ಮನೆ ಆರೋಗ್ಯ ಮಹಾತಿಕ್ತ ಧೃತ

ಮಹಾತಿಕ್ತ ಧೃತ

0

 *ಸಪ್ತಪರ್ಣಾರಗ್ನದಾತಿವಿಷಾ ಪಾದಾಕಟುರೋಹಿಣ್ಯಮೃತಾ ತ್ರಿಫಲಾ

Join Our Whatsapp Group

 *ಪಟೋಲ ಪಿಚುಮರ್ದ ಪರ್ಪಟಃ ದುರಾಲ ಭಾತ್ರಾಯ ಮಾಣಾ

 ಮುಸ್ತಾಚನ್ನನ ಪದ್ಮಕ ಹರಿದ್ರೋ ಪಕುಲ್ಕಾ* *ವಿಶಾಲ ಮೂರ್ವಾ ಶತಾವರೀ

  ಮಧುಕ ಭೂನಿಮ್ಮ ಗೃಷ್ಟಿಕಾ ಇತಿ ಸಮಭಾಗಾಃ ಕಲ್ಯಃ ಸ್ಯಾತ್: ಕಲ್ಯಾತ್*ಚತುರ್ಗುಣಂ ಸರ್ಪಿ ಪ್ರಕ್ಷಿಹೃ ತದ್ವಿಗುಣೋ ಧಾತ್ರೀ ಫಲರಸಪ್ತ ಚತುರ್ಗುಣಾ*

 ಅಪಸ್ತ ದೈಕಧ್ವಂ ಸಮಾಲೋಡ್ಕ ವಿಪಚೇತ್ : ಎತತ್ ಮಹಾ

 ತಿಕ್ಕಕಂ ನಾಮ ಸರ್ಪಿ, ಕುಷ್ಠ ವಿಷಮ ಜ್ವರ ರಕ್ತಪಿತ್ತ ಹೃದ್ರೋಗೋನ್ಮಾದ ಗುಲ್ಬ

 ಪಿಡಕಾ ಸೃಗರಗಗಳಣ್ಣ ಗಣ್ಣರೋಗ ವಿಸರ್ಪಪಾಣ್ಯ ಕಣ್ಣೂಪಾಮದೀಂಶ್ಚ ಶಮಯೇದಿತಿ*

 *ಮದ್ದಾಲೆ, ಕಕ್ಕೆ, ಅತಿಬಜೆ, ಅಗಿಲು ಶುಂಠಿ ಕಟುಕ ರೋಹಿಣಿ, ಅಮೃತಬಳ್ಳಿ, ತ್ರಿಫಲ, ಕಹಿಪಡವಲ, ಬೇವು, ಪರ್ಪಾಟಕ, ತುರುಚನಬಳ್ಳಿ ಕಹಿದಸರಿ, ಕೊನ್ನಾರಿಗೆಡ್ಡೆ, ಶ್ರೀಗಂಧ, ಪದ್ಮಕ, ಅರಿಸಿನ, ಹಿಪ್ಪಲಿ, ದಾಸಮಕ್ಕೆ ಬೇರು, ಕೊರಟಿಗೆ ಹಂಬು, ಆಷಾಡಿ ಬೇರು (ಶತಾವರಿ), ಸೋಗದೆ ಬೇರು ಕೊಡಸಿಗನ ಬೇರು, *ಆಡುಸೋಗೆ, ಬಜೆ, ಅತಿಮಧುರ, ನೆಲಬೇವು, ಹಂದಿಗೆಡ್ಡೆ – ಇವುಗಳನ್ನು ಸಮಭಾಗ ತೆಗೆದುಕೊಂಡು ಕಲ್ಕ ತಯಾರಿಸಿ, ಕಲ್ಕದ

4 ಭಾಗದಷ್ಟು ತುಪ್ಪವನ್ನು* *ಮಿಶ್ರಣ ಮಾಡಬೇಕು. ಒಟ್ಟು ಮಿಶ್ರಣದ 2 ರಷ್ಟು ಬೆಟ್ಟದ  ನೆಲ್ಲಿಕಾಯಿ ರಸ, ಇದರ

* 4 ಭಾಗ *ನೀರು ಸೇರಿಸಿ ಒಂದು ಕಡಾಯಿಗೆ ಹಾಕಿ ಕುದಿಸಿ ತಯಾರಿಸಿದ ತುಪ್ಪವನ್ನು ಮಹಾತಿಕ್ತ ಘೃತವೆಂದು ಕರೆಯುತ್ತಾರೆ. ಇದರ ಸೇವನೆಯಿಂದ

* *ಕುಷ್ಠ, ವಿಷಮ ಜ್ವರ, ರಕ್ತಪಿತ್ತ, ಹೃದ್ರೋಗ, ಉನ್ಮಾದ, ಅಪಸ್ಮಾರ, ಗುಲ್ಮ, ಪೀಡಿಕೆಗಳು, ಪ್ರದರ, ಗಳಗಂಡ, ಮಾಲೆ, ವಿಸರ್ಪ, ಪಾಂಡ್ಯ, ನವೆ, ಕಜ್ಜಿ, ತುರಿ ಮುಂತಾದವುಗಳು ನಿವಾರಣೆಯಾಗುತ್ತವೆ.

*

 ತ್ರಿಪಲಾಟೊಲಸಿಚುಮನ್ದಾಟರೂಪಕ ಕಟುಕರೋಹಿಣೇ ದುರಾಲಭಾತ್ರಾಯಮಾಣಾ ಪರ್ವಾಟಕಾಕ್ಷ್ಯತೇಷಾಂ ದ್ವಿಪಲಿರ್ಕಾ

 ಭಾರ್ಗಾ ಜಲದ್ರೋಣೀ ಪ್ರಕ್ಷಿಪ್ತ ಪಾದಾವ ಶೇಷಂ ಕಷಾಯ ಮಾದಾಯ ಕಲ್ಕ ಪೇಷ್ಯಾಣಿಮಾನಿ ಭೇಷಚಾನಿ ಅರ್ಧ ಪಲಿಕಾನಿ

 ತ್ರಾಯಾಮಾಣ ಮುಸ್ತೇ ನ್ದ್ರ ಯವಚನ್ನನ ಕಿರಾತತಿಕ್ರಾನಿ ಪಿಪ್ಪಿಲ್ಯ

 *ಶ್ವೇತಾನಿ ಘೃತಪ್ರಸ್ಥೇ ಸಮಾವಾಹ್ನ ವಿಪಚೇತಃ: ಏತತ್ ತಿಕ್ಕಕಂ

 ನಾಮಸರ್ಪಿಃ ಕುಷ್ಕ ವಿಷಮಜ್ವರ ಗುಲ್ಮಾ ರ್ಶೋಗ್ರಹಣಿದೋಪ ಶೋಪಾಣ್ಣು ರೋಗ ವಿಸರ್ಪ ಪಾಣ್ಯ ಶಮನಂ ಚೇತಿ||

          ತ್ರಿಫಲ, ಕಹಿಪಡವಲ, ಬೇವು, ಆಡುಸೋಗೆ, ಕಟುಕ ರೋಹಿಣಿ, ತುರುಚನಬಳ್ಳಿ, ಕಹಿದಸರಿ, ಪರ್ಪಾಟಕ- ಇವು ಪ್ರತಿಯೊಂದನ್ನು ಎರಡು ಪಲ ಪ್ರಮಾಣದಷ್ಟು ತೆಗೆದುಕೊಂಡು, ಇದರ 8 ಭಾಗದಷ್ಟು ನೀರಿಗೆ ಮಿಶ್ರಣ ಮಾಡಿ ಕುದಿಸಿ ಕಾಲು ಭಾಗ ಕಷಾಯ ಉಳಿದ ನಂತರ ಸೋಸಿಕೊಳ್ಳಬೇಕು. ಹೀಗೆ ಸೋಸಿಕೊಂಡ ಕಷಾಯಕ್ಕೆ ಕಹಿದಸರಿ, ಕೊನ್ನಾರಿಗೆಡ್ಡೆ, ಕೊಡಸಿಗೆ ಬೀಜ, ಶ್ರೀಗಂಧ, ನೆಲಬೇವು, ಹಿಪ್ಪಲಿ – ಇವುಗಳನ್ನು ಅರ್ಧ ಪಲದಂತೆ ತೆಗೆದುಕೊಂಡು ಚೂರ್ಣ ಮಾಡಿ ಮಿಶ್ರಣ ಮಾಡಬೇಕು. ಒಟ್ಟು ಮಿಶ್ರಣಕ್ಕೆ 8 ಪ್ರಸ್ಥ ತುಪ್ಪ ಸೇರಿಸಿ ಕಾಯಿಸಿ ತಯಾರಿಸಿದ ಘೃತಪಾಕ ಸೇವನೆಯಿಂದ ಕುಷ್ಠ, ವಿಷಮ ಜ್ವರ, ಗುಲ್ಮ, ಅರ್ಶಸ್ಸು, ಗ್ರಹಣಿ, ಶೋಫ, ವಾಯುರೋಗ, ವಿಸರ್ಪ ಮತ್ತು ಪಾಂಡ್ಯಗಳು ಶಮನವಾಗುತ್ತವೆ (1 2 = 48 : 1 = 768).

 ನೀಲಘೃತ

13. ವಾಯುಸೀ ಫಲ್ಲುತಿಕ್ತಾನಾಂ *ಶತಂ ದತ್ವಾ ಪೃಥಕ್ ಪೃಥಕ್||  ದ್ವೇ ಲೋಹದ ಜಸಃ ಪ್ರಶ್ನೆ ತ್ರಿಫಲಾ ತ್ರಾಡಕಂ ತಥಾ ।

 ದ್ರೋಣೀಽಪಾಂ ಪಚೇದ್ಯಾ ವದ್ಯಾಗೌದ್ವಾವಸ ನಾದಪಿ  || ಶಿಷ್ಟಂಚ ವಿಪಚೇದ್ಧೂಯ ಏತೈಃ ಶಕ್ತ ಪ್ರಪೇಷಿತೈಃ ।

 ಕಲ್ಕೈರಿನ್ದ್ರ ಯವವೊಷ ತ್ವಗ್ತಾರು ಚತುರಙ್ಗಳೈ : ||

 ಪರಾವತಪದೀದನ್ತಿ ವಾ ಕುಚೀಕೇ ಸರಾಷ್ಟ್ರಯ್ಯೆಃ |

 ಕಣ್ವಕಾರ್ಯ ಚ ತತ್ವತ್ವಂ ಧೃತಂ ಕುಷ್ಟಿತು ಯೋಜಯೇತ್ ||  ದೋಷಧಾತ್ವಾ ಶ್ರಿತಂ ಪಾನಾದ ಭಙ್ತ್ಗಾತ್ತ್ವಗ್ಗತಂ ತಥಾ ।

ಅಪ್ಯಾಸಾಧ್ಯಂ ನೃಣಾಂ ಕುಷ್ಠಂ ನಮ್ಮಾನೀಲಂ ನಿಯಚ್ಛತಿ  ||

      Bಎಲುವು ಸಂಧಿಮೂಲ (ಕೆಲವರು ಕೆಂಪು ಗಣಿಕೆ ಗಿಡವೆನ್ನುತ್ತಾರೆ), ಕಲ್ಲತ್ತಿ ಮರದ ತೊಗಟೆ,, ಕಟುಕ ರೋಹಿಣಿ – ಇವುಗಳನ್ನು ಪ್ರತಿಯೊಂದನ್ನು 100 ಪಲಗಳಷ್ಟು ತೆಗೆದುಕೊಳ್ಳಬೇಕು ಇದಕ್ಕೆ ಕಬ್ಬಿಣದ ಅರಪುಡಿ 2 ಪ್ರಸ್ತ, ತ್ರಿಫಲ 3 ಅಡಕದಷ್ಟು ಸೇರಿಸಿ, 6 ದ್ರೋಣ (48 ಸೇರು) ‘ನೀರನ್ನು ಹಾಕಿ, 2 ಅಡಕದಷ್ಟು ಕೆಂಪುಹೊನ್ನೆ ತೊಗಟೆಯನ್ನು ಸೇರಿಸಿ, 12 ಸೇರು ಕಷಾಯ ಉಳಿಸಿಕೊಂಡು, ಕಷಾಯಕ್ಕೆ ಕೊಡಸಿಗನ ಬೀಜ, ತ್ರಿಕಟು, ದಾಲ್ತಿನ್ನಿ, ದೇವದಾರು, ಹೆರಳಿಬೇರು, ಹಂಸಪಾದಿ, ಜಾಪಾಳದ ತೊಗಟೆ, ಬಾವಂಚಿ ಬೀಜ, ಪಗಡೆ ಮರದ ತೊಗಟೆ, ನೆಲಗುಳ್ಳದ ಸಮೂಲ ಇವುಗಳನ್ನು ಸಮ ಪ್ರಮಾಣ ತೆಗೆದುಕೊಂಡು ಅಳತೆ 3 ಪ್ರಸ್ಥ ಬರುವಂತೆ ಅಳತೆ ಸೇರಿಸಿ, 3 ಸೇರು ತುಪ್ಪದೊಡನೆ ಘೃತ ಪಾಕ ಮಾಡಬೇಕು. ಈ ಘೃತವನ್ನು ಕುಷ್ಠರೋಗಿ ಸೇವಿಸುವುದರಿಂದ ಮತ್ತು ಅಭ್ಯಂಗಕ್ಕೆ ಉಪಯೋಗಿಸುವುದರಿಂದ ಅಸಾಧ್ಯವಾದ ಕುಷ್ಠರೋಗ ವಾಸಿಯಾಗಿ ಚರ್ಮಕ್ಕೆ ಸ್ವಾಭಾವಿಕ ಬಣ್ಣ ಉಂಟಾಗುತ್ತದೆ.

(1 ಪಲ = 48 ಗ್ರಾಂ: 1 ಪ್ರಸ್ಥ = 760 ಗ್ರಾಂ: 1 ಅಡಕ = 3.73 ಕಿ.ಗ್ರಾಂ: 1 ದ್ರೋಣ = 12.288 ಕಿ.ಗ್ರಾಂ. 25 = 1114 5.)

 ಮಹಾನೀಲ ಘೃತ

14. ತ್ರಿಫಲಾತ್ವಕ್ ತ್ರಿಕಟುಕಂ ಸುರಸಾ ಮದಯನ್ತಿಕಾ | ವಾಯಸ್ಕಾರಶ್ವಧಾನಾಂ ಚ ತುಲಾಂ ಕುಯ್ರತ್ ಪೃಥಕ್ ಪೃಥಕ್

. ಕಾಕಮಾಚ್ಯರ್ಕ ವರುಣದನ್ತಿಕುಟಜ ಚಿತ್ರಕಾತ್ | ದಾರ್ವಿನಿದಿಗ್ರಿ ಕಾಭ್ಯಾಂ ತು ಪೃಥಗ್ನ ಶಪಲಂ ತಥಾ  ||

 ತ್ರಿದ್ರೋಣೇಽಪಾಂ ಪದ್ಯಾವತ್ ಷಟ್ ಪ್ರಸ್ಥಂ ಪರಿಶೆಪಿತಮ್ | ಶಕೃದ್ರ ಸದಧಿಕ್ಷೀರ ಮೂತ್ರಾಣಾಂ ಪೃಥಗಾಡಕಮ್ ||

          ತ್ರಿಫಲ, ದಾಲ್ತಿನ್ನಿ, ತ್ರಿಕಟು, ತುಳಸಿ, ತೇರಣದ ಸೊಪ್ಪು (ಎಲುವು ಸಂಧಿ ಮೊಲ್ಲೆ), ಕಕ್ಕೆತೊಕ್ಕು ಚಿಗುರು – ಇವು ಪ್ರತಿಯೊಂದನ್ನು 100 ಪಲ ಪ್ರಮಾಣ ತೆಗೆದುಕೊಳ್ಳಬೇಕು. ಗಣಿಕೆ, ಎಕ್ಕದ ಬೇರು, ಮಟ್ಟಮಾವು (ಮದ ಬಸಳೆ), ಜಾಪಾಳದ ತೊಗಟೆ, ಕೊಡಸಗಿನ ತೊಗಟೆ, ಚಿತ್ರಮೂಲ, ಮರದರಿಸಿನ ನೆಲಗುಳ್ಳದ ಸಮೂಲ – ಇವು ಪ್ರತಿಯೊಂದನ್ನು 10 ಪಲ ತೆಗೆದುಕೊಂಡು ಎಲ್ಲವನ್ನೂ 3 ದ್ರೋಣ ನೀರಿನಲ್ಲಿ (6 ದ್ರೋಣ ಅಥವಾ 48 ಸೇರು ನೀರು) ಹಾಕಿ 6 ಪ್ರಸ್ಥ ನಿಲ್ಲುವಂತೆ ಕಷಾಯ ಮಾಡಿ, ಸೋಸಿದ ಕಷಾಯಕ್ಕೆ, ಹಸುವಿನ ಸಗಣಿಯ ರಸ, ಮೊಸರು, ಹಾಲು, ಗಂಜಳ, ತುಪ್ಪ – ಇವುಗಳನ್ನು ಒಂದೊಂದನ್ನೂ ಅಡಕ (ಅಳತೆಯ 2 ಸೇರಿನಷ್ಟು) ಸೇರಿಸಿ, ನೆಲಬೇವು, ತ್ರಿಕಟು, ಚಿತ್ರಮೂಲ, ಹೊಂಗೆಬೀಜ, ವಜ್ರನೀಲಿಗಿಡದ ಸಮೂಲ, ತಿಗಡೆ, ಬಾವಂಚಿ ಬೀಜ, ಬಗಿನಿ ಮರದ ಬೇರು, ನೀಲಿ ಮತ್ತು ಬೇವಿನ ಹೂ ಇವುಗಳ ಸಮ ಭಾಗದ ಕಲ್ಯ 2 ಪ್ರಸ್ಥದಷ್ಟನ್ನು ಸೇರಿಸಿ ಮಂದಾಗ್ನಿ ಕಾಯಿಸಿ ಘೃತವನ್ನು ತಯಾರಿಸಬೇಕು. ಈ ಘೃತವನ್ನು ಮಹಾನೀಲ ಧೃತ ಎಂದು ಕರೆಯುತ್ತಾರೆ. ಈ ಘೃತವನ್ನು. ಶ್ಚಿತ್ರ ರೋಗಿಗಳ ಮೈಗೆ ಲೇಪಿಸುತ್ತಾ ಬಂದರೆ ಚರ್ಮ ಮೊದಲಿನಂತೆ ಸ್ವಾಭಾವಿಕ ಬಣ್ಣಕ್ಕೆ ಬರುತ್ತದೆ. ಸೇವನೆಯಿಂದ ಭಗಂದರ, ಕ್ರಿಮಿ ಅರ್ಶಸ್ಸು ಗುಣವಾಗುತ್ತವೆ.

 ವಜ್ರಕ ತೈಲ

. ಸಪ್ತಪರ್ಣಕರಞ್ಞಾರ್ಕ ಮಾಲತೀ ಕರವೀರಜಮ್ | ಸ್ಟುಹೀಶಿರೀಷಯೋ ರ್ಮೂಲಂ ಚಿತ್ರಕಾಸ್ಕೋತ ಹೋರಪಿ ||

 ವಿಪಲಾಙ್ಗಲವಜ್ರಾಖ್ಯಕಾಸೀಸಾಲಮನಃ ಶಿಲಾಃ |

 ಕರಞ್ಚ ಬೀಜಂ ತಿಕಟು ತ್ರಿಫಲಾಂ ರಜನೀದಯ್ಯಮ್ ||

 ಸಿದ್ಧಾರ್ಥಕ್ರಾ ವಿಡಞ್ಗನಿ ಪ್ರಪುನ್ನಾಡಂ ಚ ಸಂಹರೇತ್ | ಮೂತ್ರಪಿಷ್ಟೖಃ ಪಚೇದೇ ತೈಸ್ತೈಲಂ ಕುಷ್ಕವಿನಾಶಮ್ ||

       ಮದ್ದಾಲೆ, ಹೊಂಗೆ, ಎಕ್ಕದ ಬೇರು, ಜಾಜಿಸೊಪ್ಪು, ಕಣಿಗಿಲೆ ಸೊಪ್ಪು, ಮೊಂಡುಗಳ್ಳಿಯ ಬೇರು, ಬಾಗೆಯ ಬೇರು, ಚಿತ್ರಮೂಲ, ಸೋಗದೆ, ವತ್ಸನಾಭಿ, ಕೋಳಿಕುಟುಮನ ಗೆಡ್ಡೆ, ಅನ್ನಭೇದಿ, ಅರಿದಳ, ಮಣಶಿಲೆ, ಹೊಂಗೆಬೀಜ, ತ್ರಿಕಟು, ತ್ರಿಫಲ, ಅರಿಸಿನ, ಮರದರಿಸಿನ, ಬಿಳಿಯ ಸಾಸಿವೆ, ವಿಡಂಗ, ತಗಚೆಯ (ಚಗಚೆ) ಬೀಜ – ಇವುಗಳನ್ನು ಸಮಭಾಗ ತೆಗೆದುಕೊಂಡು ಗೋಮೂತ್ರದೊಡನೆ ಅರೆದು ಕಲ್ಕ ತಯಾರಿಸಬೇಕು. ಕಲ್ಕಕ್ಕೆ (ತಿಲತೈಲ) ತೈಲ ಸೇರಿಸಿ ಪಾಕ ಮಾಡಿದರೆ ವಜ್ರಕ ತೈಲ ತಯಾರಾಗುತ್ತದೆ. ಇದರ ಅಭ್ಯಂಗ ಮಾಡಿದರೆ ಕುಷ್ಠರೋಗ ವಾಸಿಯಾಗುತ್ತದೆ.