ಮನೆ ಅಪರಾಧ ಗೃಹಿಣಿ ಸ್ನಾನ ಮಾಡುವ ವಿಡಿಯೋ ಮಾಡಿ, ಬ್ಲ್ಯಾಕ್​ಮೇಲ್​: ದೂರು ದಾಖಲು

ಗೃಹಿಣಿ ಸ್ನಾನ ಮಾಡುವ ವಿಡಿಯೋ ಮಾಡಿ, ಬ್ಲ್ಯಾಕ್​ಮೇಲ್​: ದೂರು ದಾಖಲು

0

ಮೈಸೂರು(Mysuru): ಸ್ನಾನ ಮಾಡುವ ವಿಡಿಯೋ ಮಾಡಿ ಗೃಹಿಣಿಗೆ ಲೈಂಗಿಕ ದೌರ್ಜನ್ಯವೆಸಗಿರುವುದಲ್ಲದೇ ಹಣಕ್ಕಾಗಿ ಬ್ಲ್ಯಾಕ್​ಮೇಲ್ ಮಾಡುತ್ತಿದ್ದ ತಂದೆ ಮಗನ ವಿರುದ್ಧ ನಗರದ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಹೆಬ್ಬಾಳ್ ಬಡಾವಣೆಯ ನಿವಾಸಿ ಪ್ರಮೋದ್ ಹಾಗೂ ಆತನ ತಂದೆ ಗೋವಿಂದರಾಜು ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ದೂರಿನಲ್ಲೇನಿದೆ.?

ಸಂತ್ರಸ್ತೆಯ ಗಂಡ ಕೆಲಸಕ್ಕೆ ಹೋದ ಸಂದರ್ಭದಲ್ಲಿ ತಂದೆ – ಮಗ ಗೌಪ್ಯವಾಗಿ ಆಕೆಯ ಸ್ನಾನದ ವಿಡಿಯೋವನ್ನು ಪಕ್ಕದ ಮನೆಯಲ್ಲಿ ವಾಸವಾಗಿರುವ ತಂದೆ- ಮಗ ತಮ್ಮ ಮೊಬೈಲ್​ನಲ್ಲಿ ಚಿತ್ರಿಕರಿಸಿದ್ದಾರೆ. ಬಳಿಕ ಕಳೆದ ಎರಡು ವರ್ಷಗಳಿಂದ ವಿಡಿಯೋ ತೋರಿಸಿ ಸಂತ್ರಸ್ತೆ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಹಣಕ್ಕಾಗಿ ಬ್ಲ್ಯಾಕ್​ಮೇಲ್​ ಮಾಡುತ್ತಿದ್ದರು. ಹಣ ಕೊಡದಿದ್ದರೆ ಈ ವಿಡಿಯೋವನ್ನ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಹೆದರಿಸುತ್ತಿದ್ದರು. ಜೊತೆಗೆ ನನ್ನ ಗಂಡನಿಗೆ ಕಳುಹಿಸುವುದಾಗಿ ಬೆದರಿಸುತ್ತಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಇದರಿಂದ ರೋಸಿಹೋದ ಮಹಿಳೆ ಹೆಬ್ಬಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.