ಮನೆ ರಾಜಕೀಯ ಡಿ.6ರಂದು ಬೆಳಗಾವಿಗೆ ಮಹಾರಾಷ್ಟ್ರ ಸಚಿವರು: ಪ್ರತಿಬಂಧಕಾಜ್ಞೆ ಹೊರಡಿಸುವ ಸುಳಿವು ನೀಡಿದ ಸಿಎಂ ಬೊಮ್ಮಾಯಿ

ಡಿ.6ರಂದು ಬೆಳಗಾವಿಗೆ ಮಹಾರಾಷ್ಟ್ರ ಸಚಿವರು: ಪ್ರತಿಬಂಧಕಾಜ್ಞೆ ಹೊರಡಿಸುವ ಸುಳಿವು ನೀಡಿದ ಸಿಎಂ ಬೊಮ್ಮಾಯಿ

0

ಬೆಳಗಾವಿ(Belagavi): ಎಂಇಎಸ್ ಮನವಿ ಮೇರೆಗೆ ಡಿ. 6 ಕ್ಕೆ ಬೆಳಗಾವಿ ಭೇಟಿ ನೀಡಲು ನಿರ್ಧರಿಸಿರುವ‌ ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವರ ವಿರುದ್ಧ ಪ್ರತಿಬಂಧಕಾಜ್ಞೆ ಹೊರಡಿಸಲು ಕರ್ನಾಟಕ ‌ಸರ್ಕಾರ ನಿರ್ಧರಿಸಿರುವ ಸುಳಿವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿದ್ದಾರೆ.

ಇಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗಡಿ ವಿಚಾರದ ಕಾರಣ ಪರಿಸ್ಥಿತಿ ಸರಿ ಇಲ್ಲ. ಇಂಥ ಸಂದರ್ಭದಲ್ಲಿ ಮಹಾರಾಷ್ಟ್ರದ ಸಚಿವರು ಬೆಳಗಾವಿಗೆ ಬರುವುದು ಸರಿಯಲ್ಲ. ಈ ಬಗ್ಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮಹಾರಾಷ್ಟ್ರದ ಮುಖ್ಯ ಕಾರ್ಯದರ್ಶಿಗೆ ಫ್ಯಾಕ್ಸ್ ಮೂಲಕ ಸಂದೇಶ ನೀಡಿದ್ದಾರೆ ಎಂದು ಹೇಳಿದರು.

ಎರಡೂ ರಾಜ್ಯಗಳ ಹಿತದೃಷ್ಟಿಯಿಂದ ಈ ರೀತಿ ಪರಿಸ್ಥಿತಿಯಲ್ಲಿ ಬರಬಾರದು ಎಂಬ ಸಂದೇಶವನ್ನು ನಾವು ಈಗಾಗಲೇ ಕಳಿಸಿದ್ದೇವೆ. ಅದಾಗಿಯೂ ಬಂದರೆ; ಹಿಂದೆ ಹಲವಾರು ಬಾರಿ ಈ ರೀತಿ ಪ್ರಯತ್ನ ಆದಾಗ ಕರ್ನಾಟಕ ಸರ್ಕಾರ ಏನು ಕ್ರಮ ಕೈಗೊಂಡಿದೆಯೋ ಅದೇ ಕ್ರಮ ಕೈಗೊಳ್ಳುತ್ತೇವೆ ಎಂದರು.

ಜತ್ತ ಕನ್ನಡಿಗರ ನೀರಾವರಿಗಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ₹2000 ಕೋಟಿ ಘೋಷಣೆ ಮಾಡಿದ್ದಾರೆಂದು ಕೇಳಿದ್ದೇನೆ. ಜತ್ತ ತಾಲ್ಲೂಕಿನ ಕನ್ನಡ ಕುಲಬಾಂಧವರು ಹಲವಾರು ವರ್ಷಗಳಿಂದ ನೀರು ಇಲ್ಲದೇ ಬಳಲುತ್ತಿದ್ದರು. ಅವರ ಕಷ್ಟ ಈಗಲಾದರೂ ನೀಗಲಿ ಎಂದು ಪ್ರತಿಕ್ರಿಯಿಸಿದರು.

ಈ ಯೋಜನೆ ಆ ಭಾಗದ ಜನರಿಗೆ ಮುಟ್ಟುವುದು ಮುಖ್ಯ ಎಂದರು.