೂ.7.35 ಲಕ್ಷ) ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದವರು ನಡೆಸಿರುತ್ತಾರೆ. 

Join Our Whatsapp Group

ಮೇಲ್ಕಂಡ 2 ಕಾಮಗಾರಿಗಳನ್ನು ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಕೆ. ಹರೀಶ್ ಗೌಡ ರವರು ಈ ದಿನ ಬೆಳಿಗ್ಗೆ 11.00 ಗಂಟೆಗೆ ಉದ್ಘಾಟನೆ ಮಾಡಿ ಮಾತನಾಡುತ್ತಾ, ನನ್ನ ಕ್ಷೇತ್ರದಲ್ಲಿ ಅತಿಹೆಚ್ಚು ಸರ್ಕಾರಿ ಶಾಲೆ ಹಾಗೂ ಕಾಲೇಜುಗಳಿವೆ. ಅವುಗಳಿಗೆ ಹೆಚ್ಚಿನ ದಾಖಲಾತಿ ಆಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದ್ದು, ಈ ಹಿನ್ನೆಲೆಯಲ್ಲಿ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸುವ ಕೆಲಸವನ್ನು ಮಾಡುತ್ತೇನೆ.  ಬಡಜನರು ಖಾಸಗಿ ಶಿಕ್ಷಣ ಸಂಸ್ಥೆಗಳ ಮೊರೆ ಹೋಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಗುಣಮಟ್ಟದ ಶಿಕ್ಷಣ ನೀಡಬೇಕು. ಇಂದಿನಿ ಸ್ಪರ್ಧಾತ್ಮಕ ಶಿಕ್ಷಣದಲ್ಲಿಯೂ ಪೈಪೋಟಿ ನೀಡುವ ಶಿಕ್ಷಣ ಸವಾಲು ಅರಿತುಕೊಳ್ಳಬೇಕು.

ಸದರಿ ಕಾರ್ಯಕ್ರಮದಲ್ಲಿ ಪದವಿ ಪೂರ್ವ ಕಾಲೇಜಿನ ಉಪ ನಿರ್ದೇಶಕರಾದ ಶ‍್ರೀ ಮರಿಸ್ವಾಮಿರವರು, ಪ್ರಾಂಶುಪಾಲರಾದ ಶ್ರೀ ಸೋಮಣ್ಣ, ಕಾಲೇಜು ಅಭಿವೃದ್ಧಿ ಉಪಾಧ್ಯಕ್ಷರಾದ ಶ್ರೀ ರಾಜೀವ್, ಪಿ.ಆರ್.ಇ.ಡಿ ಕಾರ್ಯಪಾಲಕ ಅಭಿಯಂತರರು, ಕಾಲೇಜಿನ ಅಧ್ಯಾಪಕರು, ಕಚೇರಿ ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.