ಮೈಸೂರು : ನಗರದಲ್ಲಿಂದು ಮಹಿಷ ದಸರಾ ಆಚರಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಚಾಮುಂಡಿ ಬೆಟ್ಟದಲ್ಲಿನ ಮಹಿಷಾಸುರ ಪ್ರತಿಮೆ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಮಾಡಿ ಪೊಲೀಸ್ ಆಯುಕ್ತರು ಆದೇಶಿಸಿದ್ದಾರೆ. ತಡರಾತ್ರಿ 12 ಗಂಟೆಯಿಂದಲೇ ಸೆ.25ರ ಬೆಳಗ್ಗೆ 6 ಗಂಟೆಯವರೆಗೂ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಯಾವುದೇ ಸಭೆ, ಸಮಾರಂಭ, ಮೆರವಣಿಗೆ ನಡೆಸುವಂತಿಲ್ಲ ಎಂದು ಆದೇಶಿಸಲಾಗಿದೆ.
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾದಲ್ಲಿ ಹತ್ತು ಹಲವು ಆಕರ್ಷಣೆಗಳು ಜನರನ್ನ ಕೈಬೀಸಿ ಕರೆಯುತ್ತಿವೆ. ಅದರಲ್ಲಿ ವಿಂಟೇಜ್ ಕಾರುಗಳ ಪ್ರದರ್ಶನ ಕೂಡ ಒಂದಾಗಿದೆ. ನಾವು ನೀವು ನೋಡಿರದ ಎಷ್ಟೋ ಅದ್ಬುತ ವಿಂಟೇಜ್ ಕಾರುಗಳ ಒಂದೇ ಜಾಗದಲ್ಲಿ ಕಾಣುಸಿಗುತ್ತೀರೋದು ವಿಶೇಷಯಾಗಿದೆ. ಮತ್ತೊಂದೆಡೆ ಯುವ ದಸರಾಕ್ಕೂ ಚಾಲನೆ ಸಿಕ್ಕಿದ್ದು, ಅರ್ಜುನ್ ಜನ್ಯ ಮ್ಯೂಸಿಕ್ ಕಲರವ ಮೋಡಿ ಮಾಡಿತ್ತು. ಇಂದು ಮಹಿಷ ದಸರಾ ಹಿನ್ನೆಲೆ ಚಾಮುಂಡಿ ಬೆಟ್ಟದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ನಾಡಹಬ್ಬ ಮೈಸೂರು ದಸರಾದ ಸಂಭ್ರಮ ಹಿಮ್ಮಡಿಯಾಗಿದ್ದು, ನಿತ್ಯ ಹತ್ತು ಹಲವು ವಿಶೇಷ ಕಾರ್ಯಕ್ರಮಗಳು ದಸರಾ ರಂಗನ್ನ ಹೆಚ್ಚಿಸುತ್ತಿವೆ. ಈ ಪೈಕಿ ವಿಂಟೇಜ್ ಕಾರುಗಳು ಪ್ರದರ್ಶನವು ಒಂದು. ಪ್ರತಿವರ್ಷದಂತೆ ಈ ವರ್ಷವು ವಿಂಟೇಜ್ ಕಾರುಗಳು ದಸರಾ ರಂಗನ್ನ ಹೆಚ್ಚಿಸಿದ್ದು, ಜನರನ್ನು ಆಕರ್ಷಿಸುತ್ತಿದೆ.
ಮೈಸೂರಿನ ಹೆಬ್ಬಾಳ ಕೈಗಾರಿಕ ಪ್ರದೇಶದಲ್ಲಿ ಆಯೋಜಿಸಿರುವ ಈ ಕಾರುಗಳ ಪ್ರದರ್ಶನದಲ್ಲಿ 1905ರ ಕಾರ್ ಮಾಡೆಲ್ ನಿಂದ 2025ರ ಮಾಡೆಲ್ ವರೆಗೂ ಕಾರುಗಳ ಕಾಣಸಿಗುತ್ತಿವೆ. ಇದರಲ್ಲಿ ಹಲವು ಕಾರುಗಳು ವಿದೇಶದಲ್ಲಿ ಮಾತ್ರ ಬಳಕೆಯಲ್ಲಿದ್ದಂತವು. ಕೆಲವು ರಾಜ ಮಹರಾಜರು ಬಳಸಿದ್ದ, ಐಷಾರಾಮಿ ಕಾರುಗಳು., ಇನ್ನೂ ಕೆಲವು ಭಾರತದ ರಸ್ತೆಗಳಲ್ಲಿ ಘರ್ಜಿಸಿ ಮರೆಯಾದವು.
ಪ್ರಮುಖವಾಗಿ ಯುಕೆ, ಯುಎಸ್, ಇಟಲಿ ಸೇರಿದಂತೆ ಹಲವು ದೇಶಗಳ ಕಾರುಗಳು. ಫೋರ್ಡ್ ಜಿಪಿಡಬ್ಲ್ಯೂ, ರೋಲ್ಸ್ ರಾಯ್, ಲ್ಯಾಂಡ್ ರೋವರ್, ಅಂಬಾಸಿಡರ್, ಬೆಡ್ ಫೋರ್ಡ್ ನಂತಹ ಹಲವು ಮರೆಯಾದ ಕಾರುಗಳು ಪ್ರದರ್ಶನದಲ್ಲಿ ಕಾಣಸಿಗುತ್ತಿವೆ. ಕಾರುಗಳ ಸಂಗ್ರಹ ಬಗ್ಗೆ ಮಾಲೀಕರಾದ ಸಾವಿತ್ರಿ ಗೋಪಿನಾಥ ಶೆಣೈ ಮಾತನಾಡಿ, ಇದು ನನ್ನ ಪತಿ ಹವ್ಯಾಸವಾಗಿದೆ.
ಹಲವು ವರ್ಷಗಳಿಂದ ನಾನಾ ದೇಶಗಳಿಂದ ಈ ಕಾರುಗಳನ್ನು ತಂದು ಸಂಗ್ರಹಿಸಲಾಗಿದೆ. ಇಲ್ಲಿ ಕೇವಲ ಕಾರ್ ಗಳು ಮಾತ್ರ ಅಲ್ಲದೇ ಹಳೆಯ ಬೈಕ್‌ಗಳೂ ಕಾಣಸಿಗುತ್ತಿವೆ. ಆರ್‌ಎಕ್ಸ್, ಜರ್ಮನ್ ಮಾಡೆಲ್ ಓಲ್ಡ್ ಬಿಎಂಡಬ್ಲ್ಯೂ ಬೈಕ್, ರಾಯಲ್ ಎನ್ಫಿಲ್ಡ್ ಓಲ್ಡ್, ಸೇರಿದಂತೆ ಹಲವು ಬೈಕ್ ಗಳು ಕೂಡ ಕಣ್ಮನ ಸೆಳೆಯುತ್ತಿವೆ.
ದಸರಾ ಅಂದ್ರೆ ಯುವ ದಸರಾನೆ ತುಂಬಾ ಫೇಮಸ್. ಇದೀಗ ಯುವ ದಸರಾ 2025ಕ್ಕೆ ಚಾಲನೆ ಸಿಕ್ಕಿದ್ದು 5 ದಿನಗಳ ಕಾಲ ಯುವದಸರಾ ಸಂಭ್ರಮಾಚರಣೆ ಇರಲಿದೆ. ನಿನ್ನೆ ಮೈಸೂರು ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ ಯುವ ದಸರಾ ಕಾರ್ಯಕ್ರಮಕ್ಕೆ ಚಾಲನೆ ಕೊಟ್ರು ಮೊದಲ ದಿನವಾದ ನಿನ್ನೆ ಅರ್ಜುನ್ ಜನ್ಯ ಮ್ಯೂಸಿಕ್ ಕಲರವ ಜೋರಾಗಿತ್ತು. ಬೆಂಗಳೂರು ಮೂಲದ ಲಗೋರಿ ಬ್ಯಾಂಡ್‌ಗೆ ಯುವಕರು ಕುಣಿದು ಕುಪ್ಪಳಿಸಿದರು ಎಂದು ಹೇಳಲಾಗಿದೆ.















