ಮನೆ ರಾಜ್ಯ ಮಕರ ಸಂಕ್ರಾಂತಿ; ಮೈಸೂರು-ಬೆಳಗಾವಿ ನಡುವೆ ವಿಶೇಷ ರೈಲು ಸಂಚಾರ

ಮಕರ ಸಂಕ್ರಾಂತಿ; ಮೈಸೂರು-ಬೆಳಗಾವಿ ನಡುವೆ ವಿಶೇಷ ರೈಲು ಸಂಚಾರ

0

ಮೈಸೂರು : ಮಕರ ಸಂಕ್ರಾಂತಿ ಹಬ್ಬ ಹಾಗೂ ಗಣರಾಜ್ಯೋತ್ಸವದ ಪ್ರಯುಕ್ತ ಪ್ರಯಾಣಿಕರ ಹೆಚ್ಚಿನ ದಟ್ಟಣೆಯನ್ನು ನಿಯಂತ್ರಿಸಲು ನೈಋತ್ಯ ರೈಲ್ವೆಯು ಮೈಸೂರು ಮತ್ತು ಬೆಳಗಾವಿ ನಡುವೆ ಮೂರು ಟ್ರಿಪ್‌ಗಳ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲು ನಿರ್ಧರಿಸಿದೆ.

ಮೈಸೂರು–ಬೆಳಗಾವಿ ವಿಶೇಷ ರೈಲು (ಸಂಖ್ಯೆ 06285): ಜನವರಿ 13, 16 ಮತ್ತು 23 ರಂದು ರಾತ್ರಿ 8:40ಕ್ಕೆ ಮೈಸೂರಿನಿಂದ ಹೊರಟು, ಮರುದಿನ ಬೆಳಗ್ಗೆ 10:30ಕ್ಕೆ ಬೆಳಗಾವಿ ತಲುಪಲಿದೆ.

ಬೆಳಗಾವಿ–ಮೈಸೂರು ವಿಶೇಷ ರೈಲು (ಸಂಖ್ಯೆ 06286): ಜನವರಿ 15, 18 ಮತ್ತು 26ರಂದು ಸಂಜೆ 5:30ಕ್ಕೆ ಬೆಳಗಾವಿಯಿಂದ ಹೊರಟು, ಮರುದಿನ ಬೆಳಗ್ಗೆ 6:15ಕ್ಕೆ ಮೈಸೂರು ತಲುಪಲಿದೆ.

ಈ ರೈಲುಗಳು ಎರಡೂ ದಿಕ್ಕುಗಳಲ್ಲಿ ಮಂಡ್ಯ, ಕೆಎಸ್ಆರ್ ಬೆಂಗಳೂರು, ಯಶವಂತಪುರ, ತುಮಕೂರು, ಅರಸೀಕೆರೆ, ಕಡೂರು, ಚಿಕ್ಕಜಾಜೂರು, ದಾವಣಗೆರೆ, ಹರಿಹರ, ಎಸ್‌ಎಸ್‌ಎಸ್ ಹುಬ್ಬಳ್ಳಿ, ಧಾರವಾಡ, ಅಲ್ನಾವರ, ಲೋಂಡಾ ಮತ್ತು ಖಾನಾಪುರ ನಿಲ್ದಾಣಗಳಲ್ಲಿ ನಿಲ್ಲಲಿವೆ.

ಈ ವಿಶೇಷ ರೈಲು ಒಟ್ಟು 23 ಬೋಗಿಗಳನ್ನು ಹೊಂದಿರಲಿದೆ. ಇದರಲ್ಲಿ ಎಸಿ 2-ಟೈರ್ ಕಮ್ ಎಸಿ 3-ಟೈರ್ (1), ಎಸಿ 3-ಟೈರ್ (3), ಸ್ಲೀಪರ್ ಕ್ಲಾಸ್ (13), ಸಾಮಾನ್ಯ ದ್ವಿತೀಯ ದರ್ಜೆ (4) ಮತ್ತು ಎಸ್‌ಎಲ್‌ಆರ್/ಡಿ (2) ಬೋಗಿಗಳು ಇರಲಿವೆ.