ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಆರಂಭಕ್ಕೂ ಮುನ್ನ ಮಹಿಷಾ ದಸರಾ ವಿವಾದ ಉಂಟಾಗಿದ್ದು, ಇದೀಗ ಇಂದು ಟೌನ್ ಹಾಲ್ ನಲ್ಲಿ ಆಯೋಜಿಸಿರುವ ಮಹಿಷಾ ಉತ್ಸವಕ್ಕೆ ಚಾಲನೆ ದೊರೆತಿದೆ.
ಮಹಿಷಾ ದಸರಾ ವಿವಾದ ಹಿನ್ನೆಲೆ ಮೈಸೂರು ನಗರದಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದು, ಚಾಮುಂಡಿ ಬೆಟ್ಟಕ್ಕೆ ನಿರ್ಬಂಧ ಹೇರಲಾಗಿದೆ. ಇನ್ನು ಟೌನ್ ಹಾಲ್ ನಲ್ಲಿ ಮಾತ್ರ ಹಲವು ಷರತ್ತುಗಳನ್ನ ವಿಧಿಸಿ ಮಹಿಷಾ ಉತ್ಸವಕ್ಕೆ ಅನುಮತಿ ನೀಡಲಾಗಿತ್ತು. ಪ್ರತಿಭಟನೆ, ಮೆರವಣಿಗೆಗೆ ಅನುಮತಿ ನೀಡಿಲ್ಲ.
ಟೌನ್ ಹಾಲ್ ಸಮೀಪ ಮಹಿಷ ಉತ್ಸವ ನಡೆಯುತ್ತಿದ್ದು, ಉತ್ಸವದಲ್ಲಿ ‘ಮೈಹಿಷಾಸುರ ಪೋಸ್ಟರ್ ಪ್ರದರ್ಶನ ಮಾಡಲಾಗಿದೆ. ನಿಷೇಧಾಜ್ಞೆ ನಡುವೆಯೂ ಬೈಕ್ ರ್ಯಾಲಿ ಜೊತೆ ಮಹಿಷಾ ಟ್ಯಾಬ್ಲೋ ಕೂಡ ತರಲಾಗಿದ್ದು, ಟೌನ್ ಹಾಲ್ ನಲ್ಲಿ ‘ಮೈಸೂರು ಅಸ್ಮಿತೆಗಾಗಿ ಮಹಿಷ ಉತ್ಸವ’ ಎಂಬ ಶೀರ್ಷಿಕೆಯಡಿ ಕಾರ್ಯಕ್ರಮ ಆಯೋಜಿಸಲಾಗಿದೆ. ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.
ಕಾರ್ಯಕ್ರಮದಲ್ಲಿ ಜ್ಞಾನಪ್ರಕಾಶ ಸ್ವಾಮೀಜಿ, ಪ್ರೊ.ಕೆ.ಎಸ್ ಭಗವಾನ್, ಪ್ರೊ.ಮಹೇಶ್ ಚಂದ್ರಗುರು ಸೇರಿ ಹಲವಾರು ಮಂದಿ ಭಾಗಿಯಾಗಿದ್ದಾರೆ.














